ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿಶಿಷ್ಟ ಪರಂಪರೆ, ಇತಿಹಾಸ ಹೊಂದಿರುವುದೇ ಭಾರತದ ವೈಶಿಷ್ಟ್ಯ

Srinivasa Murthy VN
Updated On : 27 Jan 2013, 12:36 pm

ಕುಣಿಗಲ್: ನಮ್ಮ ರಾಷ್ಟ್ರ ವಿಶಿಷ್ಟ ಪರಂಪರೆ, ಇತಿಹಾಸ ಹೊಂದಿರುವ ರಾಷ್ಟ್ರವಾಗಿದ್ದು, ಈ ರಾಷ್ಟ್ರದಲ್ಲಿ ಹತ್ತಾರು ಧರ್ಮಗಳು, ಸಾವಿರಾರು ಜಾತಿಗಳು, ಅಸಂಖ್ಯಾತ ಭಾಷೆಗಳು, ವಿಭಿನ್ನ ಸಂಸ್ಕೃತಿಯನ್ನು ಒಳಗೊಂಡ ಜನತಇದ್ದಾರೆ. ಇವರೆಲ್ಲರೂ ಸರಿಸಮಾನರಾಗಿ, ಎಲ್ಲಾ ರೀತಿಯಲ್ಲೂ ಪ್ರಗತಿಸಾಧಿಸಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಹಸೀಲ್ದಾರ್ ಜಗದೀಶ್ ತಿಳಿಸಿದರು.
ಪಟ್ಟಣದ ಮಹಾತ್ಮಗಾಂಧಿ ಪ.ಪೂ.ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ 64ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣೆ ನೆರವೇರಿಸಿ, ಗೌರವರಕ್ಷೆ ಸ್ವೀಕರಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಅತಿದೊಡ್ಡ ಸಂವಿಧಾನವನ್ನು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟವಾದ ಭಾರತವು ಅನುಸರಿಸಿ, ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುತ್ತಾ, ಈ ದೇಶದ ಎಲ್ಲಾ ಪ್ರಜೆಗಳು ಸಮಾನರೀತಿಯಲ್ಲಿ ಮೇಲು ಕೀಳಿಲ್ಲದೆ ಸಹಬಾಳ್ವೆ ನಡೆಸಲು ಸಂವಿಧಾನ ಅವಕಾಶ ಕಲ್ಪಿಸಿಕೊಟ್ಟದೆ ಎಂದರು.
ಸಂಘಟಿತ ಹೋರಾಟ ಅಗತ್ಯ: ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಬಿ. ರಾಮಸ್ವಾಮಿಗೌಡ, ದೇಶವು ಎದುರಿಸುತ್ತಿರುವ ಭ್ರಷ್ಟಾಚಾರ, ಭಯೋತ್ಪಾದನೆ, ನಿರೋದ್ಯೋಗ ಸಮಸ್ಯೆಗಳಂತ ಹಲವು ಸಮಸ್ಯೆಗಳ ನಿವಾರಣೆಗೆ, ದೇಶದ ಪ್ರತಿಯೊಬ್ಬ ಪ್ರಜೆಯೂ ಸಂಘಟಿತರಾಗಿ ಹೋರಾಡಿ, ದೇಶದ ಅಭಿವೃದ್ಧಿಗೆ ತಮ್ಮ ಕೈಲಾದ ಸೇವೆ ನೀಡಿದಾಗ, ದೇಶವು ಸರ್ವತೋಮುಖ ಪ್ರಗತಿ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದರು.
ತಾಪಂ ಅಧ್ಯಕ್ಷೆ ನಿರ್ಮಲಕುಮಾರಸ್ವಾಮಿ, ಸದಸ್ಯೆ ಅಶ್ವತ್ಥಮ್ಮ, ಪುರಸಭಾಧ್ಯಕ್ಷೆ ನಳಿನಾಭೈರಪ್ಪ, ಸದಸ್ಯೆ ಆಯಿಶಾಬೀ, ಜಿಪಂ ಸದಸ್ಯ ವೈ.ಎಚ್. ಹುಚ್ಚಯ್ಯ, ದೊಡ್ಡಯ್ಯ, ಡಿವೈಎಸ್ಪಿ ಶಿವರುದ್ರಸ್ವಾಮಿ ಸೇರಿದಂತೆ ಇತರರು ಪಾಲ್ರೊಂಡಿದ್ದು, ಭಗತ್‌ಸಿಂಗ್ ಸಾಂಸ್ಕೃತಿಕ ಹಾಗೂ ಕ್ರೀಡಾಸಂಘದ ಏರ್ಪಡಿಸಿದ್ದ ಸೈಕಲ್ ರೇಸ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಹಿರಿಯ ಪೌರಕಾರ್ಮಿಕ ಗೋವಿಂದಪ್ಪ, ಭಾಗ್ಯಮ್ಮ ಸೇರಿದಂತೆ ವಿವಿಧ ಇಲಾಖೆಯ ಸರ್ಕಾರಿ ಅಧಿಕಾರಿಗಳು ಹಾಗೂ ನಿವೃತ್ತ ಸೇನಾ ಸಿಬ್ಬಂದಿಗಳನ್ನು, ಕ್ರೀಡಾಪಟುಗಳನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement