ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಗೊಲ್ಲರ ಬೇಡಿಕೆಗೆಸ್ಪಂದಿಸುವವರಿಗೆ ಮಾತ್ರ ಮತ'

Srinivasa Murthy VN
Updated On : 20 Dec 2013, 12:58 pm

ಕನ್ನಡಪ್ರಭ ವಾರ್ತೆ ತುಮಕೂರು ಡಿ.19
ಗೊಲ್ಲ ಸಮುದಾಯಕ್ಕೆ ಸ್ಪಂದಿಸುವ ಪಕ್ಷಕ್ಕೆ ಮಾತ್ರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ ನೀಡುವಂತೆ ಜಿಲ್ಲಾ ಯಾದವ ಸಂಘದ ಅಧ್ಯಕ್ಷ ತೀರ್ಥ ಕುಮಾರ್ ಜನಾಂಗಕ್ಕೆ ಕರೆ ನೀಡಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾದವ ಸಮಾಜದ ಸಮಸ್ಯೆಗಳಿಗೆ ಸರಕಾರ ಸರಿಯಾಗಿ  ಸ್ಪಂದಿಸುತ್ತಿಲ್ಲ. ಸಮುದಾಯದ ಅಭಿವೃದ್ಧಿಗೆ ಪೂರಕವಾದಂತಹ ಯಾವುದೇ ಯೋಜನೆಗಳನ್ನು ಜಾರಿಗೊಳಿಸುತ್ತಿಲ್ಲ.  ಕೇವಲ ಓಟಿಗಾಗಿ ಮಾತ್ರ ಗೊಲ್ಲ ಸಮುದಾಯವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ವ್ಯಕ್ತಿಗಳಿಗೆ ಮಾತ್ರ ಮತ ನೀಡುತ್ತೇವೆ. ಮೀಸಲಾತಿ ವಿಷಯದಲ್ಲಿಯೂ ಸಹ ಸರ್ಕಾರಗಳು ಅನ್ಯಾಯ ಮಾಡುತ್ತಿವೆ ಎಂದು ಕಿಡಿ ಕಾರಿದರು. ಇಂದಿಗೂ ಯಾದವ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ. ಸರಕಾರದಿಂದ ಸರಿಯಾಗಿ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.
ವಿವಿಯಲ್ಲಿ ಪ್ರತ್ಯೇಕ ಹಾಸ್ಟೆಲ್ ನೀಡಲಿ: ತುಮಕೂರು ವಿಶ್ವವಿದ್ಯಾಲಯದಲ್ಲಿ ಯಾದವ ಸಮುದಾಯಕ್ಕೆ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯವಿಲ್ಲ. ಸರ್ಕಾರ ಇತ್ತ ಗಮನ ಹರಿಸಿ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ಯಾದವ ಹಾಸ್ಟೆಲ್ ಆರಂಭಿಸುವಂತೆಯೂ ಅವರು ಒತ್ತಾಯಿಸಿದರು.
ಶ್ರೀ ಕೃಷ್ಣ ಜನ್ಮಾಷ್ಠಮಿಗೂ ರಜೆ ಘೋಷಿಸಲಿ: ವಾಲ್ಮೀಕಿ ಜಯಂತಿ, ಕನಕ ಜಯಂತಿ, ಬಸವ ಜಯಂತಿಯಂತೆ ಶ್ರೀಕೃಷ್ಣ ಜನ್ಮಾಷ್ಠಮಿಗೂ ಸರ್ಕಾರ ರಜೆ ಘೋಷಣೆ ಮಾಡಿ ಆಚರಣೆ ಮಾಡಬೇಕು ಎಂದು ತೀರ್ಥಕುಮಾರ್ ಇದೇ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಶ್ರೀಕೃಷ್ಣ ಕೇವಲ ಒಂದು ವರ್ಗದ ಪ್ರತಿನಿಧಿಯಲ್ಲ. ಎಲ್ಲ ವರ್ಗಗಳು ಪೂಜೆ ಮಾಡುವ ದೈವರು. ಹೀಗಾಗಿ ಕೃಷ್ಣ ಜನ್ಮಾಷ್ಠಮಿಗೂ ಸರ್ಕಾರ ರಜೆ ಘೋಷಿಸಲಿ ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಯುವ ಯಾದವ ಸಂಘದ ಉಪಾಧ್ಯಕ್ಷ ನೇತ್ರಾನಂದ್ ಯಾದವ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement