ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಾತೃ ಭಾಷೆಗೆ ಪ್ರಾಮುಖ್ಯತೆ ನೀಡಿ: ರಾಜಣ್ಣ

Srinivasa Murthy VN
Updated On : 17 Dec 2013, 11:45 am

ಕ.ಪ್ರ.ವಾರ್ತೆ ಕೊರಟಗೆರೆ ಡಿ.17
ನಮ್ಮ ನೆರೆಯ ರಾಜ್ಯಗಳು ಅವರ ಮಾತೃ ಭಾಷೆಗೆ ನೀಡಿರುವ ಪ್ರಾಮುಖ್ಯತೆಯನ್ನು ನಾವು ನಮ್ಮ ಭಾಷೆಗೆ ನೀಡುವ ಮೂಲಕ ನಾವು ಕನ್ನಡಿಗರು ಎಂದು ಹೇಳಬೇಕು ಎಂದು ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು.
ಅವರು ತಾಲೂಕಿನ ಕೃಷ್ಣರಾಜಪುರದಲ್ಲಿ ಸಿರಿಕನ್ನಡ ಕಲಾ ಮತ್ತು ಕ್ರೀಡಾ ಸಂಘದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇತರೆ ಭಾಷೆಗಳನ್ನು ಕಲಿಯಬೇಕು. ಆದರೆ ಮಾತೃಭಾಷೆಗೆ ಪ್ರಥಮ ಆಧ್ಯತೆ ನೀಡಬೇಕು ಎಂದು ಹೇಳಿದರು.
ಈಗಾಗಲೇ ಬೆಂಗಳೂರಿನಲ್ಲಿ ಸರ್ಕಾರ ಒಂದು ಸರ್ವೆ ಪ್ರಕಾರ ಕೇವಲ ಶೇ.32 ರಷ್ಟು ಕನ್ನಡ ಮಾತನಾಡುವವರು ಬೆಂಗಳೂರಿನಲ್ಲಿದ್ದಾರೆ ಇನ್ನು ಕೆಲವು ವರ್ಷದಲ್ಲಿ ನಮ್ಮ ರಾಜಧಾನಿಯಲ್ಲಿ ಕನ್ನಡ ಮಾತನಾಡುವವರನ್ನು ಹುಡುಕುವಂತಾಗುತ್ತದೆ ಎಂದು ವಿಷಾದಿಸಿದರು.
ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಜಂಪೇನಹಳ್ಳಿ ನರಸಿಂಹರಾಜು ಮಾತನಾಡಿ ನಮ್ಮ ಬಯಲು ಸೀಮೆ  ಆರ್ಥಿವಾಗಿ ಬಹಳಷ್ಟು ಹಿಂದೆ ಉಳಿಯಲು ಮುಖ್ಯಕಾರಣ ಇಲ್ಲಿ ಯಾವುದೇ ಶಾಶ್ವತ ನೀರಾವರಿ ಯೋಜನೆ ಇಲ್ಲದಿರುವುದು. ಇದರಿಂದ ತುಮಕೂರು ಜಿಲ್ಲೆಯ ಎಲ್ಲಾ ಶಾಸಕರು ಸೇರಿ ಶಾಶ್ವತ ನೀರಾವರಿಗಾಗಿ ಹೋರಾಟ ಮಾತಿ ಇಲ್ಲಿನ ರೈತರ ಸಂಕಷ್ಟ ತೀರಿಸಬೇಕು ಎಂದು  ಮನವಿ ಮಾಡಿದರು.
 ಜಿ.ಪಂ ಸದಸ್ಯ ಪ್ರಸನ್ನಕುಮಾರ್, ತಾ.ಪಂ ಸದಸ್ಯ ಬಸವರಾಜು, ಗ್ರಾ.ಪಂ ಅಧ್ಯಕ್ಷ ವಸಂತ ಗೀತಾ, ಉಪಾಧ್ಯಕ್ಷ ರಾಮಣ್ಣ,  ಸದಸ್ಯರಾದ ವೆಂಕಟಪ್ಪ, ರವಿಕುಮಾರ್, ಸಣ್ಣಕಾಮಯ್ಯ,ರಂಗಮ್ಮ, ಮುಖಂಡರಾದ ಬುಕ್ಕಪಟ್ಟಣದ ಜಯರಾಮಯ್ಯ, ಬಾಬು ಪುನೀತ್, ಮಂಜುನಾಥ್ ಇತರರು ಇದ್ದರು.

ಇಂದು ಪ್ರತಿಭಾ ಪುರಸ್ಕಾರ, ಶಾಸಕ ರಾಜಣ್ಣಗೆ ಸನ್ಮಾನ
ಕ,ಪ್ರ,ವಾರ್ತೆ ಮಧುಗಿರಿ ಡಿ.17

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮಧುಗಿರಿ ತಾಲೂಕು ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸರ್ಕಾರಿ ನೌಕರರ ನಡತೆ ನಿಯಮಗಳು ಮತ್ತು ನಾಗರಿಕ ಸೇವಾ ನಿಯಮಗಳು ಎಂಬ ವಿಷಯಗಳ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಡಿ.18 ರ ಬುಧವಾರ ಬೆಳಿಗ್ಗೆ 10.30 ರಿಂದ ಸಂಜೆ 4ರವರೆಗೆ ಏರ್ಪಡಿಸಲಾಗಿದೆ.
12.30ಕ್ಕೆ ಪ್ರತಿಭಾ ಪುರಸ್ಕಾರ ಹಾಗೂ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಅದ್ಧೂರಿ ಸನ್ಮಾನ ಕಾರ್ಯಕ್ರಮವನ್ನು   ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಎಂ.ಮಂಜುನಾಥ್ ಮತ್ತು ಅಧ್ಯಕ್ಷ ಎನ್. ಮಹಾಲಿಂಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತರಬೇತಿ ಕಾರ್ಯಾಗಾರವನ್ನು ತಹಸೀಲ್ದಾರ್ ರಮೇಶ್ ಉದ್ಘಾಟಿಸುವರು. ಡಿಡಿಪಿಐ ಟಿ.ಎಸ್. ಆಂಜನಪ್ಪ ಅಧ್ಯಕ್ಷತೆ ವಹಿಸುವರು. ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎನ್. ರಾಮಕೃಷ್ಣಯ್ಯ ಉಪಸ್ಥಿತರಿರುವರು. ಮುಖ್ಯ ಅತಿಥಿ ಅಬಕಾರಿ ಇಲಾಖೆ ಉಪಾಧೀಕ್ಷಕ ಎಂ.ಡಿ. ಜಯರಾಮೇಗೌಡ, ತಾ.ಪಂ.ಇಓ ಮಹಾಲಿಂಗಯ್ಯ, ಸಬ್ ಇನ್ಸ್‌ಪೆಕ್ಟರ್ ಎಂ. ಅಂಬರೀಶ್, ಮುಖ್ಯಾಧಿಕಾರಿ ಕೆ.ಶುಭ, ಸಹಾಯಕ ಕೃಷಿ ಅಧಿಕಾರಿ ದೀಪಶ್ರೀ ಸೇರಿದಂತೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಭಾದವಹಿಸುವರು.
12-30ಕ್ಕೆ ಶಾಸಕ ಕೆ.ಎನ್.ರಾಜಣ್ಣ ಕಾರ್ಯಕ್ರಮ ಉದ್ಘಾಟಿಸುವರು. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್. ಭೈರಪ್ಪ ಪಿಯುಸಿ ವಿದ್ಯಾರ್ಥಿಗಳಿಗೆ ಪುರಸ್ಕರಿಸುವರು. ಜಿಲ್ಲಾಧ್ಯಕ್ಷ ಜಿ.ಎಂ.ಸಣ್ಣ ಮುದ್ದಯ್ಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪುರಸ್ಕರಿಸುವರು.ಎಸಿ ತಬಸ್ಸುಮ್ ಜುಹೇರಾ, ಪುರಸಭೆ ಅಧ್ಯಕ್ಷ
ಎನ್. ಗಂಗಣ್ಣ, ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಂ. ಪಟೇಲ್ ಪಾಂಡು, ಖಜಾಂಚಿ ಯೋಗಾನಂದ್, ಕಿರುತೆರೆ ಮತ್ತು ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ರವಿ ಆರ್. ಗರಣಿ ವಿದ್ಯಾರ್ಥಿಗಳಿಗೆ ಹಿತವಚನ ನೀಡುವರು.
ತಾಲೂಕು ಅಧ್ಯಕ್ಷ ಎನ್. ಮಹಾಲಿಂಗೇಶ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿ ಡಿವೈಎಸ್ಪಿ ಜಿ. ಗುರುಸ್ವಾಮಿ, ಎಇಇ ಜಯಪ್ರಕಾಶ್ ಮೊದಲಾದ ಗಣ್ಣಯರು ಭಾಗವಹಿಸಲಿದ್ದಾರೆ ಎಂದು ಮಂಜುನಾಥ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement