ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ವ್ಯಕ್ತಿ ಕೊಲೆ
ಮಾಲೂರು: ದ್ವಿಚಕ್ರ ವಾಹನದಲ್ಲಿ ತಮ್ಮ ಗ್ರಾಮಕ್ಕೆ ಹೋಗುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದ ಘಟನೆ ಸೋಮವಾರ ರಾತ್ರಿ 8 ಗಂಟೆ ವೇಳೆಯಲ್ಲಿ ಪಟ್ಟಣದ ಹೊರವಲಯದ ಮಾಸ್ತಿ ರಸ್ತೆಯ ಚೆನ್ನಕಲ್ಲು ಗ್ರಾಮದಲ್ಲಿ ನಡೆದಿದೆ. ದುಷ್ಕರ್ಮಿಗಳಿಂದ ತೀವ್ರ ಹಲ್ಲೆಗೊಳಗಾಗಿ ಕೊಲೆಯಾದ ವ್ಯಕ್ತಿಯನ್ನು ಚೆನ್ನಕಲು ಗ್ರಾಮದ ತರಕಾರಿ ದಲ್ಲಾಳಿ ಕೃಷ್ಣಪ್ಪ(46)ಎಂದು ಗುರುತಿಸಲಾಗಿದೆ. ಪಟ್ಟಣದಲ್ಲಿ ವ್ಯಾಪಾರ ಮುಗಿಸಿಕೊಂಡು ವಾಪಸ್ಸು ಗ್ರಾಮದ ಕಡೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ಪೆಟ್ರೋಲ್ ತುಂಬಿದ್ದ ಬಾಟಲುಗಳು ಇದ್ದು, ಅವುಗಳಿಂದಲೂ ಹಲ್ಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಕೊಲೆಗೆ ಹಳೇ ವೈಷ್ಯಮವೇ ಕಾರಣವಾಗಿರಬಹುದು ಎಂದು ಸಂದೇಹಿಸಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಜಮೀರ್, ಇನ್ಸ್ಪೆಕ್ಟರ್ ಕೇಶವ ಮೂರ್ತಿ, ಎಸ್ಐ ಶಿವಸ್ವಾಮಿ, ನೀಲಕಂಠ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗಾಗಿ ತನಿಖೆ ಮುಂದುವೆರಿಸಿದ್ದಾರೆ.
ಡೆಂಘೀ ಜ್ವರದಿಂದ ಗರ್ಭಿಣಿ ಸಾವು
ಕೋಲಾರ: ಡೆಂಘೀ ಜ್ವರದಿಂದ ಬಳಲುತ್ತಿದ್ದ 8 ತಿಂಗಳ ಗರ್ಭಿಣಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಕೋಲಾರದ ಮುನೇಶ್ವರ ನಗರದ ನಿವಾಸಿ ಗಾಯತ್ರಿ ಎಂದು ಗುರುತಿಸಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ 8 ತಿಂಗಳ ಗರ್ಭಿಣಿ ಗಾಯತ್ರಿ ಅವರನ್ನು ನಗರದ ಟಮಕ ಬಳಿಯ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರ ನಿರ್ಲಕ್ಷ್ಯದಿಂದಾಗಿ ಜ್ವರ ವಾಸಿ ಆಗಲಿಲ್ಲ. ಬಳಿಕ ಬೆಂಗಳೂರಿಗೆ ಕರೆದುಕೊಂಡು ಹೋಗಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆಂದು ಪತಿ ನಾರಾಯಣ ಪ್ರಸಾದ್ ದೂರಿದ್ದಾರೆ. ಮೃತ ಗಾಯತ್ರಿಯವರಿಗೆ ನಾಲ್ಕು ವರ್ಷದ ಋತ್ವಿಕ್ ಪ್ರಸಾದ್ ಎಂಬ ಮಗನಿದ್ದಾನೆ. ಮೃತಳ ಮನೆಯಲ್ಲಿ ದುಖ- ಮಡುಗಟ್ಟಿದೆ.
ನೀರಿನ ಸಂಪ್ಗೆ ಬಿದ್ದ ಬಾಲಕ, ರಕ್ಷಿಸಲಿಳಿದ ವ್ಯಕ್ತಿ ದುರ್ಮರಣ
ಮಾಲೂರು: ಕಾರ್ಖಾನೆ ಆವರಣದಲ್ಲಿದ್ದ ನೀರಿನ ಸಂಪ್ಗೆ ಬಿದ್ದ ಬಾಲಕನನ್ನು ಕಾಪಾಡಲು ಹೋದ ವ್ಯಕ್ತಿ ಹಾಗೂ ಬಾಲಕ ಇಬ್ಬರೂ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಹುಂಗನೇಹಳ್ಳಿ ಬಳಿಯ ಇಟ್ಟಿಗೆ ಕಾರ್ಖಾನೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಮೃತರನ್ನು ಹುಂಗನೇಹಳ್ಳಿ ಬಳಿಯ ನರಸಾಪುರ ರಸ್ತೆಯಲ್ಲಿರುವ ವೇಣುಗೋಪಾಲ್ ಎಂಬುವರ ಮಾಲೀಕತ್ವದ ವೆಂಕಟೇಶ್ವರ ಬ್ರಿಕ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಶಂಕರ್(21)ಹಾಗೂ 6 ವರ್ಷದ ಬಾಲಕ ಕಿರಣ್ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಆಟವಾಡುತ್ತಿದ್ದ ಬಾಲಕ ಕಿರಣ್ ಲೇಬರ್ ಶೆಡ್ ಬಳಿಯ ಸಂಪ್ಗೆ ಬಿದ್ದಿದ್ದಾನೆ. ಆ ಸಂದರ್ಭದಲ್ಲಿ ಸಮೀಪ ಇದ್ದ ಶಂಕರ್ ಬಾಲಕನನ್ನು ಉಳಿಸಲು ಸಂಪ್ಗಿಳಿದಿದ್ದಾನೆ. ಈಜು ಬಾರದ ಶಂಕರ್ ಹಾಗೂ ಬಾಲಕ ಕಿರಣ್ ನೀರಿನಲ್ಲಿ ಮುಳುಗಿ ಸತ್ತಿದ್ದು, ರಾತ್ರಿ ಇಡೀ ಎಲ್ಲ ಕಡೆ ಹುಡುಕಿದ ಮೃತರ ಮನೆಯವರಿಗೆ ಬೆಳಗ್ಗೆ ಸಂಪ್ನ ಬಳಿ ಬಂದಾಗಲೇ ಪ್ರಕರಣ ಬೆಳಕಿಗೆ ಬಂದಿದೆ. ಇನ್ಸ್ಪೆಕ್ಟರ್ ಕೇಶವ ಮೂರ್ತಿ, ಎಸ್ಐ ಶಿವಸ್ವಾಮಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದ್ವಿಚಕ್ರ ವಾಹನ ಸವಾರ ಸಾವು
ಚಿಂತಾಮಣಿ: ಬೆಂಗಳೂರು ಮಾರ್ಗದ ಸಂತೆಕಲ್ಲಹಳ್ಳಿ ಹತ್ತಿರ ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ ಉಂಟಾಗಿ ಗಾಯಗೊಂಡಿದ್ದ ಕೈವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಜೇಂದ್ರ(22) ಎಂಬಾತನು ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.