ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮೆರಿಟ್ ಕೋಟಾ ರದ್ದು: ವಿಜಯೋತ್ಸವ

Srinivasa Murthy VN
Updated On : 21 Dec 2013, 11:48 am

ಕ.ಪ್ರ.ವಾರ್ತೆ ತುಮಕೂರು ಡಿ. 21
ಖಾಸಗಿ ವೃತ್ತಿ ಕಾಲೇಜುಗಳಲ್ಲಿ ಮೆರಿಟ್ ಕೋಟಾವನ್ನು ಸರ್ಕಾರ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಎಐಡಿಎಸ್‌ಓ ಹಾಗೂ ಎಸ್‌ಯುಸಿಐ(ಸಿ) ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ತನ್ನ ಖಾಸಗಿ ಆಡಳಿತ ಮಂಡಳಿ ಪರವಾದ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ಎಸ್‌ಯುಸಿಐ(ಸಿ)ನ ನಗರ ಕಾರ್ಯದರ್ಶಿ ಎಸ್.ಎನ್. ಸ್ವಾಮಿ ಹೇಳಿದರು.
ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಓ) ವತಿಯಿಂದ ನಗರದ ಟೌನ್‌ಹಾಲ್‌ನಲ್ಲಿ ವಿಜಯೋತ್ಸವ ಹಾಗೂ ಎಚ್ಚರಿಕೆಯ ಸಮಾವೇಶಕ್ಕಾಗಿ ಸಂಘಟಿಸಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಸಮಯದಲ್ಲಿ ತಯಾರಾದ ಖಾಸಗಿ ವೃತ್ತಿ ಕಾಲೇಜುಗಳಲ್ಲಿ ಮೆರಿಟ್ ಕೋಟಾ ರದ್ದು ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಈ ವರ್ಷ ಜಾರಿಗೆ ತಂದಿತ್ತು. ಈಗ ಹೋರಾಟಕ್ಕೆ ತಲೆಬಾಗಿ ಕಾಯ್ದೆಯ ಜಾರಿಯನ್ನು ತಡೆಹಿಡಿದಿದ್ದರೂ ಮುಂದಿನ ದಿನಗಳಲ್ಲಿ ಜಾರಿಯಾಗುವ ಆಪತ್ತು ಇದೆ.
ಆದ್ದರಿಂದ ವಿದ್ಯಾರ್ಥಿಗಳು ಎಚ್ಚರಿಕೆಯಿಂದಿದ್ದು, ಸಂಘಟಿತರಾಗಿ ಎದುರಿಸಬೇಕು ಎಂದರು.
ಮೆರಿಟ್ ಕೋಟಾ ಸರ್ಕಾರದ ಭಿಕ್ಷೆಯಲ್ಲ. ಅದು ವಿದ್ಯಾರ್ಥಿ ಸಮುದಾಯ ಹೋರಾಟದಿಂದ ಗಳಿಸಿಕೊಂಡ ಹಕ್ಕು ಎಂದ ಅವರು, ಮೂಲಭೂತವಾಗಿ ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣದ ವಿರುದ್ಧ ಜನ ಹೋರಾಟ ಬೆಳೆಯಬೇಕೆಂದರು. ನಗರದ ವಿವಿಧ ಕಾಲೇಜುಗಳಿಂದ ನೂರಾರು ವಿದ್ಯಾರ್ಥಿಗಳು ದಾರಿಯುದ್ದಕ್ಕೂ ಘೋಷಣೆಗಗಳನ್ನು ಕೂಗುತ್ತಾ ಟೌನ್‌ಹಾಲ್ ವೃತ್ತದಲ್ಲಿ ಸಭೆ ಸೇರಿದ್ದರು. ಎಐಡಿಎಸ್‌ಓನ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಮಾದಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement