ಮಕ್ಕಳು ಚಟುವಟಿಕೆಯಿಂದ ಇರಲು ಆರೋಗ್ಯ ಅಗತ್ಯ
ನೆಲಮಂಗಲ: ಮಕ್ಕಳು ಸದಾ ಚಟುವಟಿಕೆಯಿಂದ ಇರಬೇಕಾದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಎಂದು ಬಿ.ಇ.ಓ ಹನುಮಾನಾಯಕ್ ತಿಳಿಸಿದರು.
ಅವರು ಸೋಮವಾರ ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ಹೋಬಳಿ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸರ್ಕಾರ ಮನಶಾಸ್ತ್ರಜ್ಞರ ವರದಿಯಂತೆ ಶಾಲೆಗಳಲ್ಲಿ ವೇಳಾ ಪಟ್ಟಿ ಸಿದ್ಧಪಡಿಸಿದ್ದು, ಅದೇ ರೀತಿ ಶಿಕ್ಷಕರು ಪಾಠ ಮತ್ತು ಕ್ರೀಡೆ ಸೇರಿದಂತೆ ಇತರೆ ಎಲ್ಲಾ ವಿಷಯಗಳನ್ನು ಕಲಿಸಲಾಗುತ್ತಿದೆ ಎಂದರು. ಇಂದು ಗುರುತಿಸಲಾರದಷ್ಟು ಹೊಸ ಹೊಸ ರೋಗಗಳು ಕಾಣಿಸಿಕೊಂಡು ವಿಜ್ಞಾನ ಲೋಕಕ್ಕೆ ಸವಾಲಾಗಿವೆ. ರೋಗ ಯಾವುದೇ ಇರಲಿ ದೇಹಕ್ಕೆ ಯಾವುದೇ ರೋಗ ತಾಕದಂತೆ ನಮ್ಮ ದೇಹವನ್ನು ಸದೃಢಗೊಳಿಸುವುದರಿಂದ ರೋಗಾಣುಗಳಿಂದ ರಕ್ಷಿಸಿಕೊಳ್ಳಲು ಸಾಧ್ಯ. ಇದು ಪ್ರತಿ ದಿನ ದೇಹಕ್ಕೆ ಅವಶ್ಯಕವಾದಷ್ಟು ವ್ಯಾಯಾಮ ಮಾಡುವುದರಿಂದ ರಕ್ಷಣೆ ಪಡೆಯಲು ಮಾತ್ರ ಸಾಧ್ಯ ಎಂದರು.
ಮುಖಂಡರಾದ ಬೈರೇಗೌಡ ಮತ್ತು ಶಿಕ್ಷಕ ಸಂಘದ ಪದಾಧಿಕಾರಿಗಳು ಇದ್ದರು.
ಹಾಲು ಉ.ಸ. ಸಂಘಕ್ಕೆಅಧ್ಯಕ್ಷರಾಗಿ ಕೆ.ವಿ.ನಾರಾಯಣಸ್ವಾಮಿ ಆಯ್ಕೆ
ಚಿಂತಾಮಣಿ: ತಾಲೂಕಿನ ಕಟಮಾಚನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಎರಡನೆಯ ಅವಧಿಗೆ ನಡೆದ ಚುನಾವಣೆಯಲ್ಲಿ ಕೆ.ವಿ.ನಾರಾಯಣಸ್ವಾಮಿಯವರು ಅಧ್ಯಕ್ಷರಾಗಿ ಆಯ್ಕೆಯಾದರು.
ಬಳಿಕ ಮಾತನಾಡಿದ ಅವರು ಸಂಘಕ್ಕೆ ಸೇರಿದ ನಿವೇಶನವನ್ನು ಕಾನೂನಿನ ಪರಿಮಿತಿಯಲ್ಲಿ ಉಳಿಸಿಕೊಳ್ಳುವುದಾಗಿ ಹಾಗೂ ಹಾಲು ಉತ್ಪಾದಕರಿಗೆ ಸರ್ಕಾರ ಮತ್ತು ಹಾಲು ಒಕ್ಕೂಟದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.
ನಿರ್ದೇಶಕರಾದ ರಾಮಯ್ಯ, ಕೆ.ಎನ್.ಶ್ರೀರಾಮರೆಡ್ಡಿ, ಪೂಜಮ್ಮನವರ ಕೆ.ವಿ.ನಾರಾಯಣಸ್ವಾಮಿ, ಚನ್ನಕೇಶವ (ಚೆನ್ನಿ)ರವರು ಅಧ್ಯಕ್ಷರಿಗೆ ಬೆಂಬಲವನ್ನು ಸೂಚಿಸಿದರು. ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷರಾದ ಕೆ.ಪಿ.ನಾರಾಯಣಸ್ವಾಮಿ, ಮಾಜಿ ಸದಸ್ಯರು ಆಂಜಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಆಂಜಪ್ಪ(ಆಂಜಿ), ಪಿ.ರಾಮಪ್ಪ,ಎಂ.ಚಂದ್ರಪ್ಪ, ಕೆ.ಎನ್.ವೆಂಕಟರೆಡ್ಡಿ, ಕೆ.ಬಿ.ವೆಂಕಟರೆಡ್ಡಿ, ಎಲ್.ಐ.ಸಿ ಕೆ.ಆರ್.ನಾಗರಾಜನಾರೆಪ್ಪ, ಕೆ.ಸಿ.ನಾಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.