ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿವಿಗೆ ಟಿಪ್ಪು ಹೆಸರಿಡುವಂತೆ ಒತ್ತಾಯಿಸಿ ಪತ್ರ ಚಳವಳಿ

Srinivasa Murthy VN
Updated On : 24 Jan 2013, 9:50 am

ಹುಳಿಯಾರು: ಶ್ರೀರಂಗಪಟ್ಟಣದಲ್ಲಿ ಕೇಂದ್ರ ಸರ್ಕಾರವು ಸ್ಥಾಪಿಸಲು ಮುಂದಾಗಿರುವ ಅಲ್ಪಸಂಖ್ಯಾತರ ವಿಶ್ವವಿದ್ಯಾನಿಲಯಯಕ್ಕೆ ಟಿಪ್ಪುವಿನ ಹೆಸರಿಡುವುದರಿಂದ ಮೈಸೂರ್ ಹುಲಿ ಟಿಪ್ಪುವಿಗೆ ಗೌರವ ಸಮರ್ಪಿಸಿದಂತಾಗುತ್ತದೆ. ಇದನ್ನು ರಾಜ್ಯ ಸರ್ಕಾರ ಸ್ವಾಗತಿಸಬೇಕೆಂದು ಹುಳಿಯಾರಿನ ಪ್ರಗತಿಪರ ಹೋರಾಟಗಾರರು ಹಾಗೂ ಗ್ರಾ.ಪಂ.ಸದಸ್ಯರು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಪತ್ರದ ಮುಖೇನ ಸಂಗ್ರಹಿಸಿ ರಾಜ್ಯಪಾಲರಿಗೆ ಕಳುಹಿಸುವ ಮೂಲಕ ವಿಶ್ವವಿದ್ಯಾನಿಲಯಯಕ್ಕೆ ಟಿಪ್ಪುವಿನ ಹೆಸರನ್ನು ನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ.
ಟಿಪ್ಪು ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತದ ವಿರುದ್ಧ ಧ್ವನಿ ಎತ್ತಿದ ಹೋರಾಟಗಾರರಲ್ಲಿ ಒಬ್ಬನಾಗಿದ್ದು, ಟಿಪ್ಪುವಿನ ಆಡಳಿತ ಜಾತ್ಯತೀತ ಹಾಗೂ ಆದರ್ಶಗಳನ್ನು ಹೊಂದಿದ್ದು, ಬ್ರಿಟಿಷರ ವಿರುದ್ಧ ಹೋರಾಡುವಲ್ಲಿ ತನ್ನ ಸಂಸಾರವನ್ನೇ ಕಳೆದುಕೊಂಡು,ತನ್ನನು ದೇಶಕ್ಕಾಗಿ ಸಮರ್ಪಿಸಿದ್ದಾನೆ. ಈತ ತನ್ನ ಆಡಳಿತದ ಅವಧಿಯಲ್ಲಿ ಅನೇಕ ದೇವಾಲಯಗಳನ್ನು ಮಸೀದಿಗಳನ್ನು ನಿರ್ಮಿಸಿದ್ದು, ಎಲ್ಲಾ ಸಮುದಾಯದವರೊಂದಿಗೆ ಬೆರತು ಆಳ್ವಿಕೆ ನಡೆಸಿದ ಧೀಮಂತ ನಾಯಕನಾಗಿದ್ದ. ಅಲ್ಲದೆ ಶೃಂಗೇರಿ ಮಠಕ್ಕೆ ಮರಾಠಿಗರು ದಾಳಿ ಮಾಡಿದಾಗ ಅದನ್ನು ರಕ್ಷಿಸಿದ ವೀರ ಟಿಪ್ಪು ಸುಲ್ತಾನ್ ಆಗಿದ್ದು ಆತನ ಹೆಸರಿಡುವಂತೆ ಇಮ್ರಾಜ್ ಒತ್ತಾಯಿಸಿದ್ದಾರೆ.
ಗ್ರಾ.ಪಂ.ಸದಸ್ಯ ಆಶೋಕ್‌ಬಾಬು ಮಾತನಾಡಿ, ಟಿಪ್ಪು ಒಬ್ಬ ದೇಶಪ್ರೇಮಿಯಾಗಿದ್ದ ಧೀಮಂತ ವ್ಯಕ್ತಿ. ಇಂದು ಆತನ ಹೆಸರನ್ನು ವಿಶ್ವವಿದ್ಯಾನಿಲಯಕ್ಕೆ ನಾಮಕರಣ ಮಾಡಬಾರದೆಂದು ಹೇಳುತ್ತಾ, ಇತಿಹಾಸವನ್ನೇ ತಿರುಚಿ, ಸಮಾಜದಲ್ಲಿ ಕೋಮುಗಲಭೆ ಉಂಟಾಗುವಂತೆ ಮಾಡುತ್ತಿದ್ದಾರೆ. ಈ ರೀತಿ ಮಾಡುವಂತಹವರ ವಿರುದ್ಧ ಸರ್ಕಾರ ಸೂಕ್ತ ಕ್ರಮವನ್ನು  ಜರುಗಿಸಬೇಕೆಂದರು. ಗ್ರಾ.ಪಂ.ಸದಸ್ಯರಾದ ಭೈರೇಶ್, ಜಹೀರ್‌ಸಾಬ್, ಬಡ್ಡಿಪುಟ್ಟಣ್ಣ ಸ್ಥಳಿಯರಾದ ವರದಪ್ಪ, ಅಪ್ಸರ್, ಅಮಿತ್, ಹರೀಶ್, ಗೌಸಿ, ನಂದೀಶ್, ಮುಜೀಬ್, ಸಲ್ಮಾನ್, ರಿಯಾಜ್ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement