ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಿವೃತ್ತ ನೌಕರರ ಸಂಘದ ಕಾರ್ಯ ಶ್ಲಾಘನೀಯ

Srinivasa Murthy VN
Updated On : 20 Dec 2013, 12:59 pm

ಕನ್ನಡಪ್ರಭ ವಾರ್ತೆ ತಿಪಟೂರು ಡಿ.19
ತಾಲೂಕಿನಲ್ಲಿ 1500ಕ್ಕೂ ಹೆಚ್ಚು ನಿವೃತ್ತ ನೌಕರರು ಇದ್ದು, ಅವರೆಲ್ಲಾ ಒಂದೇ ಕಡೆ ಕುಳಿತು ತಮ್ಮ ಅನುಭವ ಮತ್ತು ಕಷ್ಟ ಸುಖಗಳನ್ನು ಹಂಚಿಕೊಳ್ಳುವುದರ ಮೂಲಕ ಸಂಘದ ಚಟುವಟಿಕೆ ಮತ್ತು ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ಪಟ್ಟಣದ ಕೆ.ಆರ್.ಬಡಾವಣೆಯ ಗುರುಕುಲಾನಂದಾಶ್ರಮದಲ್ಲಿ ರಾಜ್ಯ ನಿವೃತ್ತ ನೌಕರರ ಸಂಘ ತಾಲೂಕು ಶಾಖೆಯ ವತಿಯಿಂದ ನಿವೃತ್ತ ನೌಕರರ ದಿನಾಚರಣೆ ಹಾಗೂ ಹಿರಿಯ ನೌಕರರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮನುಷ್ಯನಿಗೆ ವಯಸ್ಸು ಹೆಚ್ಚಾದಂತೆ ತಮ್ಮ ಆರೋಗ್ಯದ ಕಡೆ ಗಮನ ಹರಿಸುವುದು ಅಗತ್ಯ. ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿ 70ವರ್ಷ ದಾಟಿರುವ ಹಿರಿಯ ಚೇತನಗಳಿಗೆ ಪ್ರತಿ ವರ್ಷ ಸಂಘದವರು ಸನ್ಮಾನಿಸುತ್ತಿರುವುದು ಶ್ಲಾಘನೀಯ. ಹಾಗೆಯೇ ನಿವೃತ್ತ ನೌಕರರ ಸಹಕಾರ ಸಂಘವನ್ನು ಸದೃಢವಾಗಿ ಬೆಳೆಸುತ್ತಿರುವುದೂ ಶ್ಲಾಘನೀಯ ಎಂದರು.
ಸಮಸ್ಯೆಗೆ ಪರಿಹಾರ: ಬಿಇಓ ಪ್ರಭುಸ್ವಾಮಿ ಮಾತನಾಡಿ ತುಂಬು ಜೀವನ ನಡೆಸಿ ನಿವೃತ್ತಿ ಹೊಂದಿ  ಇಂತಹ ಕಾರ್ಯಕ್ರಮ ನಡೆಸುವುದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಬಲರಿಗೆ ಸಹಾಯ ಹಸ್ತ ಮತ್ತು ಸಹಕಾರದ ನೆರವು ಈ ಸಂಘ ನೀಡಲಿದೆ. ನಿಮ್ಮಲ್ಲಿರುವ ಜ್ಞಾನ ಹೊಸ ಚಿಗುರಿಗೆ ಹಳೇ ಬೇರು ಇದ್ದ ಹಾಗೆ. ಇದನ್ನು ಸಮಾಜ ಪರಿವರ್ತನೆ ಕಾರ್ಯಕ್ಕೆ ಬಳಸಿದರೆ ಯುವಶಕ್ತಿ ಜಾಗೃತಿಗೊಳಿಸಲು ಸಹಾಯವಾಗಲಿದೆ ಎಂದರು. ಸಂಘದ ಜಿಲ್ಲಾಧ್ಯಕ್ಷ ಎಂ.ಆರ್.ಬೋಬಡೆ ಮಾತನಾಡಿ ತಿಪಟೂರು ನಿವೃತ್ತ ನೌಕರರು ಸಂಘವನ್ನು ಜಿಲ್ಲೆಯಲ್ಲಿಯೇ ಮಾದರಿಯಾಗಿ ಬೆಳೆಸುತ್ತಿದೆ ಎಂದರು.
ಭಾಗವಹಿಸಿ: ತಾ.ಅಧ್ಯಕ್ಷ ಜಿ.ಟಿ.ಶಂಕರೇಗೌಡ ಮಾತನಾಡಿ ತಾಲೂಕಿನಲ್ಲಿ ನಿವೃತ್ತಿಯಾಗಿರುವ ಎಲ್ಲರೂ ಸಂಘಕ್ಕೆ ಸದಸ್ಯರಾಗಿ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಬೇಕಲ್ಲದೆ ಸಂಘವನ್ನು ಸದೃಢವಾಗಿ ಕಟ್ಟಿಬೆಳೆಸಲು ಸಹಕಾರ ನೀಡಬೇಕೆಂದು ಕರೆ ನೀಡಿದರು. ಮುಂದಿನ ದಿನಗಳಲ್ಲಿ ಸಂಘವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಲ್ಲದೆ ಸಂಘದ ಬೆಳವಣಿಗೆಗೆ ಸಹಕರಿಸುತ್ತಿರುವ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ನೌಕರರಿಗೆ ಸಾರಿಗೆ, ಆಸ್ಪತ್ರೆ ಸೌಲಭ್ಯದ ರಿಯಾಯಿತಿ ಗುರುತಿನ ಚೀಟಿ ನೀಡಲಾಯಿತು. ಪಾರ್ಥಸಾರಥಿ ವರದಿ ಮಂಡಿಸಿದರು. ಖಜಾಂಚಿ ಚನ್ನಬಸವಯ್ಯ ಲೆಕ್ಕಪತ್ರ ಮಂಡಿಸಿದರು. ವಿ.ಎಲ್.ಮಹಾದೇವಯ್ಯ ಸಂಘದ ಕಾರ್ಯಚಟುವಟಿಕೆಯ ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement