ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವತಂತ್ರರಾಗಲಿ: ಸುಕನ್ಯಾ

Srinivasa Murthy VN
Updated On : 13 Dec 2013, 12:18 pm

ತುಮಕೂರು: ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವತಂತ್ರರಾದಾಗ ಮಾತ್ರ ಅವರು ಸ್ವಾವಲಂಬನೆಯ ಬದುಕನ್ನು  ಅನುಭವಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರವು ಅನೇಕ ಯೋಜನೆಗಳನ್ನು ತಂದಿದೆ. ಆ ಯೋಜನೆಗಳನ್ನು ಕಾರ್ಯಕೂಪಕ್ಕೆ ತರಲು ಜನಶಿಕ್ಷಣ ಸಂಸ್ಥೆಯು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದು ಜನಶಿಕ್ಷಣ  ಸಂಸ್ಥೆಯ ನಿರ್ದೇಶಕಿ ಸುಕನ್ಯಾ ತಿಳಿಸಿದರು. ಅವರು ಸಮೀಪದ ಅಗ್ರಹಾರದ ಲಕ್ಷ್ಮೀಕಾಂತ ದೇವಸ್ಥಾನದಲ್ಲಿ ಸಮರ್ಥ್ ಫೌಂಡೇಷನ್ ಹಾಗೂ ಜನಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಬ್ಯೂಟಿಷಿಯನ್ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದರ ಪ್ರಯೋಜನವನ್ನು ಮಹಿಳೆಯರು ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಮರ್ಥ್ ಫೌಂಡೇಷನ್ನಿನ ವ್ಯವಸ್ಥಾಪಕ ನಿರ್ದೇಶಕಿ ರಾಣಿ ಚಂದ್ರಶೇಖರ್ ಅವರು ಇಂದು ಹೆಣ್ಣುಮಕ್ಕಳ ಸ್ವಾವಲಂಬನೆಯು ಅವಶ್ಯಕ ಮಾತ್ರವಲ್ಲ, ಅನಿವಾರ್ಯವಾಗಿದೆ. ಏಕೆಂದರೆ ಸಮಾಜದ ಓಟಕ್ಕೆ ತನ್ನನ್ನು ತಾನು ಸಿದ್ಧ ಮಾಡಿಕೊಳ್ಳುವ ನಿಟ್ಟಿನಲ್ಲಿ ಅವಳು ಸದೃಢವಾಗಲೇ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಫೌಂಡೇಷನ್ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದರು. ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ನಗರಸಭಾ ಸದಸ್ಯ ಟಿ.ಆರ್. ನಾಗರಾಜು ಅವರು ಇಂತಹ ಯಾವುದೇ ಜನಪರ ಕಾರ್ಯಕ್ರಮಗಳನ್ನು ಮಾಡಲು ಸದಾ ನನ್ನ ಬೆಂಬಲ ಇದ್ದೇ ಇರುತ್ತದೆ. ಎಂದು ಹೇಳಿದರು. ಸ್ಥಳೀಯ ಮುಖಂಡರಾದ ಪ್ರಮೀಳ ನಾಗೇಶ್  ಹಾಗೂ ಮಂಜುಳ ಅವರು ಮಾತನಾಡುತ್ತಾ ಶಿಬಿರಾರ್ಥಿಗಳಿಗೆ ತಮ್ಮ ಸಲಹೆ ಸೂಚನೆಗಳನ್ನು ನೀಡುತ್ತಾ ಶಿಬಿರದ ಯಶಸ್ಸಿಗೆ ಕಾರಣರಾಗಬೇಕೆಂದು ಹೇಳಿದರು. ತರಬೇತಿ ಶಿಬಿರದ ಶಿಕ್ಷಕಿ ಚೇತನ, ಇಂದಿರ, ಕಮಲ, ಲತಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ಸ್ವಯಂಪ್ರಭಾ ಮತ್ತು ತಂಡದವರು ಪ್ರಾರ್ಥಿಸಿದರು,  ಸುಭದ್ರ ನಿರೂಪಿಸಿದರು, ಕಮಲ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement