'ಉನ್ನತ ವ್ಯಾಸಂಗಕ್ಕೆ ಉತ್ತಮ ಅಂಕ ಗಳಿಸಿ'
ಕ.ಪ್ರ.ವಾರ್ತೆ ಹುಳಿಯಾರು ಜು. 24
ಇಂದಿನ ಆಧುನಿಕ ಪ್ರಪಂಚದಲ್ಲಿ ಪ್ರತಿಯೊಂದು ಕ್ಷೇತ್ರವೂ ಪೈಪೋಟಿಯುತವಾಗಿದ್ದು, ಮಕ್ಕಳು ಯಶಸ್ಸು ಗಳಿಸಬೇಕಾದರೆ ಕೇವಲ ತರಗತಿಯಿಂದ ತರಗತಿಗೆ ಕನಿಷ್ಠ ಅಂಕ ಗಳಿಸಿ ತೇರ್ಗಡೆಯಾದರೆ ಸಾಧ್ಯವಿಲ್ಲ. ಹೆಚ್ಚಿನ ಅಂಕ ಗಳಿಸಿದಾಗ ಮಾತ್ರ ಉನ್ನತ ವ್ಯಾಸಂಗಕ್ಕೆ ಹೆಚ್ಚೆಚ್ಚು ಅವಕಾಶಗಳು ತಾವಾಗಿಯೇ ಒದಗಿ ಬರುತ್ತವೆ ಎಂದು ಮುಖಂಡ ಮಹಮ್ಮದ್ ಸಜ್ಜಾದ್ ತಿಳಿಸಿದರು.
ರಂಜಾನ್ ಅಂಗವಾಗಿ ರಾಜ್ ಮಿನರಲ್ಸ್ ವತಿಯಿಂದ ಹುಳಿಯಾರಿನ ಸರ್ಕಾರಿ ಉರ್ದು ಪ್ರೌಢಶಾಲಾ ಮಕ್ಕಳಿಗೆ ಬುಧವಾರ ಉಚಿತವಾಗಿ ನೋಟ್ಬುಕ್, ಬ್ಯಾಗ್, ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಸ್ಲಿಂ ಸಮುದಾಯದ ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸುವ ಮೂಲಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚುವಂತೆ ಮಾಡಬೇಕಿದೆ ಎಂದರು.
ದಾನಿಗಳಾದ ರಾಜ್ ಮಿನರಲ್ಸ್ನ ಷಪಿ ಅಹಮದ್ ಮಕ್ಕಳಿಗೆ ನೋಟ್ಬುಕ್, ಬ್ಯಾಗ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕ ಚೆನ್ನಿಗರಾಮಯ್ಯ, ಟಿಪ್ಪು ಬ್ಯಾಂಕ್ನ ಇಮ್ರಾಜ್, ಸ್ಥಳೀಯರಾದ ರಹೀಂ, ಇಮ್ರಾನ್, ಶಿಕ್ಷಕರಾದ ಇರ್ಫಾನ್, ನಿರ್ಮಲ, ಸಲೀಮ್ ಸೇರಿದಂತೆ ಶಾಲಾ ಶಿಕ್ಷಕರು ಉಪಸ್ಥಿತರಿದರು.