ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಸಮಾಜ ತಿದ್ದುವ ಹೊಣೆ ಪತ್ರಕರ್ತನದ್ದು'

Srinivasa Murthy VN
Updated On : 28 Jul 2013, 12:36 pm

ಮಧುಗಿರಿ: ಪತ್ರಕರ್ತರು ವಸ್ತುನಿಷ್ಠ ವರದಿ ನೀಡುವ ಮೂಲಕ ಸಮಾಜದ ಅಂಕು-ಡೊಂಕು ತಿದ್ದುವ ಕೆಲಸ ಮಾಡಬೇಕು ಎಂದು ಹಿರಿಯ ಪತ್ರಕರ್ತ ಚಿ.ಸೂ.ಕೃಷ್ಣಮೂರ್ತಿ ತಿಳಿಸದರು. ಇತ್ತೀಚೆಗೆ ಪಟ್ಟಣದ ರೋಟರಿ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಎಂ.ವೆಂಕಟರಾಮು ಅಧ್ಯಕ್ಷತೆ ವಹಿಸಿದ್ದರು. ರೋಟರಿ ಪದಾಧಿಕಾರಿಗಳಾದ ಲತಾ ನಾರಾಯಣ್, ಟಿ.ಸುನಂದಾ, ರಂಗನಾಥಬಾಬು,ಕೆ.ರಂಗನಾಥ್, ರಂಗನಾಥಪ್ಪ, ತಾ.ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಕಾಂತ್,ನೌಕರರ ಸಂಘಧ ಸದಸ್ಯ ಸಂಜಯ್, ಎಂ.ಶಿವಲಿಂಗಪ್ಪ, ಎನ್.ಆರ್.ನಾಗರಾಜು,ಜಯರಾಮಯ್ಯ, ಕೆ.ಎಂ.ಮಧು,ಬಾಲಾಜಿ, ಪತ್ರಕರ್ತ ನಾರಾಯಣರಾಜು,ರಾಮು,ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನಯ್ಯ ಸ್ವಾಗತಿಸಿ ವಂದಿಸಿದರು.

ಉತ್ತರಾಖಂಡ್ ಸಂತ್ರಸ್ತರಿಗೆ ನೆರವು
ತುಮಕೂರು: ಹಿಮಾಲಯ ಸುನಾಮಿಯಿಂದ ಸರ್ವನಾಶವಾಗಿರುವ ಉತ್ತರಾಖಂಡ್‌ನ ಸಂತ್ರಸ್ತರ ನೆರವಿಗೆ ತುಮಕೂರಿನ 4 ಕರ್ನಾಟಕ ಬೆಟಾಲಿಯನ್ ಸಹಾಯ ಹಸ್ತ ನೀಡಿದೆ. ತುಮಕೂರಿನ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ 3, 4 ಎನ್.ಸಿ.ಸಿ. ಕಂಪೆನಿಯ ಸ್ವಯಂಸೇವಕರು ಕಂಪೆನಿ ಕಾಯ್ ಕಮಾಂಡರ್ ರಾಮಲಿಂಗಾ ರೆಡ್ಡಿಯವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದ ಸುಮಾರು 8195 ರು. ಗಳನ್ನು ಸಂಗ್ರಹಿಸಿದರು.

ದ. ಶೈಕ್ಷಣಿಕ ಜಿಲ್ಲೆ ಕಾರ್ಯಕಾರಿ ಮಂಡಳಿ
ತುಮಕೂರು: ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಕಾರ್ಯಕಾರಿಣಿ ಮಂಡಳಿ ಹಾಗೂ 6 ತಾಲೂಕುಗಳ ಶಿಕ್ಷಕ ಮುಖಂಡರ ಸಭೆಯನ್ನು ತುಮಕೂರಿನ ಆರ್ಯನ್ ಪ್ರೌಢಶಾಲೆಯಲ್ಲಿ ಪರಮೇಶ್ವರಯ್ಯ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಗೌರವಾಧ್ಯಕ್ಷರಾಗಿ ಹೆಚ್. ಕಾಂತರಾಜು, ಅಧ್ಯಕ್ಷರಾಗಿ ಎಂ.ಎಸ್. ಪರಮೇಶ್ವರಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಜಿ. ಧನಂಜಯ, ಖಜಾಂಚಿಯಾಗಿ ಡಿ.ವಿ. ಶ್ರೀಕಾಂತ್, ಉಪಾಧ್ಯಕ್ಷರಾಗಿ ಬೀರೇಂದ್ರ ಆರ್. ಆನಂದ ವಾಡೇಕರ್, ನಟರಾಜ್, ಎಸ್.ಎಸ್. ನಂಜಪ್ಪ, ಎಂ.ವಿ., ಸಹಕಾರ್ಯದರ್ಶಿಯಾಗಿ ಈಶ್ವರಯ್ಯ ಹೆಚ್, ವಸಂತ್‌ಕುಮಾರ್ ಹೆಚ್‌ಎಂ. ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್, ದೊಡ್ಡಬಸಪ್ಪ, ಪ್ರಸಾದ್ ನಿಡಸಾಲೆ, ಜೀವಂದರ್‌ಕುಮಾರ್, ಪ್ರಸಾದ್ ಎಸ್. ಸುರೇಶ್, ನಿರ್ದೇಶಕರಾಗಿ ಲೋಕೇಶಯ್ಯ, ಸಿ. ನಾರಾಯಣಪ್ಪ, ಸೋಮಶೇಖರ್,  ಸಿದ್ದವೀರಪ್ಪ, ಆರ್.ಎಸ್. ಲೋಕೇಶ್, ಜಿ.ಎನ್. ನಟರಾಜ್, ಶ್ರೀನಿವಾಸಯ್ಯ, ಟಿ.ಜಿ. ಮಹೇಶ್, ರಾಜ್ಯ ಸಂಘದ ಪದಾಧಿಕಾರಿಗಳಾಗಿ ರಿಜ್ವಾನ್‌ಭಾಷಾ ಸಾಬ್, ಕೆ. ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement