ಹನುಮಂತರಾಯಪ್ಪಗೆ ನಾಳೆ ಅಭಿನಂದನೆ
ಕ.ಪ್ರ. ವಾರ್ತೆ ತುಮಕೂರು ಜು. 26
ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ತುಮಕೂರು ಜಿಲ್ಲೆಯವರೇ ಆದ ಕೆ.ಪಿ. ಹನುಮಂತರಾಯಪ್ಪನವರಿಗೆ ಅವರ ಅಭಿಮಾನಿಗಳು ಜು.28 ರಂದು ಅಭಿನಂದನಾ ಸಮಾರಂಭ ಏರ್ಪಡಿಸಿದ್ದಾರೆ.
ಕೆ.ಪಿ.ಹನುಮಂತರಾಯಪ್ಪನವರು ಇದೇ ಜುಲೈ 31 ರಂದು ವಯೋ ನಿವೃತ್ತಿ ಹೊಂದಲಿದ್ದು, ಅವರಿಗೆ ಅವರ ಅಭಿಮಾನಿಗಳು ಹಾಗೂ ಶಿಷ್ಯರು ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದ್ದಾರೆ.
ಭಾನುವಾರ ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಧ್ಯಾಹ್ನ ಉಪಹಾರ ಯೋಜನೆಯ ಸಹ ನಿರ್ದೇಶಕ ಜಯಕುಮಾರ್, ತುಮಕೂರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ. ಮೋಹನ್ ಕುಮಾರ್, ಡಯಟ್ ಪ್ರಾಂಶುಪಾಲ ಈಶ್ವರಯ್ಯ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಟಿ.ಎಸ್. ಆಂಜನಪ್ಪ ಭಾಗವಹಿಸುವರು. ಈ ಸಮಾರಂಭಕ್ಕೆ ಕೆ.ಪಿ.ಎಚ್.ರವರ ಅಭಿಮಾನಿಗಳು, ಶಿಷ್ಯರು ಭಾಗವಹಿಸಿ ಯಶಸ್ವಿಗೊಳಿಸಲು ಸ್ವಾಗತ ಸಮಿತಿ ತಿಳಿಸಿದೆ.
ಇಂದು ಶಿಕ್ಷಕ, ಶಿಕ್ಷಕಿಯರ ಮಿಲಾಪ್ ಶಿಬಿರ
ಕ.ಪ್ರ. ವಾರ್ತೆ ತುಮಕೂರು ಜು. 26
ಇಲ್ಲಿನ ಮಹಾತ್ಮಗಾಂಧಿ ಕ್ರೀಡಾಂಗಣದ ಮುಂಭಾಗ ಸೇವಾದಳ ಕಚೇರಿಯಲ್ಲಿ ಇದೇ ತಿಂಗಳ 26 ರಂದು ಬೆಳಗ್ಗೆ ಭಾರತ ಸೇವಾದಳ ಜಿಲ್ಲಾ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಶಿಕ್ಷಕ, ಶಿಕ್ಷಕಿಯರ ಮಿಲಾಪ್ ಶಿಬಿರ ಏರ್ಪಡಿಸಲಾಗಿದೆ.
ಧ್ವಜ ವಂದನೆಯನ್ನು ಸಂಸದ ಜಿ.ಎಸ್. ಬಸವರಾಜು ಸ್ವೀಕರಿಸಲಿದ್ದು, ಸಮಾರಂಭವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರ, ಮಾನವ ಹಕ್ಕು ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ನೆರವೇರಿಸುವರು. ಅಧ್ಯಕ್ಷತೆಯನ್ನು ಜಿಲ್ಲಾ ಭಾರತ ಸೇವಾ ದಳದ ಅಧ್ಯಕ್ಷ ಹೆಚ್.ಸಿ. ಹನುಮಂತಯ್ಯ ವಹಿಸಲಿದ್ದು, ಪ್ರಧಾನ ಕಾರ್ಯದರ್ಶಿ ಚಿ.ನ. ಏಕೇಶ್ವರ್ ಪ್ರಾಸ್ತಾವಿಕ ನುಡಿಗಳನ್ನಾಡುವರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ.ಎನ್. ರಾಜಣ್ಣ, ಡಾ. ರಫೀಕ್ ಅಹಮದ್, ಸುರೇಶ್ಗೌಡ, ಡಿ.ನಾಗರಾಜಯ್ಯ, ಎಂ.ಟಿ. ಕೃಷ್ಣಪ್ಪ, ಕೆ.ಷಡಕ್ಷರಿ, ಸಿ.ಬಿ.ಸುರೇಶ್ಬಾಬು, ಸುಧಾಕರ್ ಲಾಲ್, ಕೆ.ಎಂ.ತಿಮ್ಮ ರಾಯಪ್ಪ, ಎಸ್.ಆರ್. ಶ್ರೀನಿವಾಸ್, ವಿ.ಪ. ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್, ಡಾ. ಶಿವಯೋಗಿಸ್ವಾವು, ವೈ.ಎ. ನಾರಾಯಣಸ್ವಾಮಿ, ಜಿ.ಪಂ.ಅಧ್ಯಕ್ಷೆ ಪ್ರೇಮ ಮಹಾಲಿಂಗಪ್ಪ ಭಾಗವಹಿಸುವರು.
ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಸತ್ಯಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ್ ಕುಮಾರ್, ಮಧುಗಿರಿ ಉಪನಿರ್ದೇಶಕ ಆಂಜನಪ್ಪ, ಯುವಜನ ಕ್ರೀಡಾ ಇಲಾಖೆಯ ಉಪನಿರ್ದೇಶಕ ಸಿ.ಬಿ. ರಂಗಯ್ಯ, ವೆಂಕಟೇಶ್, ಜೆ.ಎಸ್. ನಾಯ್ಕ, ಎಸ್.ಹೆಚ್. ಚಂದ್ರಶೇಖರ್, ಸಾಹಿತಿ ಕವಿತಾಕೃಷ್ಣ ಭಾಗವಹಿಸುವರು.