ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

19ರಂದು ಸಂಪರ್ಕ ಸಭೆ

Srinivasa Murthy VN
Updated On : 17 Feb 2013, 12:41 pm

ಮಧುಗಿರಿ: ಸಾರ್ವಜನಿಕರು ತಮ್ಮ ಕುಂದು-ಕೊರತೆ  ಅಹವಾಲಿಗೆ ಫೆ.19ರ ಮಂಗಳವಾರ ಇಲ್ಲಿನ ತಾ.ಪಂ.ಸಭಾಂಗಣದಲ್ಲಿ ಮಧ್ಯಾಹ್ನ 3 ರಿಂದ 5 ರವರೆಗೆ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಎಸ್.ಆರ್.ಶಿದ್ಲಿಂಗಣ್ಣ ಅವರ ಅಧ್ಯಕ್ಷತೆಯಲ್ಲಿ ಸಂಪರ್ಕ  ಸಭೆ ಏರ್ಪಡಿಸಲಾಗಿದೆ.  ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಅಂದು ಸಲ್ಲಿಸುವಂತೆ ತಹಸೀಲ್ದಾರ್ ತಬಸ್ಸುಮ್ ಜಹೇರಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಇಂದು ಲಕ್ಷ್ಮೀನರಸಿಂಹ

ಬ್ರಹ್ಮರಥೋತ್ಸವ
ಇಲ್ಲಿಗೆ ಸಮೀಪದ ಮಂಚಕಲ್‌ಕುಪ್ಪೆಯಲ್ಲಿ ಫೆ. 17 ರಂದು ಕಂಭದ ಲಕ್ಷ್ಮೀನರಸಿಂಹ ಸ್ವಾಮಿಯವರ ರಥಸಪ್ತಮಿ ಪ್ರಯುಕ್ತ 12 ಗಂಟೆಗೆ ಬ್ರಹ್ಮರಥೋತ್ಸವ ಹಾಗೂ ಜಾತ್ರಾ ಮಹೋತ್ಸವ  ಏರ್ಪಡಿಸಲಾಗಿದೆ.

ಸಿಡಿಲು ಬಡಿದು ಸತ್ತ ವ್ಯಕ್ತಿ: ಶಾಸಕರ ನೆರವು
ಪಾವಗಡ: ಶುಕ್ರವಾರ ಸಂಜೆ ಕುರಿಕಾಯುವ ಸಂದರ್ಭದಲ್ಲಿ ಸಿಡಿಲು ಬಡಿದು ಸ್ಥಳದಲ್ಲಿಯೆ ಸಾವನ್ನಪ್ಪಿದ ಪಟ್ಟಣದ ವಾಸಿ  ಲಿಂಗಪ್ಪ ಅವರ ಮನೆಗೆ ಶನಿವಾರ ಶಾಸಕ ವೆಂಕಟರಮಣಪ್ಪ ಭೇಟಿ ನೀಡಿ ಅವರ ಪತ್ನಿ ಭಾಗ್ಯಮ್ಮಗೆ 10ಸಾವಿರ ರು. ನೀಡಿದರು. ಬಳಿಕ ಘಟನೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ ಕುಟುಂಬ ವರ್ಗಕ್ಕೆ ಸ್ವಾಂತನ ಹೇಳಿದರು. ಸರ್ಕಾರದಿಂದ 2ಲಕ್ಷ ಪರಿಹಾರ ಕಲ್ಪಿಸಿಕೊಡುವ ಭರವಸೆ ನೀಡಿ, 2 ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಡುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್.ವಿ. ವೆಂಕಟೇಶ್, ಮುಖಂಡರಾದ ಸುದೇಶ್ ಬಾಬು, ತಾಪಂ ಸದಸ್ಯ ಚನ್ನಮಲ್ಲಯ್ಯ, ಪುರಸಭೆ ಸದಸ್ಯ ರಾಜೇಶ್, ನಾಗರ್ಜುನರೆಡ್ಡಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಬೊಮ್ಮತನಹಳ್ಳಿ ತಿಪ್ಪೇಸ್ವಾಮಿ, ಯುವ ಘಕಟದ ಅಧ್ಯಕ್ಷ ಮೈಲಾರರೆಡ್ಡಿ, ಯುವ ಮುಖಂಡರಾದ ರಿಜ್ವಾನ್ ಉಲ್ಲಾ, ಸ್ಟುಡಿಯೋ ಅಮರ್ ಮುಂತಾದವರು ಭೇಟಿ ನೀಡಿದರು.

ಕೆಜೆಪಿಯಿಂದ ಅರ್ಜಿ ಆಹ್ವಾನ
ತಿಪಟೂರು:  ತಿಪಟೂರು ನಗರಸಭೆಗೆ 2013ರ ಮಾರ್ಚ್ 7ರಂದು ಚುನಾವಣೆ ನಡೆಯಲಿದ್ದು, ಕರ್ನಾಟಕ ಜನತಾ ಪಕ್ಷ (ಕೆಜೆಪಿ) ದಿಂದ ಸ್ಪರ್ಧಿಸ ಬಯಸುವ ಆಕಾಂಕ್ಷಿಗಳಿಂದ ಫೆ.20ರೊಳಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಕಾಂಕ್ಷಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕೆಂದು ತಾಲೂಕು ಕೆಜೆಪಿ ಅಧ್ಯಕ್ಷ ರಘುಪತಿ, ಕಾರ್ಯದರ್ಶಿ ಮಲ್ಲೇಶ್ ಮತ್ತು ಪಕ್ಷದ ಮುಖಂಡರಾಗಿರುವ ಲೋಕೇಶ್ವರ ತಿಳಿಸಿದ್ದಾರೆ. ಲೋಕೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಆಕಾಂಕ್ಷಿಗಳು ತಮ್ಮ ಸ್ವ ವಿವರದೊಂದಿಗೆ ಯಾವ ವಾರ್ಡ್‌ಗಳಿಂದ ಸ್ಪರ್ಧಿಸಬೇಕೆಂದು ತೀರ್ಮಾನಿಸಿಕೊಂಡು ಭೇಟಿ ಮಾಡಬೇಕು. ಅಲ್ಲದೆ ತಮ್ಮ ಸಾರ್ವಜನಿಕ ಸೇವೆ, ಕಳಕಳಿಗಳ ಬಗ್ಗೆ ಅರ್ಜಿಯಲ್ಲಿ ವಿವರವಾಗಿ ಬರೆದಿರಬೇಕೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement