ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಾಡುಗೊಲ್ಲರಿಗೆ ವಸತಿ: ಮನವಿ

Srinivasa Murthy VN
Updated On : 21 Dec 2013, 11:48 am

ಕ.ಪ್ರ.ವಾರ್ತೆ ತುಮಕೂರು ಡಿ. 21
ತುಮಕೂರು ಜಿಲ್ಲೆಯ ಕಾಡುಗೊಲ್ಲ ಜನಾಂಗದ ವಸತಿ ರಹಿತರಿಗೆ ವಸತಿ ಸೌಕರ್ಯ ನೀಡಬೇಕು ಎಂದು ರಾಜ್ಯ  ಕಾಡುಗೊಲ್ಲರ ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಬಿ. ಚಿಕ್ಕಪ್ಪಯ್ಯ ಅವರು ತುಮಕೂರಿನ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013-14 ನೇ ಸಾಲಿನ ಬಜೆಟ್‌ನಲ್ಲಿ ಅಲೆಮಾರಿ-ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿಗೆ 50 ಕೋಟಿ ರು. ನಿಗ್ಟಜಿ ಮಾಡಿದ್ದಾರೆ. ಇದರಿಂದ ಬಡ ಗ್ರಾಮೀಣ ಬುಡಕಟ್ಟು ಲಕ್ಷಣವುಳ್ಳ ಕಾಡುಗೊಲ್ಲರು ಈ ಯೋಜನಾ ವ್ಯಾಪ್ತಿಗೆ ಸೇರುತ್ತಾರೆ. ಈ ಯೋಜನೆಯಡಿ ವಸತಿ ಕಲ್ಪಿಸಬೇಕು ಎಂದು ಚಿಕ್ಕಪ್ಪಯ್ಯ ಅವರು ತಿಳಿಸಿದರು.
ಗ್ರಾಮಗಳಿಂದ ಪ್ರತ್ಯೇಕವಾದ ಗೊಲ್ಲರಹಟ್ಟಿಗಳಲ್ಲಿ ವಾಸಿಸುತ್ತಿರುವ ಕಾಡುಗೊಲ್ಲರಿಗೆ ವಸತಿಯ ಜತೆಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಇಂದಿಗೂ ಸಹ ಜಿಲ್ಲೆಯ ಗೊಲ್ಲರಹಟ್ಟಿಗಳಲ್ಲಿ ಕಾಡುಗೊಲ್ಲರು ಹೆಚ್ಚು ಮಂದಿ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಈ ಹಟ್ಟಿಗಳಲ್ಲಿ ಮೂಲಭೂತ ಸೌಲಭ್ಯಗಳಾದ ಬೀದಿ ದೀಪ, ಕುಡಿಯುವ ನೀರು, ರಸ್ತೆ, ಚರಂಡಿ, ಶೌಚಾಲಯ ಸೇರಿದಂತೆ ಮತ್ತಿತರವುಗಳು ಇಲ್ಲದೆ ಕಾಡುಗೊಲ್ಲರು ನರಳುತಿದ್ದಾರೆ. ವಿವಿಧ ಸಮಸ್ಯೆಯಿಂದ ಬಳುತ್ತಿದ್ದಾರೆ ಎಂದು ಅವರು ವಿವರಿಸಿದರು.
ಇತ್ತೀಚೆಗೆ ನಮ್ಮ ಸಮಿತಿಯ ಸದಸ್ಯರು ಜಿಲ್ಲೆಯ ಶಿರಾ ತಾಲೂಕಿನ ಎಲ್ಲಾ ಗೊಲ್ಲರಹಟ್ಟಿಗಳ ಮೂಲಭೂತ ಸೌಲಭ್ಯಗಳ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿದೆ. ಶಿರಾ ತಾಲ್ಲೂಕಿನಲ್ಲಿ ಒಟ್ಟು 9660 ಕುಟುಂಬ ವಾಸಿಗಳಿದ್ದು, ಇದರಲ್ಲಿ 2941 ಮಂದಿ ಕುಟುಂಬಗಳು ಇಂದಿಗೂ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ  ಎಂದು ಚಿಕ್ಕಪ್ಪಯ್ಯ ಅವರು ತಿಳಿಸಿದರು.
ಜತೆಗೆ ಈ ಬಾರಿಯ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕಾಡುಗೊಲ್ಲರ ಶಿಕ್ಷಣಕ್ಕೆ 25 ಕೋಟಿ ರು. ಹಂಚಿಕೆ ಮಾಡಿದೆ. ಈ ಹಣದಲ್ಲಿ ಸಕಾಲದಲ್ಲಿ ಕ್ರಿಯಾಯೋಜನೆಯನ್ನು ತಯಾರಿಸಬೇಕು ಎಂದು ಅವರು ಕೋರಿದರು. ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಮತ್ತು ಸಿಇಒ ಗೋವಿಂದರಾಜು ಅವರು ಮನವಿಯನ್ನು ಸ್ವೀಕರಿಸಿದ ನಂತರ ಮಾತನಾಡಿ ಶೀಘ್ರವಾಗಿ ಕಾಡುಗೊಲ್ಲರ ಅಭಿವೃದ್ಧಿಗೆ ಕ್ರಮ ಕೈಗೊಳ್ಳವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಶ್ರೀನಿವಾಸಬಾಬು, ಶಿವಕುಮಾರ್, ವಕೀಲರಾದ ಈರಯ್ಯ, ಬೋರಪ್ಪ, ಶಿವಣ್ಣ, ರಾಮಪ್ಪ, ಸಮಿತಿಯ ಕಾರ್ಯದರ್ಶಿ ಹೊನ್ನಗೊಂಡನಹಳ್ಳಿ ಕೆ.ಚಿಕ್ಕಣ್ಣ, ಸಮಿತಿಯ ಜಂಟಿ ಕಾರ್ಯದರ್ಶಿ ಮಾಗೋಡ ನಾಗರಾಜ್, ಸಮಿತಿಯ ಶಿರಾ ಅಧ್ಯಕ್ಷ ಗೌಡಗೆರೆ ಚಂದ್ರಶೇಖರ್, ಸಮಿತಿಯ ಪದಾಧಿಕಾರಿಗಳಾದ ಹಾರೋಗೆರೆ ಮಾರಣ್ಣ, ಗಂಗಾಧರ್, ರಾಮಕೃಷ್ಣಯ್ಯ, ರಾಜು ಸೇರಿದಂತೆ 20 ಮಂದಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement