ತುಮಕೂರಿನಲ್ಲಿ ಮತ್ತೆ ಸತ್ಯಾಗ್ರಹ
ಕನ್ನಡಪ್ರಭ ವಾರ್ತೆ, ತುಮಕೂರು, ಡಿ.11
ತುಮಕೂರಿನ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವೀರಸೌಧ ಸಭಾಂಗಣದಲ್ಲಿ ಬೆಂಗಳೂರಿನ ಚಿತ್ರ ನಿರ್ದೇಶಕ ಶಿವಾನಂದ್ ಅವರು ಮಹಾತ್ಮಗಾಂಧೀಜಿಯವರ ಚಳವಳಿಯನ್ನು ಆಧರಿಸಿ ಮತ್ತೆ ಸತ್ಯಾಗ್ರಹ ಎಂಬ ಚಲನ ಚಿತ್ರದ ಚಿತ್ರೀಕರಣ ನಡೆದಿದೆ. ಮುಖ್ಯ ಭೂಮಿಕೆಯಲ್ಲಿರುವ ದತ್ತಣ್ಣ ಅವರು ಗಾಂಧೀಜಿ ಅವರ ಪಾತ್ರದಲ್ಲಿ ವೀರಘೋಷಣೆ ಬೋಲೋ ಭಾರತ್ ಮಾತಾಕಿ ಜೈ ಎಂದು ವೀರಸೌಧದಿಂದ ಹೊರಟು ನಗರದ ಟೌನ್‌ಹಾಲ್ ಮುಂಭಾಗ ಮತ್ತು
ಸ್ವಾತಂತ್ರ್ಯ ಚೌಕಗಳಲ್ಲಿ ಚಿತ್ತೀಕರಣದಲ್ಲಿ ಪಾಲ್ಗೊಂಡಿದ್ದರು. ಚಿತ್ರೀಕರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಜಿಲ್ಲಾ ಅಧ್ಯಕ್ಷ
ಡಿ.ಎನ್. ಸಂಪತ್‌ಕುಮಾರ್ ಅವರು ಉಪಾಧ್ಯಕ್ಷ ಟಿ.ಆರ್. ರೇವಣ್ಣ, ಕಾರ್ಯದರ್ಶಿ ಯತಿರಾಜು ನಾಯ್ಡು, ಯುವ ಕಾರ್ಯದರ್ಶಿ ಕೆ.ಆರ್.ಎಂ. ಸುದರ್ಶನ್, ತಿಪಟೂರು ಚನ್ನಕೇಶವ, ತು.ಮ.ಬಸವರಾಜು, ಚಿನ್ನಪ್ಪ., ಚಂದ್ರಶೇಖರ್ ವಾಸುದೇವ ಕುಮಾರ್, ಟಿ.ಬಿ. ಮೋಹನ್‌ಕುಮಾರ್, ಪುಟ್ಟಗಂಗಮ್ಮ, ಚಂದ್ರಬಾಯಿ, ಜಯಮ್ಮ ಮತ್ತು ಅನೇಕ ಸ್ವಾತಂತ್ರ್ಯಹೋರಾಟಗಾರರು ಅವರ ಕುಟುಂಬ ವರ್ಗದವರು ಹಾಜರಿದ್ದು, ಎಲ್ಲ ಸ್ವಾತಂತ್ರ್ಯ ಹೋರಾಟಗಾರರು ವೀರಸೌಧದಲ್ಲಿ ನೆರೆದಿದ್ದರು.