ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪಠ್ಯ ವಸ್ತು ಬದಲಾದರೆ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಸಾಧ್ಯವಿಲ್ಲ

Srinivasa Murthy VN
Updated On : 29 Jul 2013, 12:19 pm

ಕ.ಪ್ರ.ವಾರ್ತೆ ತುಮಕೂರು ಜು.28
ಕೇವಲ ಪಠ್ಯ ವಸ್ತು ಬದಲಾದರೆ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಸಾಧ್ಯವಾಗುವುದಿಲ್ಲ. ಜತೆಗೆ ಶಿಕ್ಷಕರ ಮನೋಧರ್ಮವೂ ಬದಲಾಗಬೇಕು ಎಂದು ಪರಿಸರವಾದಿ ಸಿ. ಯತಿರಾಜು ಅಭಿಪ್ರಾಯಪಟ್ಟರು.
ಅವರು ತುಮಕೂರು ವಿಜ್ಞಾನ ಕೇಂದ್ರ ಹಾಗೂ ಸಪ್ತಗಿರಿ ಪ.ಪೂ. ಕಾಲೇಜು ಆಶ್ರಯದಲ್ಲಿ ನಡೆದ ಬೆಂಗಳೂರು ವಲಯ ಮಟ್ಟದ ಪ್ರೌಢ ಶಾಲೆಗಳಲ್ಲಿ ಜೀವವಿಜ್ಞಾನ ಬೋಧಿಸುವ ಶಿಕ್ಷರಿಗೆ ಐದು ದಿನ ಪ್ರಾಯೋಗಿಕ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಓಬಿರಾಯನ ಕಾಲದ ಬೋಧನೆ ಮತ್ತು ಮೌಲ್ಯಮಾಪನ ಇಂದಿನ ಆಧುನಿಕ ಶಿಕ್ಷಣಕ್ಕೆ ಪೂರಕವಾಗುವುದಿಲ್ಲ. ಇಂದು ಶಿಕ್ಷಕರು ಕಲಿಕೆಗೆ ಅವಕಾಶ ಕಲ್ಪಿಸುವಂತವರಾಗಬೇಕು ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಅಧ್ಯಕ್ಷ ಡಾ. ಎಚ್.ಎಸ್. ನಿರಂಜನಾರಾಧ್ಯ ಮಾತನಾಡಿ ವಿಜ್ಞಾನ ಇಂದು ಎಲ್ಲಾ ಮಕ್ಕಳ ಕೈಗೆ ಸಿಗುವ ತಂತ್ರಜ್ಞಾನ. ಪ್ರಯೋಗಗಳ ಮೂಲಕ ಅದು ಸಿಗುವಂತಾಗಬೇಕು. ಡಿಎನ್‌ಎ ಯಂತಹ ಸಂಕೀರ್ಣ ರಚನೆ ಕೂಡ ಇಂದು ಪ್ರಯೋಗಾಲಯದಲ್ಲಿಯೇ ವೀಕ್ಷಿಸಲು ಸಾಧ್ಯವಿದೆ. ಅಂತಹ ತಂತ್ರಜ್ಞಾನ ಎಲ್ಲಾ ಶಿಕ್ಷಕರ ಕೈಗೆ ಎಟಕುವಂತೆ ಮಾಡುವುದೇ ಈ ಕಾರ್ಯಾಗಾರದ ಉದ್ದೇಶ ಎಂದರು. ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ. ವಿಶ್ವನಾಥ್ ಮಾತನಾಡಿ ಶಿಕ್ಷಕರು ವಿಜ್ಞಾನವನ್ನು ನಿರರ್ಗಳವಾಗಿ ಕಲಿಸುವಂತಾಗಬೇಕು. ಪ್ರತಿಭಾವಂತ ಶಿಕ್ಷಕರು ತಮ್ಮ ಅನುಭವ ಹಂಚಿಕೊಂಡು ಈ ಕಾರ್ಯಾಗಾರವನ್ನು ಅರ್ಥಪೂರ್ಣವಾಗಿಸಿ ಎಂದು ಮನವಿ ಮಾಡಿದರು. ಸಪ್ತಗಿರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಎಸ್. ಕುಮಾರ್ ಉದ್ಘಾಟಿಸಿದರು. ರಾಮಕೃಷ್ಣಪ್ಪ ನಿರೂಪಿಸಿದರು. ನಾಗರಾಜರಾವ್ ಮತ್ತು ಕೆ.ಎನ್. ರಾಮಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement