ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಶಾರ್ಟ್ ಸರ್ಕ್ಯೂಟ್: ಯುಪಿಎಸ್ ಭಸ್ಮ
ಕೆಜಿಎಫ್: ನಗರದ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗೊಂಡು ಯುಪಿಎಸ್ ಹಾಗೂ ಇತರೆ ವಸ್ತುಗಳಿಗೆ ಬೆಂಕಿ ತಗುಲಿ ಸುಟ್ಟು ಹೋಗಿರುವ ಘಟನೆ ಸಂಭವಿಸಿದೆ. ನಗರದಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ನ ವ್ಯವಹಾರಗಳು ಎಂದಿನಂತೆ ನಡೆಯುತ್ತಿತ್ತು. ಬ್ಯಾಂಕ್‌ನ ಯುಪಿಎಸ್ ಕೊಠಡಿಯಲ್ಲಿ ಬೆಳಗ್ಗೆ 11 ಗಂಟೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಯುಪಿಎಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಆವರಿಸಿ ಶಬ್ದ ಗೊಂಡಿತು. ಇದರಿಂದ ಗಾಬರಿಗೊಂಡ ಬ್ಯಾಂಕ್‌ನ ಸಿಬ್ಬಂದಿ ಮತ್ತು ಗ್ರಾಹಕರು ಬ್ಯಾಂಕ್‌ನಿಂದ ಹೊರಗೆ ಬಂದಿದ್ದು ಬ್ಯಾಂಕ್‌ನ ಸಿಬ್ಬಂದಿಯೊಬ್ಬರು ತುರ್ತು ಅಗ್ನಿಯಿಂದ ಬೆಂಕಿಯನ್ನು ನಂದಿಸಿದ್ದರಿಂದ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದಂತಾಗಿದೆ. ಅಷ್ಟೊತ್ತಿಗಾಗಲೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಅಧಿಕಾರಿ ಮತ್ತು ಸಿಬ್ಬಂದಿಗಳು ಬ್ಯಾಂಕ್‌ನ ಯುಪಿಎಸ್ ಕೊಡಿ ಮತ್ತು ಇತರೆ ಸ್ಥಳಗಳನ್ನು ಪರಿಶೀಲಿಸಿ ವಿದ್ಯುತ್ ಲೈನ್‌ಗಳನ್ನು ಕಡಿತಗೊಳಿಸಿದರು. ಸ್ಥಳಕ್ಕೆ ರಾಬರ್ಟ್‌ಸನ್‌ಪೇಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಶವ ಅವಶೇಷಕ್ಕೆ ಹುಡುಕಾಟ ಮುಂದುವರಿಕೆ..
ಕೋಲಾರ: ಮಹಿಳೆಯನ್ನು ಕೊಲೆ ಮಾಡಿ ಶವವನ್ನು ಮನಸೋ ಇಚ್ಚೆ ಕತ್ತರಿಸಿ ಕೊಳವೆ ಬಾವಿಗೆ ಹಾಕಿರುವುದನ್ನು ಹೊರ ತೆಗೆಯಲು ಪೊಲೀಸರು ಕಳೆದ ನಾಲ್ಕು ದಿನಗಳಿಂದ ಹರ ಸಾಹಸ ಮಾಡುತ್ತಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನಂದಂಬಳ್ಳಿ ಗ್ರಾಮದ ಸುಶೀಲಮ್ಮ ಎಂಬುವರನ್ನು ಕೃಷ್ಣಯ್ಯ ಎಂಬುವರು ಹಣಕಾಸಿನ ವಿಚಾರದಲ್ಲಿ ಕೊಲೆ ಮಾಡಿ ಮೃತ ದೇಹವನ್ನು ಕತ್ತರಿಸಿ ಕೊಳವೆ ಬಾವಿಗೆ ಹಾಕಿ ನಾಪತ್ತೆಯಾಗಿದ್ದರು. ಮೃತರ ಕಡೆಯವರು ಕೃಷ್ಣಯ್ಯನ ವಿರುದ್ಧ ದೂರು ನೀಡಿದ್ದರಿಂದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಜೆಸಿಬಿ ಮೂಲಕ ಕೊಳವೆ ಬಾವಿಯನ್ನು ಅಗೆದು ಶವದ ಅವಶೇಷಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ನೂರಾರು ಅಡಿ ಆಳ ತೆಗೆದರೂ ಶವ ಸಿಗುತ್ತಿಲ್ಲ.
ಚಿಕಿತ್ಸೆ ಫಲಕಾರಿ ಆಗದೆ ವ್ಯಕ್ತಿ ಸಾವು
ಚಿಂತಾಮಣಿ: ಮರದಿಂದ ಕಾಲು ಜಾರಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತಾಲೂಕಿನ ಚನ್ನರಾಯನಹಳ್ಳಿ ಗ್ರಾಮದ ನಿವಾಸಿ ವೆಂಕಟರವಣಪ್ಪ(60) ಅರಳಿ ಮರ ಏರಿ ಎಲೆಗಳನ್ನು ಕೀಳುತ್ತಿರುವಾಗ ಕಾಲು ಜಾರಿಬಿದ್ದು ತೀವ್ರವಾಗಿ ಗಾಯಗೊಂಡು 3 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಬಟ್ಲಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ವ್ಯಕ್ತಿ ಮೇಲೆ ಹಲ್ಲೆ: 10 ಲಕ್ಷ ದರೋಡೆ
ಮುಳಬಾಗಲು: ಹಾಡಹಗಲೇ ವ್ಯಕ್ತಿಯೊಬ್ಬರ ಮೇಲೆ ಮುಸುಕುಧಾರಿ ವ್ಯಕ್ತಿಗಳು ಹಲ್ಲೆ ನಡೆಸಿ ಅವರು ಬ್ಯಾಂಕಿನಿಂದ ಡಿಡಿ ಪಡೆಯಲು ತೆಗೆದುಕೊಂಡು ಹೋಗುತ್ತಿದ್ದ ಹತ್ತು ಲಕ್ಷ ರು.ಗಳನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆನಡೆದಿದೆ. ಹಲ್ಲೆಗೊಳಗಾದವರು ಶೇಖರ್. ಇವರು ತನ್ನ ಸೋದರ ಸಂಬಂಧಿ ಮಾಜಿ ಶಾಸಕ ಅಮರೇಶ್ ಅವರಿಗೆ ಸೇರಿದ ಪೆಟ್ರೋಲ್ ಬಂಕ್‌ಗೆ ಕಳುಹಿಸಲು ಹತ್ತು ಲಕ್ಷ ರು.ಗಳ ಡಿಡಿ ಪಡೆಯಲು ತಮ್ಮ ಮನೆಯಿಂದ ಹೋಗುತ್ತಿರುವಾಗ ತಿರುವಿನಲ್ಲಿ ಇಬ್ಬರು ಮುಸುಕುಧಾರಿಗಳು ಹಲ್ಲೆ ನಡೆಸಿದ್ದಾರೆ. ತಲೆಗೆ ಪೆಟ್ಟಾದ ಕಾರಣ ಶೇಖರ್ ಕೆಳಗೆ ಬಿದ್ದಿದ್ದಾರೆ, ಅವರನ್ನು ಮುಳಬಾಗಲು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಿವೈಎಸ್ಪಿ ಸಿದ್ದರಾಮಯ್ಯ, ಸರ್ಕಲ್ ಇನ್ಸೆಪೆಕ್ಟರ್ ಶಿವಕುಮರ್, ಸಬ್ ಇನ್ಸೆಪೆಕ್ಟರ್ ಫ್ರಾನ್ಸಿಸ್ ಸ್ಥಳಕ್ಕೆ ಧಾವಿಸಿದ್ದರು.