ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪ್ರತಿಭಾವಂತ ಭಾರತೀಯರಿಗೆ ಜಾಗತಿಕ ಬೇಡಿಕೆ: ಕಿರಣ್

Srinivasa Murthy VN
Updated On : 19 Feb 2013, 11:14 am

ತುಮಕೂರು: ಪ್ರತಿಭಾವಂತ ಭಾರತೀಯರಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆಯಿದೆ ಎಂದು ಐಸೂಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಿ.ಎಂ. ಕಿರಣ್ ಅಭಿಪ್ರಾಯಪಟ್ಟರು.
ಅವರು ಶಿರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ಮತ್ತು ಐಸೂಲ್ ಟ್ಯಾಲೆಂಟ್ ಕನ್ಸಲ್ಟೇಷನ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏರ್ಪಾಟಾಗಿದ್ದ  ಹೊಸ ಹೆಜ್ಜೆ ಯೋಜನೆಯಡಿ ಏರ್ಪಾಟಾಗಿದ್ದ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಕೊರತೆ ತುಂಬುವ ಸೇತು ಬಂದ ಕಾರ್ಯಕ್ರಮಗಳಾದ ಸಹಯೋಗ ಮತ್ತು ವಿಕಸನ ಕಾರ್ಯಕ್ರಮ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದ ಪ್ರತಿಭಾವಂತರು ಇಂದು ಉನ್ನತ ಹುದ್ದೆಗಳಲ್ಲಿದ್ದಾರೆ. ಇದನ್ನು ಹಳ್ಳಿಗಾಡಿನ ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಂಡು ಕೀಳರಿಮೆ ಬಿಟ್ಟು, ಸಾಧನೆಯ ಕಡೆ ಗಮನ ಹರಿಸಬೇಕು ಎಂದರು. ಇದಕ್ಕೆ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಕನಸು ಕಾಣಬೇಕು. ಕಾರ್ಯರೂಪಕ್ಕೆ ತರುವಂತಹ ಛಲ ಹೊಂದಿರಬೇಕು. ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯ ಕೊರತೆ ತುಂಬುವಂತಹ ಇಂತಹ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಂಡು ಮುಂದೆ ಬರುವಂತೆ ಕರೆ ನೀಡಿದರು.
ಕೌಶಲ್ಯ ಕೊರತೆ: ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಡಾ. ಮಲ್ಲೇಶಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜೀವನ ಮತ್ತು ಉದ್ಯೋಗ, ಕೌಶಲ್ಯಗಳ ಕೊರತೆ ತುಂಬಾ ಇದೆ. ವಿದ್ಯಾರ್ಥಿಗಳಲ್ಲಿರುವ ಇಂತಹ ಕೊರತೆಯನ್ನು ಹೋಗಲಾಡಿಸಲು ಸರ್ಕಾರ ಮತ್ತು ಕಾಲೇಜು ಶಿಕ್ಷಣ ಇಲಾಕೆ ಐಸೋಲ್‌ನಂತಹ ಸಂಸ್ಥೆಗಳ ನೆರವಿನಿಂದ ಸಹಯೋಗ ಮತ್ತು ವಿಕಸನ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಪ್ರಶಂಶಿಸಿದರು.
ಸಮಾರಂಭದಲ್ಲಿ ಕಾಲೇಜಿನ ಸಹಯೋಗ ಮತ್ತು ಸಮನ್ವಯ ಅಧಿಕಾರಿ ಎನ್. ಗೋವಿಂದರಾಜು, ಬಿ. ಪೀರಾನ್ ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ರಂಗಪ್ಪ ಮತ್ತು ಐಸೋಲ್ ಸಂಸ್ಥೆಯ ಲೀಡ್ ಕನ್ಸಲ್ಟೆಂಟ್ ಕೆ.ಎ. ಸುರೇಶ್ ರಾಜು, ಐಸೋಲ್‌ನ ಹಿರಿಯ ತರಬೇತಿ ಸಂಯೋಜಕರಾದ ಎಂ. ವಿಶ್ವನಾಥ್, ಬಿ. ರಂಗನಾಥ್, ಜಿ. ಶ್ರೀಕಾಂತ್, ತರಬೇತುದಾರರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅರೀಫ್ ಅಹಮದ್ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement