ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸರಣಿ ಅಪಘಾತ: ಚಾಲಕ ಸಾವು

Srinivasa Murthy VN
Updated On : 21 Dec 2013, 11:52 am

ಶಿರಾ: ಶಿರಾಕ್ಕೆ ಸಮೀಪದ ರಾ.ಹೆ. 4 ರ ಉಜ್ಜನಕುಂಟೆ ಬಳಿ ಮೂರು ಲಾರಿಗಳ ನಡುವೆ ಸರಣಿ ಅಪಘಾತ ನಡೆದು ಒಬ್ಬ ಚಾಲಕ ಸಾವನ್ನಪ್ಪಿ ವಾಹನಗಳು ಜಖಂಗೊಂಡು ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.
ತಾಲೂಕಿನ ಉಜ್ಜನಕುಂಟೆ ರಸ್ತೆಯಲ್ಲಿ ಪಂಚರ್ ಆಗಿ ನಿಂತಿದ್ದ ಲಾರಿಯೊಂದಕ್ಕೆ ಹಿಂಬದಿಯಿಂದ ಒಂದು ಲಾರಿ ಡಿಕ್ಕಿ ಹೊಡೆದಿದೆ. ನಂತರ ಇದೇ ಲಾರಿಗೆ ಮತ್ತೊಂದು ಲಾರಿ ಹಿಂಬದಿಯಿಂದಲೇ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮಂಜುನಾಥ್ (28) ಸಾವನ್ನಪ್ಪಿದ್ದು ಈತ ತುಮಕೂರಿನ ಲಕ್ಕೇನಹಳ್ಳಿ ಗ್ರಾಮದ ವಾಸಿಯಾಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ಸ್ಥಳಕ್ಕೆ ತಾವರೆಕರೆ ಠಾಣಾಧಿಕಾರಿ ಚಿದಾನಂದಮೂರ್ತಿ, ಸಿಪಿಐ ಹನುಮಂತರಾಯಪ್ಪ, ಭೇಟಿ ನೀಡಿ ರಸ್ತೆಯಲ್ಲಿ ಬಿದ್ದಿದ್ದ ಲಾರಿಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದ್ದು, ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಿಸಲಾಗಿದೆ.

ಜೂಜಾಟದಲ್ಲಿ ತೊಡಗಿದ್ದವರು ಪೊಲೀಸ್ ವಶಕ್ಕೆ
ಶಿರಾ:
ತಾಲೂಕಿನ ಅರಿಯಜ್ಜಿಹಳ್ಳಿ ಗ್ರಾಮದಲ್ಲಿ ಜೂಜಾಟ ನಡೆಯುತ್ತಿದೆ ಎಂದು ಬಂದ ಖಚಿತ ಮಾಹಿತಿಯ ಮೇರೆಗೆ ಗ್ರಾಮದ ಬಸ್ ನಿಲ್ದಾಣದ ಬಳಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂದು ಹೇಳಿ ನಲ್ಲಿ ತೊಡಗಿದ್ದ ಅಳ್ಳಪ್ಪ , ಕೃಷ್ಣಪ್ಪ, ದಾಸಣ್ಣ,  ರಂಗನಾಥ  ಇವರನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ ನಗದು ಹಣ ವಶಕ್ಕೆ ತೆಗೆದುಕೊಂಡು ಪ.ನಾ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮುದ್ದರಂಗನಹಳ್ಳಿ ಸದರಿ ಗ್ರಾಮದಲ್ಲಿ ಜೂಜಾಟ ನಡೆಯುತ್ತಿದೆ ಎಂದು ಬಂದ ಖಚಿತ ಮಾಹಿತಿಯ ಮೇರೆಗೆ ಗ್ರಾಮದ ಬಸ್ ನಿಲ್ದಾಣದ ಬಳಿ ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದ ಗಂಗಾಧರ, ತಿಪ್ಪೇಸ್ವಾಮಿ, ಹನುಮಂತರಾಯಪ್ಪ ಅವರನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ ನಗದು ಹಣವನ್ನು ಇತರೆ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಗೃಹ ಕಾರ್ಮಿಕ ಸಂಘ ಅಸ್ತಿತ್ವಕ್ಕೆ
ಶಿರಾ:
ತಾಲೂಕು ಗೃಹ ಕಾರ್ಮಿಕ ಸಂಘ ಅಸ್ತಿತ್ವಕ್ಕೆ ಬಂದಿದ್ದು ಇದರ ಅಧ್ಯಕ್ಷರಾಗಿ ಮುಬಾರಕ್ ಆಯ್ಕೆಯಾಗಿದ್ದು, ಕಟ್ಟಡ ಕಾರ್ಮಿಕರು ಸದರಿ ಸಂಘದಲ್ಲಿ ನೊಂದಣಿ ಮಾಡಿಕೊಂಡು ಸರ್ಕಾರದಿಂದ ಕಾರ್ಮಿಕರಿಗೆ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.  ಸಂಘದ ಉಪಾಧ್ಯಕ್ಷರಾಗಿ ನರಸಿಂಹಣ್ಣ, ಕಾರ್ಯದರ್ಶಿಯಾಗಿ ಆರ್.ಕಂಬಣ್ಣ, ಸಹಕಾರ್ಯದರ್ಶಿಯಾಗಿ ಜಯರಾಮು, ಖಜಾಂಚಿಯಾಗಿ ಪಾಪಣ್ಣ ಆಯ್ಕೆಯಾಗಿದ್ದು ವಿವರಣೆಗಾಗಿ ಮೊ. 9448416446 ಈ ನಂಬರಿಗೆ ಸಂಪರ್ಕಿಸಲು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement