ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಲಿಷ್ಠ ಜಾತಿಯೆಂದು ರೈತರಿಗೇ ಪ್ರತ್ಯೇಕ ಬಜೆಟ್

Srinivasa Murthy VN
Updated On : 25 Feb 2013, 11:57 am

ತುಮಕೂರು: ರೈತರು ಬಲಿಷ್ಠ ಜಾತಿಗಳಿಗೆ ಸೇರಿದ್ದಾರೆ ಎಂಬ ಕಾರಣಕ್ಕೆ ಕೃಷಿಗೆ ಪ್ರತ್ಯೇಕ ಬಜೆಟ್ ಕೊಡಲಾಗುತ್ತಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್ ಅಭಿಪ್ರಾಯಪಟ್ಟರು.
ಅವರು ಶಿರಾ ತಾಲೂಕಿನ ತೊಗರಗುಂಟೆ ಅಮ್ಮಾಜಮ್ಮ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ಆಯೋಜಿಸಿದ್ದ ನಾಯಕತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಅಲೆಮಾರಿಗಳ ಚಳವಳಿ ದಲಿತ  ಚಳವಳಿಯಂತೆ ಬೃಹತ್ ಚಳವಳಿಯಾಗಿ ಬೆಳೆಯಬೇಕು. ಇದಕ್ಕೆ ದಲಿತ ಚಳವಳಿಯ ಅಣ್ಣ-ತಮ್ಮಂದಿರು ಬೆಂಬಲಿಸಬೇಕು ಎಂದ ಅವರು, ಸರ್ಕಾರದಲ್ಲಿರುವ ಅಲೆಮಾರಿ ಜನಾಂಗಗಳ ಪಟ್ಟಿ 1965 ರಲ್ಲಿ ತಯಾರಿಸಲಾಗಿದ್ದು ನಂತರ ಪರಿಷ್ಕರಣೆಯೇ ಆಗಿಲ್ಲ ಎಂದರು. ಅಲೆಮಾರಿ ಜನಾಂಗಗಳ ಪಟ್ಟಿ  ಪರಿಷ್ಕರಣೆಗೆ ಸಮಾಜ ಕಲ್ಯಾಣ ಇಲಾಖೆಗೆ ಅರ್ಜಿ ಕೊಟ್ಟು ವರ್ಷಗಳೇ ಉರುಳಿವೆ. ಈವರೆಗೂ ಆ ಬಗ್ಗೆ ಕ್ರಮ ಆಗಿಲ್ಲ. ಸರ್ಕಾರಕ್ಕೆ ಪಟ್ಟಿ ಪರಿಷ್ಕರಣೆ ಸಾಧ್ಯವಾಗದಿದ್ದರೆ ವಿಶ್ವವಿದ್ಯಾಲಯಕ್ಕೋ ಎನ್‌ಜಿಓ ನೀಡಿ ಪಟ್ಟಿ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಚುನಾವಣಾ ರಾಜಕಾರಣ: ಚಳವಳಿಗೆ ಹೋರಾಟದ ರಾಜಕಾರಣ ಹಾಗೂ ಚುನಾವಣಾ ರಾಜಕಾರಣದ ಮಾದರಿಗಳಿದ್ದು, ಡಾ.ಅಂಬೇಡ್ಕರ್ ಹೋರಾಟದ ರಾಜಕಾರಣ ಮಾಡಿದರೆ, ಡಾ.ಬಾಬುಜಗಜೀವನ್ ರಾಂ, ಕ್ಯಾನ್ಸಿರಾಂ ಮತ್ತು ಮಾಯಾವತಿ ಚುನಾವಣಾ ರಾಜಕಾರಣ ಮಾಡಿದರು. ಅಲೆಮಾರಿಗಳ ಚಳವಳಿ ಹೋರಾಟದ ರಾಜಕಾರಣ ಇಲ್ಲವೇ ಚುನಾವಣಾ ರಾಜಕಾರಣವೇ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು. ಪ್ರಗತಿಪರ ಹೋರಾಟಗಾರ ಚೇಳೂರು ವೆಂಕಟೇಶ್ ಮಾತನಾಡಿ ರಾಜ್ಯ ಮಟ್ಟದಲ್ಲಿ ಇದೇ ಪ್ರಪ್ರಥಮ ಬಾರಿಗೆ ಕರ್ನಾಟಕದ ಎಲ್ಲಾ ಅಲೆಮಾರಿ ಜಾತಿಗಳು ಒಂದೆಡೆ ಬರುತ್ತಿದ್ದು ಇದ್ದರಿಂದ ಅಲೆಮಾರಿ ಹೆಸರಿನಲ್ಲಿ ಸರ್ಕಾರದ ಸೌಲಭ್ಯ ಪಡೆಯುತ್ತಿರುವ ಗೊಲ್ಲ, ಬೆಸ್ತ, ಲಂಬಾಣಿ, ಕುರುಬ, ಸೇರಿದಂತೆ ಇನ್ನು ಅನೇಕ ಬಲಿಷ್ಠ ಜಾತಿಗಳು ನಿಜವಾದ ಶೋಷಿತ ಅಲೆಮಾರಿ ಸಾಮಾಜಿಕ ನ್ಯಾಯ ಕೊಡಿಸಲು ಮುಂದಾಗಬೇಕು ಎಂದರು.
ಸಹಕರಿಸಬೇಕು: ಇಂತಹ ಬಲಿಷ್ಠರು ಅಲೆಮಾರಿ ಕೋಟಾದಲ್ಲಿ ದೊರೆಯುವ ಸೌಲಭ್ಯಗಳನ್ನು ಪಡೆಯದೇ ದಕ್ಕಬೇಕಾಗಿರುವ ಅಲೆಮಾರಿ ಬುಡಕಟ್ಟು ಜನಾಂಗಗಳಿಗೆ ಸಹಕರಿಸಬೇಕು ಎಂದರು. ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷ ಡಾ. ಬಾಲಗುರುಮೂರ್ತಿ ಮಾತನಾಡಿ, ಅಲೆಮಾರಿಗಳ ಚಳವಳಿಯ ಮುಖ್ಯ ಉದ್ದೇಶ ರಾಜ್ಯದಲ್ಲಿ ಅಲೆಮಾರಿ ಸಮುದಾಯದ ಪಟ್ಟಿ ಪರಿಷ್ಕರಣೆಯಾಗಬೇಕು, ಅಲೆಮಾರಿಗಳಿಗೆ ಪ್ರತ್ಯೇಕ ಇಲಾಖೆ ತೆರೆಯಬೇಕು ಹಾಗೂ ಪ್ರತ್ಯೇಕ ಬಜೆಟ್ ಮಂಡನೆಯಾಗಬೇಕು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement