ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಾಲ್ಮೀಕಿ ನಾಯಕ ಜನಾಂಗಕ್ಕೆ ಶೇ.7 ಮೀಸಲು ನೀಡಿ

Srinivasa Murthy VN
Updated On : 12 Dec 2013, 1:21 am

ಕ.ಪ್ರ.ವಾರ್ತೆ ತುಮಕೂರು ಡಿ. 11
ರಾಜ್ಯ ಸರ್ಕಾರ ವಾಲ್ಮೀಕಿ ನಾಯಕ ಜನಾಂಗಕ್ಕೆ ಶೇ. 7 ರಷ್ಟು ಮೀಸಲಾತಿ ನೀಡಬೇಕು ಎಂದು ಸಂಜಯಕುಮಾರ ಸ್ವಾಮೀಜಿ ಆಗ್ರಹಿಸಿದರು.
ಅವರು ಶಿರಾ ತಾಲೂಕು, ಗೌಡಗೆರೆ ಹೋಬಳಿ ಚಂಗಾವರ ಗ್ರಾಮದಲ್ಲಿ ವಾಲ್ಮೀಕಿ ನಾಯಕ ಯುವಕರ ಸಂಘ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯದ ಯಾವುದಾದರೂ ವಿಶ್ವ ವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಡಲು ಒತ್ತಾಯಿಸಿದರು. ಹಾಗೂ ಜನಾಂಗದ  ಬಡವರಿಗೆ ಸೌಲಭ್ಯಗಳು ಸಿಗಬೇಕು ಎಂದರು.
 ಜನಾಂಗಕ್ಕೆ ಇನ್ನೊಬ್ಬರಿಗೆ ಮಂತ್ರಿ ಸ್ಥಾನ ನೀಡಬೇಕು. ಮೀಸಲಾತಿ ಜಾರಿಗೆ ತರಲು ಮೀನಾಮೇಷ ಏಣಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಉಚಿತ ಸಾಮೂಹಿಕ ವಿವಾಹಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕಿದೆ. ಬಡ ಮತ್ತು ಹಿಂದುಳಿದ ವರ್ಗಗಳ ಜನತೆಗೆ ತುಂಬಾ ಅನುಕೂಲವಾಗುತ್ತದೆ ಮತ್ತು ಹಣ ವ್ಯಯವಾಗುವುದಿಲ್ಲ. ಹಿಂದುಳಿದ ವರ್ಗದವರು ಶಿಕ್ಷಣಕ್ಕೆ ಒತ್ತು ನೀಡಬೇಕು ಮಕ್ಕಳನ್ನು ಒಳ್ಳೆಯ ವಿದ್ಯಾವಂತರಾಗಿಸಬೇಕು.  ಸಾಮೂಹಿಕ ವಿವಾಹದಲ್ಲಿ ಮದುವೆಯಾದವರೆಲ್ಲ ಒಂದೇ ಮಗು ಸಾಕು ಎರಡು ಬೇಡ ಎಂದು ನಿರ್ಧರಿಸಿ ಎಂದರು.
ಒಡೆದು ಆಳುವ ನೀತಿ: ಮಾಂಗಲ್ಯ ವಿತರಣೆ ಮಾಡಿ ಮಾತನಾಡಿದ ಸಮಾಜ ಸೇವಕ ಎಲ್.ನಾಗರಾಜು ಹಿಂದುಳಿದವರಲ್ಲಿ ಸಂಘಟನೆ ಕೊರತೆಯಿಂದಾಗಿ ಮೇಲ್ಜಾತಿಯವರು ನಮ್ಮನ್ನು ಒಡೆದು ಆಳುವ ರೀತಿ ಅನುಸರಿಸುತ್ತಿದ್ದಾರೆ. ವಾಲ್ಮೀಕಿ ಜನಾಂಗ ಆರ್ಥಿಕವಾಗಿ ಸದೃಢರಾಗಬೇಕು. ಜನಾಂಗದಲ್ಲಿ ಕೆಲವು ಜಾತಿಯ ಹೆಸರಿನ ಮೇಲೆ ಬೆಳೆದು ಮತ್ತೆ ಆ ಜನಾಂಗವನ್ನು ಹಿಂತಿರುಗಿ ನೋಡುವುದಿಲ್ಲ. ಇಂತಹ ಕೆಲಸಗಳು ಶೋಚನೀಯ  ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿ.ಪಂ. ಸದಸ್ಯ ಬಿ.ಕೆ.ಬಡೀರಣ್ಣ ಮಹರ್ಷಿ ವಾಲ್ಮೀಕಿಯವರು ರಾಮಾಯಣದಂತಹ ಮಹಾಗ್ರಂಥ ಬರೆದ ವ್ಯಕ್ತಿ. ಮಹಾನ್ ತಪಸ್ವಿಯಾದ ವಾಲ್ಮೀಕಿ ಪತ್ರಿಮೆಯನ್ನು ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಿಸಬೇಕೆಂದರು.
 ಬಿ.ಕೆ. ಮಂಜುನಾಥ್, ಕಲ್ಕೆರೆ ರವಿಕುಮಾರ್, ಟಿ. ರಮೇಶ್, ಕೆಂಚಮ್ಮ ವೆಂಕಟರಾಮಯ್ಯ, ಶಿವುಚಂಗಾವರ, ಮಾರಣ್ಣ, ಶಶಿಧರಗೌಡ, ಎ.ವಿ. ಅಕ್ಕಮ್ಮ, ವೆಂಕಟರಾಮಯ್ಯ, ಪ್ರಕಾಶ್, ಲಕ್ಷ್ಮೀಕಾಂತ, ಜೆ.ರಂಗಸ್ವಾಮಿ, ನಿಂಗಯ್ಯ, ಈ. ರಂಗಸ್ವಾಮಿ, ಬಿ.ರಾಮಯ್ಯ ರಾಮಾಂಜನೇಯ, ನಾಗರಾಜು, ಜಯರಾಮಯ್ಯ ರಘು, ಶ್ರೀರಂಗಪ್ಪ, ದೇವರಾಜು, ಎಸ್. ಕೃಷ್ಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement