ಮಧುಗಿರಿಯಲ್ಲಿ ನೂತನ ಸಹಾಯಕ ಸಾರಿಗೆ ಕಚೇರಿ
ಮಧುಗಿರಿ: ಸಾರ್ವಜನಿಕರ ಹಿತದೃಷ್ಟಿಯಿಂದ ಮಧುಗಿರಿಯಲ್ಲಿ ನೂತನ ಸಹಾಯಕ ಸಾರಿಗೆ ಕಚೇರಿಯನ್ನು ಡಿ.30 ರಂದು ಪ್ರಾರಂಭಿಸಲಾಗುವುದು ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಬುಧವಾರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಮಾರುಕಟ್ಟೆ ಆವರಣದಲ್ಲಿರುವ ಈಗ್ಗೆ 25 ವರ್ಷ ಅನುಪಯುಕ್ತಗೊಂಡಿದ್ದ ಬ್ಯಾಂಕಿನ ಕಟ್ಟಡದ ದಾಖಲೆಯನ್ನು ಹಸ್ತಾಂತರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿ ಈ ವಿಷಯ ತಿಳಿಸಿದ ಅವರು, ಡಿ. 30ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಕಚೇರಿಯನ್ನು ಲೋಕಾರ್ಪಣೆ ಮಾಡಲಿದ್ದು,ಇದೇ ಸಂದರ್ಭದಲ್ಲಿ ಎಪಿಎಂಸಿ ಹಮಾಲರಿಗೆ ನಿವೇಶನದ ಹಕ್ಕು ಪತ್ರ ಹಂಚಲಾಗುವುದು. ಜೊತೆಗೆ ಕೆಎಸ್ಆರ್ಟಿಸಿ ಡಿಪೋ ಆರಂಭಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು. ಪುರಸಭೆ ಅಧ್ಯಕ್ಷ ಎನ್. ಗಂಗಣ್ಣ, ಎಪಿಎಂಸಿ ಸದಸ್ಯ ಪಿ.ಸಿ.ಕೃಷ್ಣಾರೆಡ್ಡಿ, ಜಿ.ಆರ್. ಶ್ರೀನಾಥ್, ಪುರಸಭೆ ಸದಸ್ಯ ಎಂ.ಎಸ್. ಚಂದ್ರಶೇಖರ್, ಮಾಜಿ ಅಧ್ಯಕ್ಷ ಆರ್.ಸಿ. ವಿಜಯ್ಕುಮಾರ್ ಜೈನ್, ಎಂ.ವಿ.ಗೋವಿಂದರಾಜು,ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಗುಟ್ಟೆ ಚಿಕ್ಕರಂಗಪ್ಪ, ಟಿ.ರಾಮಣ್ಣ, ಕಾರ್ಯದರ್ಶಿ ಎಂ. ನಾಗೇಂದ್ರಕುಮಾರ್ ಅನೇಕರು ಉಪಸ್ಥಿತರಿದ್ದರು.