ಸಹಕಾರ ಸಂಘಗಳ ಬೆಳವಣಿಗೆಯಲ್ಲಿ ರೈತರ ಹಿತ ಅಡಗಿದೆ: ರಾಜ್ಕುಮಾರ್
ಚಿಕ್ಕನಾಯಕನಹಳ್ಳಿ: ರೈತರು ಸಹಕಾರ ಸಂಘಗಳಲ್ಲಿ ಪಡೆದ ಸಾಲವನ್ನು ಪಡೆಯುವುದು ಹೇಗೆ ಅವರ ಹಕ್ಕಾದೆಯೋ ಹಾಗೆ ಸಾಲಮರುಪಾವತಿಯ ಸಹ ಅವರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ನುಡಿದರು. ಅವರು ತಾಲೂಕಿನ ಹಿಂದುಳಿದ ಪ್ರದೇಶವಾದ ರಾಮನಹಳ್ಳಿ ಪಿಎಸಿಬಿಯಲ್ಲಿ ನೂತನ ಸದಸ್ಯರಿಗೆ ಸಾಲದ ಚೆಕ್ ವಿತರಣೆ ಮಾಡಿ ಮಾತನಾಡುತ್ತಿದ್ದರು.ರೈತರು ಕೃಷಿ ಅಭಿವೃದ್ಧಿಗೆಂದು ಪಡೆದ ಸಾಲವನ್ನು ಬೇರೆಬೇರೆ ಉದ್ದೇಶಗಳಿಗೆ ಬಳಸುವುದರಿಂದ ಆರ್ಥಿಕ ಸಂಕಷ್ಟಕ್ಕೆ ಎದುರಾಗುತ್ತಾರೆ. ಸಾಲಮರುಪಾವತಿ ವಿಳಂಬವಾಗಿ, ಆರ್ಥಿಕ ಸಂಸ್ಥೆಗಳಲ್ಲಿ ವಿಶ್ವಾಸ ಕಳೆದುಕೊಂಡು ಕೊನೆಗೆ ಜೀವನಾಧಾರವಾದ ಜಮೀನನ್ನು ಮಾರುವ ಹಂತ ತಲುಪುತ್ತಾನೆ. ತಾವು ಪಡೆದ ಸಾಲವನ್ನು ಸದುದ್ದೇಶಕ್ಕೆ ಬಳಸಿ ಆರ್ಥಿಕವಾಗಿ ಸದೃಢರಾಗಬೇಕು ಎಂದು ಕಿವಿಮಾತು ಹೇಳಿದರು.
ರೈತರು ಕೃಷಿಗೆ ಪೂರಕವಾದ ಉಪಕಸುಬುಗಳನ್ನು ಅಳವಡಿಸಿಕೊಳ್ಳ ಬೇಕು. ಕುರಿಸಾಕಣೆ, ಹೈನುಗಾರಿಕೆ, ಮುಂತಾದ ಆರ್ಥಿಕ ಮೂಲದ ಉಪಕಸುಬುಗಳು ರೈತನನ್ನು ನೆಮ್ಮದಿಯಿಂದ ಇಡಬಲ್ಲವು. ಈ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸತ್ಪ್ರಜೆಗಳನ್ನಾಗಿ ಮಾಡಿ ಎಂದರು.