ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅರಣ್ಯ ಇಲಾಖೆಯಿಂದ 2 ಕೋಟಿ ಸಸಿ ನೆಡುವ ಗುರಿ

Srinivasa Murthy VN
Updated On : 26 Jun 2013, 12:42 pm

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಮೊದಲಿಗಿಂತ ಹೆಚ್ಚಿನ  ಪ್ರಮಾಣದಲ್ಲಿ ಅರಣ್ಯ ಅಭಿವೃದ್ಧಿಯಾಗಿದೆ.  
ಅಗತ್ಯವಾಗಿರುವಷ್ಟು ಅರಣ್ಯ ಭೂಮಿ ಇಲ್ಲದೇ ಇರುವುದರಿಂದ ಅರಣ್ಯೇತರ ಜಮೀನಿನಲ್ಲಿ ಅರಣ್ಯ  ಅಭಿವೃದ್ಧಿಪಡಿಸಬೇಕು.  ಈ ವರ್ಷ ಪ್ರಸಕ್ತ ಯೋಜನೆಯಡಿ 2 ಕೋಟಿ ಸಸಿಗಳನ್ನು ನೆಡಲು ಗುರಿ ಹೊಂದಲಾಗಿದೆ ಎಂದು ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಎಸ್. ಸದಾಶಿವಯ್ಯ ಅವರು ತಿಳಿಸಿದರು.
ಅವರು ಇತ್ತೀಚೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಪ್ರಾದೇಶಿಕ ಅರಣ್ಯ ವಿಭಾಗ, ತುಮಕೂರು ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಸರ್ಕಾರೇತರ ಪರ ಸಂಘ ಸಂಸ್ಥೆಗಳು, ಅರಣ್ಯ ಪ್ರೇರಕರು, ಸುಗಮಗಾರರು ಹಾಗೂ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರುಗಳಿಗೆ ವಿಭಾಗ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬೇರೆ ಬೇರೆ ಕಾರ್ಯಗಳ ನಿಮಿತ್ತ ಅರಣ್ಯ ಇಲಾಖೆ ಸಿಬ್ಬಂದಿಗೆ ಸಸಿ ನೆಡುವ ಕಾರ್ಯ ನಿರ್ವಹಿಸಲು ಸಾಧ್ಯವಾಗದೇ ಇರುವುದರಿಂದ ಆಸಕ್ತ ಸರ್ಕಾರೇತರ ಸಂಸ್ಥೆಗಳಿಂದ ರೈತರ ಮೂಲಕ ಕಾಯಕ್ರಮ ಕೈಗೊಳ್ಳಲು ಇಲಾಖೆ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಆರ್ಥಿಕ ಆದಾಯ: ಈ ಕಾರ್ಯಕ್ಕೆ ಸರ್ಕಾರೇತರ  ಸಂಸ್ಥೆಗಳಿಗೆ 4 ವರ್ಷಗಳ ಅವಧಿಗೆ ಪ್ರತಿ ಸಸಿಗೆ ರು.5 ಗೌರವಧನ ನೀಡಲಾಗುತ್ತಿದ್ದು, ರೈತರಿಂದ ಸಸಿ ಬೆಳಸಿ ನಿರ್ವಹಿಸಲು ಸರ್ಕಾರಕ್ಕೆ ಪ್ರತಿ ಸಸಿಗೆ 4 ವರ್ಷಕ್ಕೆ 50 ರು. ವೆಚ್ಚ ಬೀಳಲಿದ್ದು, ಇದರಿಂದ ರೈತರಿಗೆ ಆರ್ಥಿಕ ಆದಾಯ ಒದಗುತ್ತದೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಅರಣ್ಯಾಧಿಕಾರಿಯ  ಹುದ್ದೆ ಬೇರಾವುದೇ ಐ.ಎ.ಎಸ್. , ಐ.ಪಿ.ಎಸ್ ಹುದ್ದೆಗಳಿಗಿಂತ ಶ್ರೇಷ್ಠವಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಎನ್. ಸಂಪಂಗಿ ಅವರು, ತಾವು ನಿವೃತ್ತಿಯಾದ ನಂತರವೂ ಅರಣ್ಯಾಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ಜಮೀನಿನಲ್ಲಿ ಗಿಡಗಳನ್ನು ಬೆಳೆದು ಹೆಚ್ಚಿನ ಆದಾಯ ಪಡೆದಿರುವುದಾಗಿ ಈ ಸಂದರ್ಭ ತಿಳಿಸಿದರು.
2012-13ರ ಸಾಲಿನಲ್ಲಿ  1.18ಲಕ್ಷ ಸಸಿಗಳನ್ನು ನೆಡಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲಸಿಂಗ್  ತಿಳಿಸಿದರು.
ನೋಂದಾವಣೆ: 2013-14ರ ಸಾಲಿಗೆ ವಿತರಿಸಲು 8 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ.  ಸಿಬ್ಬಂದಿ ಕೊರತೆ ಪ್ರಯುಕ್ತ ಕಾರ್ಯಕ್ರಮ ಅನುಷ್ಠಾನಕ್ಕೆ ಸರ್ಕಾರೇತರ ಸಂಸ್ಥೆಗಳನ್ನು ತೊಡಗಿಸಿಕೊಳ್ಳಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸೂಚಿಸಿದ ಮೇರೆಗೆ ಸರ್ಕಾರೇತರ ಸಂಸ್ಥೆಗಳನ್ನು ನೋಂದಾಯಿಸಲಾಗಿದ್ದು, ಈ ಸಂಘಸಂಸ್ಥೆಗಳು ಆಸಕ್ತರಿರುವ ಗ್ರಾಮಗಳನ್ನು ಆಯ್ದುಕೊಂಡು ರೈತರನ್ನು ನೋಂದಾಯಿಸಿ, ಸಸಿಗಳನ್ನು ನೆಡಲು ಸಹಕರಿಸಬೇಕು. ರೈತರಿಗೆ ಅವಶ್ಯಕವಿರುವ ಬೇಡಿಕೆ ಸಲ್ಲಿಸಿದಲ್ಲಿ ಅದರನ್ವಯ ಸಸಿಗಳನ್ನು ಬೆಳೆಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು ತಿಳಿಸಿದರು.
ಅರಣ್ಯಾಭಿವೃದ್ಧಿ ಬಗ್ಗೆ ತಿಳಿಯಲು ರೈತರು ಬಂದಾಗ ಅಗತ್ಯ ಸಸಿ ಒದಗಿಸುವುದಲ್ಲದೆ ರೈತರಿಗೆ ಪೂರ್ಣಮಾಹಿತಿ ನೀಡಬೇಕು ಮತ್ತು ರೈತರ ಮನೆಬಾಗಿಲಿಗೆ ಸಸಿಗಳು ದೊರಕುವಂತಾಗಬೇಕು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ವಿ.ರಂಗರಾವ್ ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಜಯಣ್ಣ ಯೋಜನೆ ಬಗ್ಗೆ ವಿವರಿಸಿದರು. ಬಿ.ಎಸ್. ನಾಗೇಂದ್ರರಾವ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ತಿಪಟೂರು ಉಪವಿಭಾಗ ಇವರು ಸ್ವಾಗತಿಸಿ, ನಿರೂಪಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement