ತುಮಕೂರಿನಲ್ಲಿ ವಿಜಯ್ ದಿವಸ್ ಆಚರಣೆ
ಕ.ಪ್ರ. ವಾರ್ತೆ ತುಮಕೂರು ಜು. 26
ಭಗತ್ ಕ್ರಾಂತಿ ಸೇನೆ ವತಿಯಿಂದ ನಗರದ ಟೌನ್ಹಾಲ್ ವೃತ್ತದಲ್ಲಿ ವಿಜಯ ದಿವಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದೇಶ ಇಲ್ಲಿಯವರೆಗೆ ಗೆದ್ದ ಯುದ್ದಗಳ ಸ್ಮರಣಾರ್ಥವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಗತ್ ಕ್ರಾಂತಿ ಸೇನೆ ಯುವಕರು ಶುಕ್ರವಾರ ಬೆಳಗ್ಗೆ ನಗರದ ಟೌನ್ಹಾಲ್ ವೃತ್ತದಲ್ಲಿ ಜಮಾವಣೆಗೊಂಡು ದೇಶಕ್ಕಾಗಿ ಯುದ್ದಗಳಲ್ಲಿ ತಮ್ಮ ಪ್ರಾಣಾರ್ಪಣೆ ಮಾಡಿ ವಿಜಯಕ್ಕೆ ಕಾರಣರಾದ ವೀರಯೋಧರ ಭಾವಚಿತ್ರ ಇಟ್ಟು ಪುಷ್ಪಾರ್ಚನೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ವಿಜಯ ದಿವಸ್ ಕಾರ್ಯಕ್ರಮವನ್ನು ಹಾಗೂ ಈ ದಿನವನ್ನು ವೀರ ಸೈನಿಕರಿಗೆ ಹಾಗೂ ಪೊಲೀಸರಿಗೆ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಚೇತನ ಟುಟೋರಿಯಲ್ಸ್ನ ರವೀಶ್, ಸೈನಿಕರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ನಮ್ಮನ್ನೆಲ್ಲಾ ಕಾಪಾಡುತ್ತಾರೆ. ಅಂತಹ ಸೈನಿಕರಿಗೆ ಹಾಗೂ ಪೊಲೀಸರಿಗೆ ಗೌರವಾರ್ಪಣೆ ಮಾಡುವ ಮೂಲಕ ನೈತಿಕ ಬೆಂಬಲ ಹಾಗೂ ಆತ್ಮಸ್ಥೈರ್ಯವನ್ನು ನೀಡಬೇಕೆಂದರು.
ಕಾರ್ಯಕ್ರಮದ ನೇತೃತ್ವವನ್ನು ಆರಾಧ್ಯ ಮಂಚಲದೊರೆ, ಚೇತನ್, ಸ್ವಾಮಿ, ಪ್ರತಾಪ್, ಗಂಧರ್ವ, ಕಿರಣ್, ಶ್ರೀನಿವಾಸಗೌಡ, ರೋಷನ್, ಹೇಮಂತ್, ನಿಶಾಂತ್, ತೇಜ, ರವಿ, ಪವನ್,ಸುಹಾಸ್, ಮನು, ರಾಜು, ಗೌಡ, ರಘು, ನಿಜ, ರುದ್ರೇಶ್, ಪವನ್ ಪೂಜಾರಿ, ಆದಿ, ಶಶಿ ವಹಿಸಿದ್ದರು.