ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಸ್‌ನಿಲ್ದಾಣ ಶೌಚಾಲಯ ದುರಸ್ತಿಗೆ ಕ್ರಮ: ಹೇಮಂತ್

Srinivasa Murthy VN
Updated On : 5 Jul 2013, 10:38 am

ಕುಣಿಗಲ್: ಪಟ್ಟಣದ ಪುರಸಭೆ ಬಸ್‌ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಾಲಯದ ಸರಿಪಡಿಸಿ, ಸಾರ್ವಜನಿಕ ಸೇವೆಗೆ ನೀಡುವ ಸಂಬಂಧ ಪುರಸಭೆ ನೂತನ ಮುಖ್ಯಾಧಿಕಾರಿ ಹೇಮಂತ್ ಶರಣ್ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪುರಸಭೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಸೇವೆಗೆ ಸಾರ್ವಜನಿಕ ಶೌಚಾಲಯವನ್ನು 1984ರಲ್ಲಿ ಅಂದಿನ ಶಾಸಕ ದಿ. ವೈ.ಕೆ.ರಾಮಯ್ಯ ಅವರ ಅವಧಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿ ಎರಡು ವರ್ಷಗಳ ನಂತರ, ಸಾರ್ವಜನಿಕ ಸೇವೆಗೆ ನೀಡಲಾಗಿತ್ತು, ನಂತರ ಪ್ರತಿ ವರ್ಷವೂ ಪುರಸಭೆ ಸಾರ್ವಜನಿಕ ಶೌಚಾಲಯ ನಿರ್ವಹಣೆಗೆ ಬಹಿರಂಗ ಹರಾಜು ಮೂಲಕ ಗುತ್ತಿಗೆ ನೀಡಿ, ಆದಾಯ ಕ್ರೊಢೀಕರಿಸಲಾಗುತ್ತಿತ್ತು. 2012-13 ನೇ ಸಾಲಿನಲ್ಲಿ ಪುರಸಭೆಗೆ ಈ ಹರಾಜಿನಿಂದ ರು. 4 ಲಕ್ಷ ವರಮಾನ ಬಂದಿತ್ತು.
ಪುರಸಭೆ ವಾರ್ಷಿಕ ಹರಾಜಿನ ಬಗ್ಗೆ ಗಮನ ಹರಿಸುತ್ತಿತ್ತೇ ಹೊರತು, ಕಟ್ಟಡ ನಿರ್ಮಾಣಗೊಂಡು 27ವರ್ಷ ಕಳೆದರೂ ಕಟ್ಟಡದ ಜೀರ್ಣೋದ್ಧಾರಕ್ಕೆ ಗಮನಹರಿಸದ ಕಾರಣ, ಕಟ್ಟಡ ಶಿಥಿಲಾವಸ್ಥೆಗೆ ತಲುಪಿ ಕಟ್ಟಡದ ಮೇಲಿನ ನೀರಿನ ಟ್ಯಾಂಕ್ ಕುಸಿಯುವ ಹಂತಕ್ಕೆ ತಲುತಿತ್ತು. 2013-14 ನೇ ಸಾಲಿಗೂ ಸಾರ್ವಜನಿಕ ಶೌಚಾಲಯ ಹರಾಜಿಗೆ ಪುರಸಭೆ ಮುಂದಾದಾಗ, ಬಳಸುವ ಬಳಕೆದಾರರಿಗೆ ಸೂಕ್ತ ಮೂಲಭೂತ ಸೌಕರ್ಯ ಇಲ್ಲದಿರುವ ಕಾರಣ, ಕಟ್ಟಡ ಶಿಥಿಲಗೊಂಡಿರುವ ಕಾರಣ, ದುರಸ್ತಿಗೊಳಿಸುವ ತನಕ ಹರಾಜು ನಡೆಸದಂತೆ, ಒಂದು ವೇಳೆ ಹರಾಜು ನಡೆಸಿದ್ದೇ ಅದಲ್ಲಿ ಶೌಚಾಲಯಕ್ಕೆ ಬೀಗಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಕರವೇ, ಕನ್ನಡಸೇನೆ ಸೇರಿದಂತೆ ಇತರೆ ಕನ್ನಡಪರ ಸಂಘಟನೆಗಳು, ಸಂಘ ಸಂಸ್ಥೆಗಳು ಎಚ್ಚರಿಕೆ ನೀಡಿದ ಮೇರೆಗೆ ಅಧಿಕಾರಿಗಳು ಹರಾಜು ಪ್ರಕ್ರಿಯೆ ಮುಂದೂಡಿ, ಹಾಲಿ ಆಡಳಿತಾಧಿಕಾರಿಗಳಾದ ಉಪವಿಭಾಗಾಧಿಕಾರಿಗಳ ಗಮನಕ್ಕೆ ತಂದಿದ್ದರು.
ಈ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿಗಳು ಸಾಧ್ಯವಿರುವ ಕ್ರಮ ಕೈಗೊಂಡು, ಪುರಸಭೆ ಆದಾಯ ಕ್ರೂಡೀಕರಣಕ್ಕೆ ಸೂಚನೆ ನೀಡಿದ ಮೇರೆಗೆ, ಕಳೆದೆರಡು ದಿನಗಳ ಕೆಳಗೆ ಅಧಿಕಾರ ವಹಿಸಿಕೊಂಡ ನೂತನ ಮುಖ್ಯಾಧಿಕಾರಿ ಹೇಮಂತ್ ಶರಣ್, ಸಾರ್ವಜನಿಕ ಶೌಚಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಭಿಯಂತರರಾದ ಶ್ರೀಕಾಂತ್, ನರಸೇಗೌಡ, ಕಂದಾಯ ನಿರೀಕ್ಷಕ ರಮೇಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement