ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ತಾಪಂ ಕಾರ್ಯಕ್ರಮಕ್ಕೆ ಕೂಲಿಕಾರರ ದಾಳಿ, ದಾಂದಲೆ

Srinivasa Murthy VN
Updated On : 27 Jul 2013, 12:35 pm

ಕ.ಪ್ರ. ವಾರ್ತೆ ಪಾವಗಡ ಜು. 26
ತಾಪಂನಿಂದ ಆಯೋಜಿಸಿದ್ದ ಎನ್‌ಆರ್‌ಇಜಿ ಅರಿವು ಕಾರ್ಯಕ್ರಮದ ವೇದಿಕೆಗೆ ನುಗ್ಗಿದ ತಾಲೂಕಿನ ನೂರಾರು ಕೂಲಿಕಾರರು ಹಳೇ ಸಾಲಿನಲ್ಲಿ ನಿರ್ವಹಿಸಿದ ಕಾಮಗಾರಿಗಳ ಹಣ ಬಿಡುಗಡೆಯಾಗುವವರೆಗೂ ಯೋಜನೆಯ ಹೊಸ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲವೆಂದು ಆರೋಪಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಘಟನೆ ಶುಕ್ರವಾರ ಪಟ್ಟಣದ ಎಸ್‌ಎಸ್‌ಕೆ ಬಯಲು ರಂಗಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಮಹಿಳಾ ಸಂಘಗಳ ಸಾವಿರಾರು ಮಹಿಳೆಯರು ಆಗಮಿಸಿದ್ದರು.
ತಾಪಂ ಇಒ ರಂಗನಾಥ್ ನೇತೃತ್ವದಲ್ಲಿ ಕಾರ್ಯಕ್ರಮ ಶುರುವಾಗುತ್ತಿದ್ದಂತೆ ಕೂಡಲೇ ವೇದಿಕೆ ಮೇಲೆ ಹತ್ತಿದ ನೂರಾರು ಗ್ರಾಮೀಣಾ ಕೂಲಿಕಾರರು ದಾಂದಲೇ ಮಾಡುವುದರೊಂದಿಗೆ ತುಮಕೂರಿನಿಂದ ಆಗಮಿಸಿದ್ದ ಜಿಪಂ ಉಪ ಕಾರ್ಯದರ್ಶಿ ಬಿ.ಕೃಷ್ಣಪ್ಪ ಅವರನ್ನು ವೇದಿಕೆಯಲ್ಲಿಯೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.
ಇದೇ ಸಂದರ್ಭದಲ್ಲಿ ತಾ,ಕಾಲಿಕಾರರ ಸಂಘದ ಕಾರ್ಯದರ್ಶಿ ಕೊತ್ತೂರು ಕೊಂಡಯ್ಯ, ಗಂಗಸಾಗರ ಜಯರಾಮ್ ಮುಂತಾದವರು ಮಾತನಾಡಿ ಕಳೆದ 2010-11ನೇ ಸಾಲಿಗೆ ರಾಷ್ಟ್ರೀಯ ಮಹಾತ್ಮಗಾಂಧಿ ಯೋಜನೆ ಅಡಿಯಲ್ಲಿ ತಾಲೂಕಿನಾದ್ಯಂತ ಸುಮಾರು 20ಕೋಟಿಯ ಗುಣಮಟ್ಟದ ಕಾಮಗಾರಿಗಳ ನಿರ್ವಹಿಸಿದ್ದು ಇದುವರಿವಿಗೂ ಹಣ ಬಿಡುಗಡೆಯಾಗಿಲ್ಲ. ಇದನ್ನೇ ನಂಬಿ ಕೆಲಸ ಮಾಡಿದ ತಾ,ಸಾವಿರಾರು ಕೂಲಿಕಾರರು ಇಂದು ಬೀದಿ ಪಾಲಾಗಿದ್ದಾರೆ ಎಂದು ಆರೋಪಿಸಿದರು.
ಯೋಜನೆಯ ಹಳೇ ಕಾಮಗಾರಿಗಳ ಹಣ ಬಿಡುಗಡೆಯಾಗುವವರೆವಿಗೂ ಹೊಸ ಕಾಮಗಾರಿಗಳ ಅನುಷ್ಠಾನಕ್ಕೆ ಅವಕಾಶ ಸೇರಿದಂತೆ ಎನ್‌ಆರ್‌ಇಜಿ ಕಾರ್ಯಕ್ರಮಗಳನ್ನು ಅಡ್ಡಿಪಡಿಸುವುದಾಗಿ ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪ ಕಾರ್ಯದರ್ಶಿ ಬಿ.ಕೃಷ್ಣಪ್ಪ ಸಮಸ್ಯೆ ಕುರಿತು ಜಿಪಂ ಸಿಇಒ ಅವರೊಂದಿಗೆ ಮಾತನಾಡಿ ಕೂಡಲೇ ಹಣ ಬಿಡುಗಡೆ ಮಾಡುವ ಭರವಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮ ಮುಂದುವರಿಯಲು ಕೂಲಿಕಾರರಿಗೆ ಏನೇ ಸಲಹೆ ನೀಡಿದರೂ ಪ್ರಯೋಜನಾವಾಗದ ಕಾರಣ ಕಾರ್ಯಕ್ರಮ ಮೊಟಕುಗೊಳಿಸಿ ವೇದಿಕೆಯಿಂದ ಅಧಿಕಾರಿಗಳು ನಿರ್ಗಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement