ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಬದುಕಿನ ಸಾರ್ಥಕತೆಗೆ ಸತ್ಸಂಗ ಅಗತ್ಯ'

Srinivasa Murthy VN
Updated On : 20 Dec 2013, 12:59 pm

ಹಾಸನ: ಬದುಕಿನಲ್ಲಿ ಸಾರ್ಥಕತೆ ಪಡೆಯಲು ಸತ್ಸಂಗ ಬಹಳ ಅಗತ್ಯ ಎಂದು ಮಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು. ನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಇತ್ತೀಚೆಗೆ ನಡೆದ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಹುಣ್ಣಿಮೆ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಶ್ರೀಗಳು, ಒಳ್ಳೆಯವರ ಸಹವಾಸದಿಂದ ಕೆಟ್ಟವರೂ ಒಳ್ಳೆಯವರಾಗುವ ಅವಕಾಶಗಳಿರುತ್ತವೆ. ಆದ್ದರಿಂದ ಬದುಕಿನಲ್ಲಿ ಸತ್ಸಂಗ ಬಹಳ ಮುಖ್ಯ ಎಂದರು.
ಜಗತ್ತಿನ ಎಲ್ಲ ಪ್ರಾಣಿ, ಪಕ್ಷಿ, ಗಿಡಮರಗಳು ತಮ್ಮ ಕರ್ತವ್ಯವನ್ನು ಚಾಚೂ ತಪ್ಪದೆ ನಿರ್ವಹಿಸುತ್ತಿವೆ. ನಿಸರ್ಗದ ನಿಯಮದಂತೆ ನಡೆದುಕೊಳ್ಳುತ್ತಿವೆ. ಆದರೆ ವಿವೇಚನಾ ಶಕ್ತಿ ಇರುವ ಮನುಷ್ಯ ಮಾತ್ರ ಕರ್ತವ್ಯದಿಂದ ವಿಮುಖನಾಗಿ ಪ್ರಾಣಿಗಳಿಗಿಂತಲೂ ಕಡೆಯಾಗುತ್ತಿದ್ದಾನೆ. ನಿಸರ್ಗ ವಿರೋಧಿ ಚಟುವಟಿಕೆಗಳಿಂದ ಮನುಕುಲಕ್ಕೆ ಕಂಟಕನಾಗುತ್ತಿದ್ದಾನೆ ಎಂದು ವಿಷಾದಿಸಿದರು. ಅಜ್ಞಾನ, ಅಂಧಕಾರ ಮತ್ತು ಮೌಢ್ಯದಲ್ಲಿ ಮುಳುಗಿರುವ ಮನುಷ್ಯನು ಸರಿದಾರಿಯಲ್ಲಿ ನಡೆಯಲು ಗುರುವಿನ ಮಾರ್ಗದರ್ಶನ ಅಗತ್ಯ.
ಗುರುವಿನ ಮಾರ್ಗದರ್ಶನವಿಲ್ಲದೆ ಗುರಿ ಸಾಧಿಸುವುದು ಕಷ್ಟ. ಭಾರತೀಯ ಸಂಸ್ಕತಿಯಲ್ಲಿ ಗುರು- ಶಿಷ್ಯ ಪರಂಪರೆ ಬಹಳ ವಿಶಿಷ್ಟವಾದುದು. ಸೋಮಾರಿಯಾದವರೊಂದಿಗೆ ಸೋಲಿನ ಜತೆಗೆ ಹಲವಾರು ರೋಗಗಳೂ ಗೆಳೆತನ ಬೆಳೆಸುತ್ತವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement