ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನವೇ ಶ್ರೇಷ್ಠ

Srinivasa Murthy VN
Updated On : 29 Jul 2013, 12:19 pm

ಕ.ಪ್ರ.ವಾರ್ತೆ ಕುಣಿಗಲ್ ಜು.28
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನವೇ ಶ್ರೇಷ್ಠ ಹೊರತು ಯಾವುದೇ ಧರ್ಮವಲ್ಲ, ಮಠ, ಮಂದಿರಗಳಿಗಿಂತಲೂ ಸಂಸತ್ ಭವನವೇ ಶ್ರೇಷ್ಠ. ಸಂವಿಧಾನದಡಿಯಲ್ಲಿ ರಚಿತಗೊಂಡಿರುವ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕಾನೂನಿನ ಮುಂದೆ ಎಲ್ಲರೂ ಸರಿಸಮಾನರೆಂದು ಗದಗ ಡಂಬಳ ಮಠಾಧೀಶರಾದ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ತಿಳಿಸಿದರು.
ಭಾನುವಾರ, ಯಡೆಯೂರಿನಲ್ಲಿ ತೋಂಟದ ಸಿದ್ದಲಿಂಗೇಶ್ವರ ಕೈಂಕರ್ಯ ಸೇವಾ ಸಂಘ ಐದು ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಸಿದ್ದಲಿಂಗ ಭಕ್ತರ ವಸತಿ ಸಮುಚ್ಚಯ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿ, ಕಾಯಕ, ಪ್ರಸಾದ, ದಾಸೋಹ ಶರಣ ತತ್ವಗಳ ಜೀವಧಾತು, ಕಾಯಕವಂತರಾಗಿ ದುಡಿದು, ದಾಸೋಹಕ್ಕೆ ಹೆಚ್ಚು ಒತ್ತು ನೀಡಬೇಕೆಂದರು. ಪ್ರಸಕ್ತ ದಿನಗಳಲ್ಲಿ ಗುಂಡಿ, ಗುಂಡಾರಗಳ ನಿರ್ಮಾಣಕ್ಕಿಂತ ಶರಣ ಸಂಸ್ಕೃತಿಯನ್ನು ರಕ್ಷಿಸಿ, ಪ್ರಚಾರ ಮಾಡುವ ಕೇಂದ್ರಗಳ ಅವಶ್ಯಕತೆ ಇದೆ ಎಂದರು.
ವಸತಿ ಸಮುಚ್ಚಯ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಸುತ್ತೂರು ಮಠದ ಡಾ.ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿ, ಸರ್ಕಾರದ ನೆರವಿಲ್ಲದೆ, ಭಕ್ತರ ಸಹಕಾರದಿಂದ ಐದು ಕೋಟಿ ರು. ವೆಚ್ಚದ ವಸತಿ ಸಮುಚ್ಚಯವನ್ನು ಸಿದ್ದಲಿಂಗೇಶ್ವರ ಸಾನಿಧ್ಯದಲ್ಲಿ ಭಕ್ತರಿಗೆ ಸಮರ್ಪಿಸಿರುವ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಕಾರ್ಯ ಸ್ತುತ್ಯಾರ್ಹ, 12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ಮಾನವನ
ಚರಿತ್ರೆಯಲ್ಲಿ ಎಲ್ಲೂ ನಡೆದಿಲ್ಲ. ಕಲ್ಯಾಣಕ್ರಾಂತಿ ನಂತರ ನಶಿಸಿಹೋಗುತ್ತಿದ್ದ ಲಿಂಗವಂತ ಧರ್ಮವನ್ನು ಉಳಿಸಿ, ಬೆಳೆಸಿದ ಕೀರ್ತಿ ಸಿದ್ದಲಿಂಗಯತಿಗಳಿಗೆ ಸಲ್ಲುತ್ತದೆ ಎಂದರು.
ಮಾಯಸಂದ್ರ ಕಲ್ಪತರು ಆಶ್ರಮದ ಶಿವಕುಮಾರನಾಥಸ್ವಾಮಿ, ಹುಕ್ಕೇರಿಮಠದ ಸದಾಶಿವಸ್ವಾಮೀಜಿ, ಕಾರ್ಯಕರಿ ಮಂಡಳಿ ಪದಾಧಿಕಾರಿಗಳಾದ ವಿಶ್ವನಾಥಬುಳ್ಳ, ಸಿದ್ದರಾಜು, ಕರಿಸಿದ್ದಯ್ಯ,ಪರಪ್ಪ ಶಿವಪ್ಪ ಗದಗ, ಆಡಳಿತಾಧಿಕಾರಿ ಪಟ್ಟಣಶೆಟ್ಟಿ ಇತರರು ಪಾಲ್ಗೊಡಿದ್ದು, ವಸತಿ ಸಮುಚ್ಚಯಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement