ಶಿರಾ ಸರ್ಕಾರಿ ನೌಕರರ ಸಂಘ ನಿರ್ದೆಶಕರ ಆಯ್ಕೆ
ಕ.ಪ್ರ.ವಾರ್ತೆ ಶಿರಾ ಜು. 24
ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೆಶಕರ ಆಯ್ಕೆ ನಡೆಯಿತು.
ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಜುಲೈ 15 ಕ್ಕೆ ಎಲ್ಲಾ ಇಲಾಖೆಗಳಿಂದ ಒಟ್ಟು 55 ನಾಮಪತ್ರ ಸಲ್ಲಿಕೆಯಾಗಿದ್ದು, ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾದ ಜುಲೈ 16 ರಂದು 10 ಮಂದಿ ನಾಮಪತ್ರ ವಾಪಸ್ ಪಡೆದಿದ್ದು, 1 ನಾಮ ಪತ್ರ ತಿರಸ್ಕೃತಗೊಂಡಿತ್ತು. 17 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಅವಿರೋಧ ಆಯ್ಕೆಯ ನಂತರ ಉಳಿದ 9 ನಿರ್ದೇಶಕ ಸ್ಥಾನಗಳಿಗೆ ಇಲ್ಲಿನ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಚುನಾವಣೆ ನಡೆದು, ಎಣಿಕೆಯ ಕಾರ್ಯ ನಡೆಸಿ ಪ್ರಕಟಗೊಂಡ ಫಲಿತಾಂಶದಂತೆ ಜೂನಿಯರ್ ಕಾಲೇಜು ವಿಭಾಗದಿಂದ ಎಸ್.ಎಚ್.ಯಶ್ವ್‌ಂತ್, ಪಶುಪಾಲನಾ ಇಲಾಖೆಯಿಂದ ಬಿ.ಕೆ.ರಾಜಣ್ಣ, ಸಮಾಜ ಕಲ್ಯಾಣ ಇಲಾಖೆ ಮತ್ತು ಬಿ.ಸಿ.ಎಂ. ಇಲಾಖೆಯಿಂದ ಆರ್.ಅನಂತರಾಜು, ಭೂಮಾಪನ ಮತ್ತು ನೊಂದಣಾ ಮುದ್ರಾಂಕ ಇಲಾಖೆಯಿಂದ ಬಿ.ಎಂ.ಲಕ್ಷ್ಮೀಶ್, ಪ್ರೌಢಶಾಲಾ ವಿಭಾಗದಿಂದ ಕೆ.ಟಿ.ರುದ್ರಮುನಿ, ಅಬಕಾರಿ ಮತ್ತು ಕಾರ್ಮಿಕ ಇಲಾಖೆಯಿಂದ ಬಿ.ಆರ್.ನಾರಾಯಣ ಗೌಡ, ಪ್ರಾಥಮಿಕ ಶಾಲಾ ವಿಭಾಗದಿಂದ ಆರ್.ದೇವರಾಜು, ವೈ.ಕಲ್ಲಪ್ಪ, ದೊಡ್ಡಣ್ಣ ಆಯ್ಕೆಗೊಂಡಿದ್ದಾರೆ.