ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ದಾಖಲಾತಿ ಪರಿಶೀಲಿಸಿ ಆಸ್ತಿ ಖರೀದಿಸಿ'

Srinivasa Murthy VN
Updated On : 25 Feb 2013, 11:56 am

ಶಿರಾ: ಆಸ್ತಿ ಮತ್ತು ವಾಹನಗಳನ್ನು ಖರೀದಿ ಮಾಡುವಾಗ ನಂಬಿಕೆ, ವಿಶ್ವಾಸದ ಮೇಲೆ ವ್ಯವಹಾರ ಮಾಡುವುದನ್ನು ಬಿಟ್ಟು ದಾಖಲಾತಿಗಳನ್ನು ಪರಿಶೀಲನೆ ಮಾಡಿ ನ್ಯಾಯ ಸಮ್ಮತವಾಗಿ ಖರೀದಿ ಮಾಡಿದರೆ ಮೋಸ ಹೊಗುವ ಪ್ರಮಯವೇ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.
ಅವರು ತಾಲೂಕಿನ ವೀರಗಾನಹಳ್ಳಿಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಶಿಶು ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಹೆಂದೊರೆ ಗ್ರಾ.ಪಂ. ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜನಸಾಮಾನ್ಯರಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಚಿಕ್ಕ ವಿಚಾರವನ್ನು ನ್ಯಾಯಾಲಯದವರೆಗೂ ತರುವುದು ಬೇಡ. ನಿಮ್ಮ ಗುರು ಹಿರಿಯರಲ್ಲಿಯೆ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಕೌಟುಂಬಿಕ ಹಾಗೂ ಸಣ್ಣಪುಟ್ಟ ವ್ಯಾಜ್ಯಗಳನ್ನು ಪರಸ್ಪರ ಒಪ್ಪಿಗೆ ಮೇರೆಗೆ ಜನತಾ ನ್ಯಾಯಾಲಯದಲ್ಲಿಯೆ ಬಗೆಹರಿಸಿಕೊಳ್ಳಬಹುದೆಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ಮಾತನಾಡಿ ಕಾನೂನನ್ನು ಯಾರು ಓದಿ ತಿಳಿಯಲು ಸಾಧ್ಯವಿಲ್ಲವೋ ಅಂತಹವರಿಗೆ ಈ ಶಿಬಿರ ಪ್ರಯೋಜನಕಾರಿ. ಹಳ್ಳಿಗಳಲ್ಲಿ ಸಾಮರಸ್ಯ ಜೀವನಕ್ಕೆ ಕಾನೂನಿನ ಜ್ಞಾನ ಅವಶ್ಯಕ. ಪ್ರತಿಯೊಬ್ಬರೂ ವಿದ್ಯಾವಂತರಾದಾಗ ದೇಶದ ಪ್ರಗತಿ ಸಾಧ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಂದೊರೆ ಗ್ರಾ.ಪಂ. ಅಧ್ಯಕ್ಷ ಪದ್ಮರಾಜ್ ವಹಿಸಿದ್ದರು. ಮೋಟಾರು ವಾಹನ ಕಾಯ್ದೆ ಬಗ್ಗೆ ವಕೀಲ ಕೆ.ರಂಗನಾಥಪ್ಪ, ಕೌಟಿಂಬಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಶಿರಾ ವೆಂಕಟೇಶ್, ವಕೀಲ ಎಚ್.ನಾಗರಾಜು ಮಹಿಳಾ ಆಸ್ತಿ ಹಕ್ಕು ಕಾಯ್ದೆ ಬಗ್ಗೆ ಉಪನ್ಯಾಸ ನೀಡಿದರು. ್ಲ ಗ್ರಾ.ಪಂ. ಸದಸ್ಯರಾದ ಭೂಕಾಂತಯ್ಯ, ರಾಜಣ್ಣ, ಗೌರಮ್ಮ, ಎ.ಎಸ್.ಐ. ದೊಡ್ಡರಂಗಯ್ಯ, ವಕೀಲರ ಸಂಘದ ಕಾರ್ಯದರ್ಶಿ ಈರಣ್ಣ, ಶಿಶು ಅಭಿವೃದ್ಧಿ ಇಲಾಖೆಯ ಕರಿಯಣ್ಣ ಮತ್ತಿತರರು ಹಾಜರಿದ್ದರು.

ಜೆಡಿಎಸ್ ಹೋಬಳಿ ಮಟ್ಟದ ಸಮಾವೇಶ
ಪಾವಗಡ: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕಿನ ಸರ್ಕಾರಿ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಿಗೆ ವಲಸೆ ಹೋದ ಕೂಲಿ ಕಾರ್ಮಿಕರಿಗೆ ತುಂಬ ಅನುಕೂಲವಾಗಿದೆ ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.
ಅವರು ಸೋಮವಾರ ಮುಖಂಡ ಹನುಮಪ್ಪ ನೇತೃತ್ವದಲ್ಲಿ ಕ್ಯಾತಗಾನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಹೋಬಳಿ ಮಟ್ಟದ ಸಮಾವೇಶ ಹಾಗೂ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೆಡಿಎಸ್ ಅವಧಿ ರೈತರು ಹಾಗೂ ಜನಸಾಮಾನ್ಯರ ಪಾಲಿಗೆ ಸುವರ್ಣ ಯುಗವಾಗಿತ್ತು ಎಂದರು.
ಪಕ್ಷದ ಮಾಜಿ ಅಧ್ಯಕ್ಷ ಆರ್.ಸಿ ಅಂಜಿನಪ್ಪ ಮಾತನಾಡಿ ಜೆಡಿಎಸ್ ಅವಧಿಯಲ್ಲಿ 60 ಸಾವಿರ ಪಡಿತರ ಚೀಟಿಗಳು ಕಲ್ಪಿಸಲಾಗಿತ್ತು. ಈಗಿನ ಶಾಸಕರು ಅರ್ಹ ಕಾರ್ಡುಗಳನ್ನು ರದ್ದು ಪಡಿಸಿ 10ಸಾವಿರಕ್ಕೆ ಇಳಿಸುವ ಮೂಲಕ ಬಡವರಿಗೆ ಆನ್ಯಾಯ ಮಾಡಿದ್ದಾರೆ ಎಂದರು. ಪಕ್ಷದ ತಾಲೂಕು ಅಧ್ಯಕ್ಷ ತಿಮ್ಮಾರೆಡ್ಡಿ  ಮಾತನಾಡಿ  ಪಕ್ಷದ ಅಭ್ಯರ್ಥಿ ಕೆ.ಎಂ. ತಿಮ್ಮರಾಯಪ್ಪ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳಿಂದ 30ಕ್ಕಿಂತ ಹೆಚ್ಚು ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆಯಾದರು. ಮುಖಂಡರಾದ ವೆಂಕಟರಾಮರೆಡ್ಡಿ, ಎಸ್.ಕೆ.ರೆಡ್ಡಿ, ಚೌಡರೆಡ್ಡಿ, ಭೀಮನಕುಂಟೆ ಸತ್ಯಪ್ಪ, ವಡ್ಡರಹಟ್ಟಿ ದಾಸಪ್ಪ ಕ್ಯಾತಗಾನಹಳ್ಳಿ ಹನುಮಪ್ಪ, ಜಿಪಂ ಸದಸ್ಯೆ ನಳಿನಮ್ಮ ಗೋವಿಂದಪ್ಪ, ತಾಪಂ ಸದಸ್ಯ ರಂಗಣ್ಣ, ಹೋಬಳಿ ಅಧ್ಯಕ್ಷ ಎನ್.ಇ. ಈರಣ್ಣ, ತಾಳೇಮರದ ಮಂಜುನಾಥ್, ಎಸ್.ಟಿ ನಾಗರಾಜ್, ಜಿ.ಬಿ. ದೇವರಾಜ್, ರಂಗಸಮುದ್ರ ಕೆ.ವಿ.ಗಿರಿರಾಜ್, ಭಾಗ್ಯಮ್ಮ ಈರಮಲ್ಲೇಗೌಡ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement