ಉಚಿತ ಇಂಗ್ಲಿಷ್ ಅನುವಾದ ತರಬೇತಿ
ತುಮಕೂರು: ಅಶೋಕನಗರದ 5 ನೇ ಕ್ರಾಸ್ನಲ್ಲಿರುವ ಇಂಗ್ಲಿಷ್ ಅನುವಾದ ಸಂಸ್ಥೆ ಸಾರ್ವಜನಿಕರ ಅನುಕೂಲಕ್ಕಾಗಿ ಉಚಿತ ಅನುವಾದ ತರಬೇತಿ ಕಾರ್ಯಾಗಾರವನ್ನು ಡಿ.13 ರಂದು ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ವಕೀಲರಿಗೆ ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಇಂಗ್ಲಿಷ್ ಅನುವಾದ ಸಂಸ್ಥೆ, ತುಮಕೂರು ವಿವಿ ಎದುರು, ಅಶೋಕನಗರ 5 ನೇ ಕ್ರಾಸ್, ತುಮಕೂರು - 572102. ಮೊ. ನಂ. 9538845485 ಸಂಪರ್ಕಿಸುವಂತೆ ಕೋರಲಾಗಿದೆ.
ಅನ್ನ ಸಂತರ್ಪಣಾ ಕಾರ್ಯಕ್ರಮ
ತಿಪಟೂರು: ಪಟ್ಟಣದ ಕೆ.ಆರ್.ಬಡಾವಣೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾರವರ 58ನೇ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಮಹಾಮಂಗಳಾರತಿ ಹಾಗೂ ಸಂಜೆ 6.30ಕ್ಕೆ ಅನ್ನಸಂತರ್ಪಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.