ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಮಹಿಳೆಯರಿಗೆ ಶಿಕ್ಷಣದೊಂದಿಗೆ ಅರಿವು ಅನಿವಾರ್ಯ '

Srinivasa Murthy VN
Updated On : 12 Dec 2013, 1:21 am

ಕೊರಟಗೆರೆ: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಲೈಂಗಿಕ ಕಿರುಕುಳ ಹಾಗೂ ಹೆಣ್ಣುಭ್ರೂಣಹತ್ಯೆಯಂತಹ ಪಿಡುಗು ತಡೆಯಬೇಕಾದರೆ ಮಹಿಳೆಯರಿಗೆ ಶಿಕ್ಷಣದೊಂದಿಗೆ ಅರಿವು ಮೂಡಿಸುವುದು ಅನಿವಾರ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಐ.ಎಸ್. ಮಹೇಶ್ ತಿಳಿಸಿದರು.
ಅವರು ಮದ್ದೂರು ತಾಲೂಕಿನ ಆರ್.ಕೆ.ಎಜ್ಯುಕೇಷನ್ ಇನ್‌ಸ್ಟೀಟ್ಯೂಷನ್ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಪಟ್ಟಣದ ಸಂನ್ಮೂಲ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ  ಲಿಂಗ ತಾರತಮ್ಯದ ತಲ್ಲಣಗಳೂ ಸಹಜವೂ-ಅಸಹಜವೂ ಎಂಬ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮುದಾಯದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಅಂಧಶ್ರದ್ಧೆಗಳಿಂದ ಸಮಾಜದಲ್ಲಿ ಮಹಿಳೆ ಕಿರುಕುಳಕ್ಕೆ ಒಳಗಾಗುತ್ತಿದ್ದು ಆಕೆ ಅನುಭವಿಸುತಿರುವ ಅಪಮಾನಕ್ಕೆ ಮಿತಿಯೇ ಇಲ್ಲದಂತಾಗಿದೆ ಇದಕ್ಕೆ ಮೂಲಕ ಕಾರಣ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡದಿರುವುದು, ಅವರಿಗೆ ಉತ್ತಮ ಭವಷ್ಯ ರೊಪಿಸದಿರುವುದು ಎಂದರು.
ಈ ಸಂದರ್ಭದಲ್ಲಿ ಡಯಟ್‌ನ ಉಪನ್ಯಾಸಕಿ ತಾರಾ, ಇಸಿಒ ಕೋಟೆಕಲ್ಲಪ್ಪ, ಎಚ್.ಎನ್. ಕೃಷ್ಣಪ್ಪ, ಆರ್.ಕೆ. ವಿದ್ಯಾಸಂಸ್ಥೆಯ ಜಯರಾಂ, ಸಂದೇಶ, ತಿಮ್ಮರಾಯಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಈ ಸಂವಾದ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಪ್ರೌಢಶಾಲೆಗಳಿಂದ ಆಗಮಿಸಿದ್ದ ಸುಮಾರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement