ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಿವೃತ್ತ ಪೊಲೀಸ್ ಅಧಿಕಾರಿಗಳ ಸಭೆ

Srinivasa Murthy VN
Updated On : 27 Jul 2013, 12:50 pm

ತುಮಕೂರು: ಕೊರಟಗೆರೆ ಪಟ್ಟಣದ ಬಾಲಕರ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಬಳಿ, ಕೊರಟಗೆರೆ ತಾಲೂಕು ನಿವೃತ್ತ ಪೊಲೀಸ್ ಅಧಿಕಾರಿಗಳ ಸಭೆಯನ್ನು ಇದೇ ಜುಲೈ 29 ರಂದು ಏರ್ಪಡಿಸಲಾಗಿದೆ. ಸೇವಾನಿರತ ಪೊಲೀಸರಿಗೆ ಇರುವಂತೆ ನಿವೃತ್ತ ಪೊಲೀಸರಿಗೂ ಆರೋಗ್ಯ  ಭಾಗ್ಯ ಯೋಜನೆಯನ್ನು ವಿಸ್ತರಿಸುವಂತೆ ಕೊರಟಗೆರೆ ತಾಲೂಕು ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದಿಂದ ಒತ್ತಾಯಿಸಿ ಮನವಿ ಮಾಡುವ ವಿಚಾರವನ್ನು ಈ ಸಭೆಯಲ್ಲಿ ಚರ್ಚಿಸಲಾಗುವುದು ಮತ್ತು ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು. ಆರೋಗ್ಯ ಭಾಗ್ಯ ಯೋಜನೆಯನ್ನು ಜಾರಿ ಮಾಡುವುದಾಗಿ ಹಿಂದಿನ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿ ನಿವೃತ್ತ ಪೊಲೀಸರ ಪಟ್ಟಿ ತಯಾರಿಸುವ ಹಂತದಲ್ಲಿ ಸ್ಥಗಿತಗೊಂಡಿದ್ದು ಈ ಬಗ್ಗೆ ಒಕ್ಕೂಟದಿಂದ ಪುನಃ ಒತ್ತಾಯ ಮಾಡಲಾಗುತ್ತಿದೆ. ಆದ್ದರಿಂದ ತಾಲೂಕಿನ ಎಲ್ಲಾ ನಿವೃತ್ತ ಪೊಪೊಲೀಸರು ಮತ್ತು ಮೃತ ನಿವೃತ್ತ ಪೊಲೀಸ್ ಅಧಿಕಾರಿಗಳ ಕುಟುಂಬ ಪಿಂಚಣಿದಾರರು ಈ ಸಭೆಗೆ ತಪ್ಪದೆ ಹಾಜರಾಗಿ ತಮ್ಮ ಹೆಸರು ನೋಂದಾಯಿಸಿಕೊಂಡು ದೊರೆಯಬಹುದಾದ ಅನುಕೂಲಗಳನ್ನು ಪಡೆಯಬಹುದೆಂದು ಕೋರಲಾಗಿದೆ.

ಇಂದು ನೋಟ್ ಪುಸ್ತಕಗಳ ವಿತರಣೆ
ಕೊರಟಗೆರೆ: ಇಲ್ಲಿನ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಕೊರಟಗೆರೆ ತಾಲೂಕಿನ ಎಲ್ಲಾ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ 2012-13 ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಧನ ಮತ್ತು ನೋಟ್ ಪುಸ್ತಕಗಳ ವಿತರಣೆ ಸಮಾರಂಭ ಇದೇ ತಿಂಗಳ 27 ರಂದು ಶನಿವಾರ ನಡೆಯಲಿದೆ. ಇದಲ್ಲದೆ ತಾಲೂಕಿನ ಎಲ್ಲಾ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ 2013-14 ನೇ ಸಾಲಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಗುವುದು. ತಾಲೂಕಿನ ಎಲ್ಲಾ ಕಾಲೇಜು ಮತ್ತು ಪ್ರೌಢಶಾಲೆಯ ಉಪನ್ಯಾಸಕರು ಮತ್ತು ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಸಮಾರಂಭಕ್ಕೆ ಕರೆದುಕೊಂಡು ಬರಲು ಸೂಚಿಸಿದೆ.

ಇಂದಿನಿಂದ ಗಮಕ ಹಬ್ಬ
ತುಮಕೂರು: ಇಲ್ಲಿನ ಸೋಮೇಶ್ವರಪುರಂನ ವಾಸವಿ ದೇವಸ್ಥಾನದಲ್ಲಿ ಇದೇ ತಿಂಗಳ 27 ರಿಂದ ಆಗಸ್ಟ್ 3 ರವರೆಗೆ ಪ್ರತಿ ದಿನ ಸಂಜೆ 6.15 ಕ್ಕೆ ಗಮಕ ಹಬ್ಬ ಆಯೋಜಿಸಲಾಗಿದೆ.
ಗಮಕ ಭಾರತೀ ಚಾರಿಟಬಲ್ ಟ್ರಸ್ಟ್, ಜಿಲ್ಲಾ ಗಮಕ ಕಲಾ ಪರಿಷತ್ ವತಿಯಿಂದ ಆಯೋಜಿಸಲಾಗಿದೆ. ಜೈಮಿನಿ ಭಾರತ ಅಶ್ವಮೇಧಿಕಾ ಪರ್ವ ಗಮಕೋತ್ಸವ ನಡೆಯಲಿದೆ. ಸಾನಿಧ್ಯವನ್ನು ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಗಮಕ ಭಾರತಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಅನಂತರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಪ್ರಭಾಕರ ಶಾಸ್ತ್ರಿ, ಕೆನರಾ ಬ್ಯಾಂಕ್ ಗ್ರಾಮೀಣ ವೃತ್ತ ಕಚೇರಿ ಉಪಮಹಾಪ್ರಬಂಧಕ ಡಾ. ಎಂ. ರೆಡ್ಡಯ್ಯ, ಆರ್.ಜಿ. ಸ್ವಾಮಿ, ಲವಕುಮಾರ್ ಆಗಮಿಸಲಿದ್ದಾರೆ. ಕಾವ್ಯ ವಾಚನವನ್ನು ಗಮಕಿ ಪದ್ಮಾ ಸೂರ್ಯನಾರಾಯಣ ಮಾಡಲಿದ್ದಾರೆ. ವಿದ್ವಾನ್ ಬಿ.ಎಲ್. ಕೃಷ್ಣಶರ್ಮ ವ್ಯಾಖ್ಯಾನ ನೀಡಲಿದ್ದಾರೆ.

ಇಂದು ಶಿರಾದಲ್ಲಿ ವಿಶೇಷ ಸತ್ಸಂಗ
ತುಮಕೂರು: ಶಿರಾ ನಗರದ ರಾಮಕೃಷ್ಣ-ಶಾರದಾ ಸತ್ಸಂಗ ಕೇಂದ್ರದ ವತಿಯಿಂದ ಮಂಜುಶ್ರೀ ಕನ್ವೆಂಷನ್ ಹಾಲ್‌ನಲ್ಲಿ ಇದೇ ಜುಲೈ 27 ರಂದು ಶನಿವಾರ ಸಂಜೆ 6.30 ರಿಂದ 8.30 ರವರೆಗೆ ಶ್ರೀಗುರುಪೂರ್ಣಿಮೆಯ ಆಚರಣೆ ಅಂಗವಾಗಿ ವಿಶೇಷ ಸತ್ಸಂಗ ಕಾರ್ಯಕ್ರಮ ಏರ್ಪಡಿಸಲಾಗಿದೆ. ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ಸ್ವಾಮಿ ವೀರೇಶಾನಂದ ಸರಸ್ವತೀಯವರು ಈ ಸಮಾರಂಭದ ಸಾನ್ನಿಧ್ಯ ವಹಿಸಿ ಗಾನ ಪ್ರವಚನವನ್ನು ನೆರವೇರಿಸಿಕೊಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement