ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಚುನಾವಣೆ ನೀತಿ ಸಂಹಿತೆ: ಪರಿಶೀಲಿಸಲು ಸಮಿತಿ ರಚನೆ

Srinivasa Murthy VN
Updated On : 21 Feb 2013, 12:44 pm

ಶಿರಾ: ಪಟ್ಟಣದ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಸಂಬಂಧ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಪರಿಶೀಲಿಸಲು ಅಧಿಕಾರಿಗಳ ಮಟ್ಟದ ನಗರ ಸ್ಥಳೀಯ ಸಂಸ್ಥೆವಾರು ಸಮಿತಿ ರಚಿಸಲಾಗಿದೆ.
ವಾರ್ಡ್ ಸಂಖ್ಯೆ 1 ರಿಂದ 31 ರ ವ್ಯಾಪ್ತಿಗೆ ಮಧುಗಿರಿ ಉಪವಿಭಾಗಾಧಿಕಾರಿಗಳು, ಶಿರಾ ತಹಸೀಲ್ದಾರ್, ಶಿರಾ ತಾಲೂಕು ವೃತ್ತ ಆರಕ್ಷಕ ನಿರೀಕ್ಷಕರು, ಉಪ ಅಬಕಾರಿ ಉಪ ನಿರೀಕ್ಷಕರು ಶಿರಾ, ಮೋಟಾರು ವಾಹನ ನಿರೀಕ್ಷಕರು ತುಮಕೂರು ನೇಮಿಸಲಾಗಿದೆ. ಈ ಸಮಿತಿಗಳು ಪ್ರತಿನಿತ್ಯ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಪ್ರದೇಶದಲ್ಲಿ ಯಾವುದೇ ಚುನಾವಣಾ ನೀತಿ ಸಂಹಿತಿ ಉಲ್ಲಂಘನೆಯಾದಲ್ಲಿ ಕಾನೂನು ಕ್ರಮ ಜರುಗಿಸುವಂತೆ ಆದೇಶಿಸಲಾಗಿದೆ. ಈ ಕೆಳಕಂಡ ಕಚೇರಿಗಳಲ್ಲಿ ಅಬಕಾರಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು, ಅಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕರು ಶಿರಾ ಅಬಕಾರಿ ನಿರೀಕ್ಷಕರ ಕಚೇರಿ ದೂ- 08135-277198 ಇಲ್ಲಿಗೆ ಮಾಹಿತಿ ನೀಡಬಹುದಾಗಿದೆ.

ಜಿಲ್ಲಾ ಕಾಂಗ್ರೆಸ್‌ನಲ್ಲಿ ಜಟಾಪಟಿ
ತುಮಕೂರು: ನಗರಸಭೆ ಚುನಾವಣೆ ಸಂಬಂಧ ತಮಗೆ ತುಮಕೂರು ನಗರದ ಕಾಂಗ್ರೆಸ್ ಬಿ  ಫಾರಂ ನೀಡದಿದ್ದಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಯಿತು. ಆಗ ತುಮಕೂರು ಜಿಲ್ಲೆಯ ಎಲ್ಲಾ 9 ತಾಲೂಕುಗಳ ಅಭ್ಯರ್ಥಿಗಳ ಬಿ  ಫಾರಂ ಅನ್ನು ಆಯಾ ತಾಲೂಕು ಕಾಂಗ್ರೆಸ್ ಮುಖಂಡರಿಗೆ ನೀಡಲಾಯಿತು.
ಆದರೆ ತುಮಕೂರು ನಗರ ನಗರಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯ ಬಿ  ಫಾರಂ ಅನ್ನು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ತಮ್ಮ ಬೆಂಬಲಿಗ ವೇಣುಗೋಪಾಲ್ ಎಂಬುವರಿಗೆ ನೀಡಿದ್ದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಕೆರಳಿಸಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ತಮ್ಮ ಕೈಯಲ್ಲಿ 35 ವಾರ್ಡ್‌ನ ಬಿ  ಫಾರಂ ಕೊಡದಿದ್ದರೆ ಹೇಗೆ ಎಂದು ಕೆಪಿಸಿಸಿ ಅಧ್ಯಕ್ಷರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ. ಅಲ್ಲದೇ ತಾವು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜಿನಾಮೆ ನೀಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಶಿರಾ ನಗರಸಭೆಯ ಬಿ ಫಾರಂ ಅನ್ನು ಜಯಚಂದ್ರ ಅವರಿಗೂ, ಮಧುಗಿರಿ ರಾಜಣ್ಣ, ಪಾವಗಡ ವೆಂಕಟರಮಣಪ್ಪ ಅವರಿಗೆ ಹೀಗೆ ಆಯಾ ತಾಲೂಕು ಮುಖಂಡರಿಗೆ ನೀಡಲಾಗಿದೆ. ಆದರೆ ತುಮಕೂರು ನಗರದ್ದು ಮಾತ್ರ ವೇಣುಗೋಪಾಲ್ ಎಂಬುವರಿಗೆ ನೀಡಿದ್ದು ಅಸಮಾಧಾನಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement