ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕುಣಿಗಲ್ ಜೆಡಿಎಸ್ ಪಾಳೆಯದಲ್ಲಿ ಅಚ್ಚರಿ ಮೂಡಿಸಿದ ವದಂತಿ!

Srinivasa Murthy VN
Updated On : 22 Feb 2013, 11:02 am

ಕುಣಿಗಲ್: ಪುರಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಭಿ-ಫಾರಂ ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡರು ವಿತರಿಸಲಿದ್ದಾರೆ ಎಂಬ ವಿಷಯ ಶುಕ್ರವಾರ ಬೆಳಗ್ಗೆ ಪಟ್ಟಣದ ತುಂಬೆಲ್ಲಾ ದಟ್ಟವಾಗಿ ಹರಡಿ, ಜೆಡಿಎಸ್ ಪಾಳೆಯದಲ್ಲಿ ಅಚ್ಚರಿಯ ಬೆಳವಣಿಗೆಗೆ ಕಾರಣವಾಯಿತು.
ಪುರಸಭಾ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಾಗಿನಿಂದಲೂ, ಜೆಡಿಎಸ್ ಪುರಸಭೆ ಸದಸ್ಯತ್ವ ಸ್ಥಾನದ ಸ್ಪರ್ಧಾಳುಗಳಿಗೆ ಭಿ ಪಾರಂ ಯಾರು ನೀಡುತ್ತಾರೆಂಬ ಗೊಂದಲ, ಕಾರ್ಯಕರ್ತರೂ ಸೇರಿದಂತೆ, ವಿರೋಧ ಪಕ್ಷದವರಲ್ಲೂ ಕುತೂಹಲ ಮೂಡಿಸಿತಲ್ಲದೆ, ಸದರಿ ಬಿ-ಫಾರಂ ವಿತರಣೆ ವಿಷಯವೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕೃತ ಅಭ್ಯರ್ಥಿ ಯಾರಾಗುತ್ತಾರೆಂಬುದರ ನಿರ್ಧಾರಕ್ಕೂ ಬಹಳ ಮಹತ್ವ ಹೊಂದಿತ್ತು.  
 ಕಳೆದೊಂದು ವಾರದಿಂದಲೂ ಬೇರೆ, ಬೇರೆ ರೀತಿಯ ವದಂತಿಗಳು ಊಹಾ, ಪೂಹಗಳು ಎದಿದ್ದು, ಕಾರ್ಯಕರ್ತರಲ್ಲಿ ಆತಂಕಕ್ಕೆ ಏಡೆ ಮಾಡಿಕೊಟ್ಟಿತ್ತು.
ಆದರೆ, ಗುರುವಾರ ರಾತ್ರಿಯೇ ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡರು, ಪಕ್ಷದ ರಾಜ್ಯಾಧ್ಯಕ್ಷರಿಂದ 23 ಸ್ಥಾನಗಳಿಗೂ ಬಿ-ಫಾರಂ ಪಡೆದು ತೆರಳಿದ್ದಾರೆಂದು, ಗಾಳಿ ಸುದ್ದಿ ಹರಡಿದ್ದು, ಮಾಡಿ ಸಚಿವ ಡಿ.ನಾಗರಾಜಯ್ಯನವರ ಪಾಳೆಯದಲ್ಲಿ ರಾತ್ರಿ ಇಡೀ ಬಿರುಸಿನ ವಿದ್ಯಾಮಾನಗಳಿಗೆ ಎಡೆ ಮಾಡಿಕೊಟ್ಟಿತು.
ಮಾಜಿ ಸಚಿವರ ಮನೆ, ಪೆಟ್ರೋಲ್ ಬಂಕ್ ಬಳಿಯಲ್ಲೂ ಶುಕ್ರವಾರ ಬೆಳಗಿನಿಂದಲೂ ಡಿ.ನಾಗರಾಜಯ್ಯನವರ ಅಭಿಮಾನಿಗಳು, ಹಲವು ಸುತ್ತಿನ ಮಾತುಕತೆ ನಡೆಸಿ, ನಾಗರಾಜ್ಯನವರ ಹಿಂಬಾಲಕರಿಗೆ ಟಿಕೆಟ್ ನಿರಾಕರಿಸಿದ್ದೇ ಆದಲ್ಲಿ, ಜೆಡಿಎಸ್ ಮುಖಂಡರ ಭಾವಚಿತ್ರಗಳನ್ನಿಟ್ಟುಕೊಂಡೆ ಈ ಬಾರಿ ಚುನಾವಣೆ ಎದುರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದ್ದು, ಈ ಮದ್ಯೆ ಮಾಜಿ ಶಾಸಕ ಎಸ್.ಪಿ.ಎಂ, ಜೆಡಿಎಸ್‌ನಿಂದ ಸ್ಪರ್ಧಿಸಲಿಚ್ಚಿಸುವರಿಗೆ ಅರ್ಹತೆ ಮೇರೆಗೆ ಬಿಫಾರಂ ನೀಡುವ ಬಗ್ಗೆ ನಿರ್ಧರಿಸಿದ್ದರು.
ಅಧಿಕೃತವಾಗಿ ಬೇಡಿಕೆ ಸಲ್ಲಿಸದಿದ್ದಲ್ಲಿ ಅ ವಾರ್ಡ್‌ನಲ್ಲಿ ಬದಲೀ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸುವ ಪರೋಕ್ಷ ಸೂಚನೆ ನೀಡಿದ್ದಾರೆ ಎಂದು ಬೆಂಬಲಿಗರು ತಿಳಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಜೆಡಿಎಸ್ ವಕ್ತಾರ ಕೆ.ರಮೇಶ್, ಪಕ್ಷದಲ್ಲಿನ ಪ್ರಸಕ್ತ ಬೆಳವಣಿಗೆ ಬಗ್ಗೆ ಡಿ.ನಾಗರಾಜಯ್ಯನವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಶುಕ್ರವಾರ ಸಂಜೆ ಸಭೆ ಸೇರಿ ಮುಂದಿನ ನಿರ್ಧಾರಗಳ ಬಗ್ಗೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ. 59 ನಾಮಪತ್ರ: ಶುಕ್ರವಾರ ಒಟ್ಟಾರೆ 59 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಪುರಸಭೆ ಮಾಜಿ ಉಪಾಧ್ಯಕ್ಷ ರಂಗಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ತಾಲೂಕು ಕರವೇ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಅಂಬರೀಷ್ ಅಭಿಮಾನಿಗಳ ಸಂಘದ ಅಧ್ಯಕ್ಷ ನಾಗೇಶ ಸೇರಿದಂತೆ ಇತರರು ಪ್ರಮುಖರು ನಾಮಪತ್ರ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement