ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜು.2ರಂದು ಸ್ವಾಮಿ ವಿವೇಕಾನಂದರ ಭವ್ಯ ರಥಯಾತ್ರೆ, ಯುವ ಸಮ್ಮೇಳನ

Srinivasa Murthy VN
Updated On : 26 Jun 2013, 11:47 am

ತುರುವೇಕೆರೆ: ಸ್ವಾಮಿ ವಿವೇಕಾನಂದರ 150 ನೇ ವರ್ಷದ ಜನ್ಮದಿನೋತ್ಸವದ ಅಂಗವಾಗಿ ರಾಮಕೃಷ್ಣ ಮಠ  ಮತ್ತು ರಾಮಕೃಷ್ಣ ಪರಿಷತ್, ರಾಮಕೃಷ್ಣ ಭಾವಪ್ರಚಾರ ಪರಿಷತ್, ಮಾದಿಹಳ್ಳಿ ಬದರಿಕಾಶ್ರಮ ಹಾಗೂ ಸ್ವಾಮಿ ವಿವೇಕಾನಂದರ 150 ನೇ ಜನ್ಮ ದಿನಾಚರಣೆ ರಥಯಾತ್ರೆ ಸಮಿತಿಯ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಸ್ವಾಮಿ ವಿವೇಕಾನಂದರ ಭವ್ಯ ರಥಯಾತ್ರೆ ಮತ್ತು ಯುವ ಸಮ್ಮೇಳನ ಜುಲೈ 2 ರಂದು ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಡಾ.ಎ. ನಾಗರಾಜು ತಿಳಿಸಿದ್ದಾರೆ.
 ಪತ್ರಕರ್ತರೊಂದಿಗೆ ಮಾತನಾಡಿದ ಅವರು ವಿವೇಕಾನಂದರ ರಥಯಾತ್ರೆ ಜುಲೈ 2 ರಂದು ಬೆಳಗ್ಗೆ 8 ಗಂಟೆಗೆ ಪಟ್ಟಣಕ್ಕೆ ಆಗಮಿಸಲಿದೆ. ಪಟ್ಟಣದ ಸರ್ಕಾರಿ ಕಿರಿಯ ಕಾಲೇಜಿನ ಮುಂಭಾಗದಿಂದ ರಥಯಾತ್ರೆ ಪ್ರಾರಂಭವಾಗಲಿದೆ. ಪಟ್ಟಣದ ಪ್ರಮುಖ ರಸ್ತೆಗಳಾದ ಬಾಣಸಂದ್ರ ರಸ್ತೆ - ಬಿರ್ಲಾ ಕಾರ್ನರ್- ತಾಲೂಕು ಕಚೇರಿ ರಸ್ತೆ - ತಿಪಟೂರಕು ರಸ್ತೆ - ಗಣಪತಿ ಪೆಂಡಾಲ್ ಮೂಲಕ ಪಿಡಬ್ಲ್ಯುಡಿ ರಸ್ತೆ ಮುಖಾಂತರ ಕೆ.ಹಿರಣ್ಣಯ್ಯ ಬಯಲು ರಂಗಮಂದಿರದ ಆವರಣವನ್ನು ತಲುಪುವುದು. ಭವ್ಯ ರಥಯಾತ್ರಾ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯರಾದ ಎಂ.ಡಿ.ಲಕ್ಷ್ಮೀನಾರಾಯಣ್ ಉದ್ಘಾಟಿಸುವರು. ಸಿಪಿಐ ಅಂಜನ್ ಕುಮಾರ್, ಹಾಗೂ ಎಸೈ ಅಜರುದ್ದೀನ್ ಮುಖ್ಯ ಅತಿಥಿಗಳಾಗಿರುವರು.
 ಜುಲೈ 2 ರ ಬೆಳಗ್ಗೆ 11 ಗಂಟೆಗೆ ನಡೆಯುವ ಯುವ ಸಮ್ಮೇಳನಕ್ಕೆ ರಾಮಕೃಷ್ಣ ಮಠದ ಸ್ವಾಮಿ ತ್ಯಾಗೀಶ್ವರಾನಂದಜೀ, ಸ್ವಾಮಿ ಮಹಾವಾಕ್ಯಾನಂದಜೀ ಮಹಾರಾಜ್, ತುಮಕೂರು ರಾಮಕೃಷ್ಣ -ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮಿಗಳು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶಾಸಕ ಎಂ.ಟಿ. ಕೃಷ್ಣಪ್ಪ ಸಮಾರಂಭವನ್ನು ಉದ್ಘಾಟಿಸುವರು, ತಹಸೀಲ್ದಾರ್ ಜಿ.ಪಿ.ಮಂಜೇಗೌಡ, ಬಿಇಓ ರಂಗಧಾಮಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಡಾ.ಎ.ನಾಗರಾಜು ಹೇಳಿದರು.
 ಸುಮಾರು 28 ಅಡಿ ಉದ್ದದ, 14.50 ಅಡಿ ಎತ್ತರ, 10 ಅಡಿ ಅಗಲವಿರುವ ವಿವೇಕಾನಂದರ ರಥಯಾತ್ರೆ ಯನ್ನು ಬಹಳ ವಿಜೃಂಭಣೆಯಿಂದ ಬರ ಮಾಡಿಕೊಂಡು ಯುವಕರಲ್ಲಿ ಚೇತನ ಭಾವ ಮೂಡಿಸುವ ಪ್ರಯತ್ನ ಇದಾಗಿದೆ ಎಂದರು. ಸಮಿತಿಯ ಕಾರ್ಯದರ್ಶಿ ಕುಮಾರಸ್ವಾಮಿ, ನಿರ್ದೇಶಕರಾದ ಗಂಗಾಧರ ದೇವರ ಮನೆ, ಟಿ.ಎಂ.ಮಂಜುನಾಥ್, ರಾಮಚಂದ್ರು, ಶ್ರೀನಿವಾಸ್ ಮೂರ್ತಿ, ಬ್ಯಾಂಕ್ ಮೂಡಲಗಿರಯ್ಯ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement