ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತಾಯಿಗೊಂಡನಹಳ್ಳಿಯಲ್ಲಿ ವಿಚಿತ್ರ ಕಾಯಿಲೆ

Srinivasa Murthy VN
Updated On : 4 Jul 2013, 12:02 pm

150ಕ್ಕೂ ಅಧಿಕ ಮಂದಿಗೆ ಕೀಲು ನೋವು, ಜ್ವರ ್ಣ ವೃದ್ಧರಲ್ಲಿ ಹೆಚ್ಚು ಕಾಣಿಸಿಕೊಂಡಿದ್ದು ನರಕಯಾತನೆ
ಕ.ಪ್ರ.ವಾರ್ತೆ ಮಧುಗಿರಿ ಜು.3
ತಾಲೂಕಿನ ತಾಯಿಗೊಂಡನಹಳ್ಳಿ ಗ್ರಾಮದಲ್ಲಿ  150ಕ್ಕೂ ಅಧಿಕ ಜನರಿಗೆ ಕೈಕಾಲು, ಕೀಲು ನೋವು, ಸುಸ್ತು  ಹಾಗೂ ವಿಚಿತ್ರ ಜ್ವರ ಕಾಣಿಸಿಕೊಂಡು ಬಳಲುತ್ತಿದ್ದಾರೆ.
ಬಹುತೇಕ ಈ ಕಾಯಿಲೆ ವೃದ್ದರಿಗೆ ಹೆಚ್ಚು ಕಾಣಿಸಿಕೊಂಡಿದ್ದು ನರಕಯಾತನೆ ಪಡುತ್ತಿದ್ದಾರೆ. ಇಷ್ಟಕ್ಕೆಲ್ಲಾ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಒಂದೆಡೆಯಾದರೆ ಮತ್ತೊಂದು ಕಡೆ ಗ್ರಾಮದಲ್ಲಿರುವ 3 ವಾಟರ್ ಟ್ಯಾಂಕಗಳಿದ್ದು ಇದರ ಸುತ್ತ ಜನರು ಬಟ್ಟೆ ತೊಳೆಯುತ್ತಾರೆ. ತೊಳೆದ ನೀರು ಟ್ಯಾಂಕ್ ಸುತ್ತಲಿನ ಚರಂಡಿಯಲ್ಲಿ ಶೇಖರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ಸಂತನೋತ್ಪತ್ತಿ ವೃದ್ಧಿಯಾಗಿ ಈ ಸೊಳ್ಳೆಗಳು ಜನರನ್ನು ಕಚ್ಚುವುದರಿಂದ ರೋಗ ಉಲ್ಬಣಗೊಂಡಿರುವುದಾಗಿ ಹೇಳಲಾಗುತ್ತಿದೆ.    
ಗ್ರಾಮದಲ್ಲಿ ಚರಂಡಿಗಳ  ಸ್ವಚ್ಛತೆ ಇಲ್ಲದೆ ನೈರ್ಮಲ್ಯ ಹದಗೆಟ್ಟಿದ್ದು ಚರಂಡಿಗಳಲ್ಲಿ ಮಡುಗಟ್ಟಿರುವ ಕೊಚ್ಚೆಯಿಂದ ಈ ಮಾರಕ ಕಾಯಿಲೆಗಳು ಹರಡುತ್ತಿರಬಹುದು ಎಂದು ಶಂಕಿಸಲಾಗಿದೆ.
ಅಲ್ಲದೆ ಗ್ರಾಮ ಪಂಚಾಯಿತಿಯವರು ಸೊಳ್ಳ ನಿರ್ಮೂಲನೆಗೆ ಫಾಗಿಂಗ್ ಮಾಡದೇ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಆಸ್ಪತ್ರೆ ತುಂಬ ರೋಗಿಗಳು: ಇದರಿಂದಾಗಿ ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಗೆ ಇದ್ದಕ್ಕಿದಂತೆ  ರೋಗಿಗಳ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾದ ಹಿನ್ನೆಲೆಯಲ್ಲಿ  ವಾರ್ಡ್‌ಗಳು ತುಂಬಿ ಹೋಗಿ ರೋಗಿಗಳು ನೆಲದ  ಮೇಲೆ ಮಲಗಿ  ಚಿಕಿತ್ಸೆ ಪಡೆದರು.ಪ್ರತಿನಿತ್ಯ ತಾಲೂಕಿನಲ್ಲಿ ಇಂತಹ ಕಾಯಿಲೆ ಉಲ್ಬಣವಾಗುತ್ತಿದ್ದು ಗ್ರಾಮ ಪಂಚಾಯಿತಿ ಜನರಲ್ಲಿ ಅರಿವು ಮೂಡಿಸುವ ಮೂಲಕ ಜನರ ಆರೋಗ್ಯದತ್ತ ಗಮನ ಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ
ಇದಲ್ಲದೆ ತಾಲೂಕಿನ ಮಿಡಿಗೇಶಿ ಹೋಬಳಿ ಲಕ್ಲಿಹಟ್ಟಿ ಮತ್ತು ಗರಣಿ ಪಂಚಾಯಿತಿಗೆ ಸೇರಿದ ಚನ್ನಮಲ್ಲೇನಹಳ್ಳಿ ಗ್ರಾಮದಲ್ಲಿಯೂ ಕೂಡ ಈ ವಿಚಿತ್ರ ರೋಗ ಕಾಣಿಸಿಕೊಂಡು ಜನರು ಬಳಲುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement