ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಿಡಿಕಾರಿದ ಸಮ್ಮೇಳನಾಧ್ಯಕ್ಷ ಮರಿದೇವರು

Srinivasa Murthy VN
Updated On : 1 Jul 2013, 12:20 pm

ಚಿಕ್ಕನಾಯಕನಹಳ್ಳಿ: ತಮ್ಮ ಆಯ್ಕೆಯನ್ನು ವಿರೋಧಿಸಿ ಪತ್ರಿಕಾ ಹೇಳಿಕೆ ನೀಡಿದ್ದ ಪ್ರಗತಿಪರರ ವಿರುದ್ಧ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಸಿ.ಎಚ್.ಮರಿದೇವರು ತೊಡೆತಟ್ಟಿ ಬಹಿರಂಗ ಸವಾಲು ಹಾಕಿದರು.
ಭಾನುವಾರ ಪಟ್ಟಣದ ಸಿ.ಬಿ.ಮಲ್ಲಪ್ಪ  ವೇದಿಕೆಯಲ್ಲಿ ಮೂರು ದಿನಗಳ ಕಾಲ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಂವಾದಕರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು  ತಮ್ಮ ಆಯ್ಕೆಯನ್ನು ವಿರೋಧಿಸಿದ ಪ್ರಗತಿ ಪರರ ವಿರುದ್ಧ ಕಿಡಿಯಾದರು.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ  ವಿರೋಧಿಸುವ ಹಕ್ಕಿದೆ. ಕೆಲವರು ಒಳ್ಳೆಯದಕ್ಕೂ ಸಹ ವಿರೋಧಿಸುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ.
ಮೇಲು ಕೀಳ ಎಂಬ ಭಾವನೆಯನ್ನೇ ತೊಡೆದು ಹಾಕಲು ಶ್ರಮಸಿದಿ 12 ನೇ ಶತಮಾನದ ಬಸವಣ್ಣನನ್ನು ಸಹ ಬಿಡಲಿಲ್ಲ, ಬುದ್ಧ, ಗಾಂಧಿಯವರನ್ನು ಸಹ ತುಚ್ಛವಾಗಿ ಪರಿಗಣಿಸುವ ಇವರು ನಾವೇ ಶ್ರೇಷ್ಠ, ನಾವು ಹೇಳಿದ್ದೆಲ್ಲಾ ಸತ್ಯ, ಇದನ್ನು ನೀವೆಲ್ಲಾ ನಂಬಬೇಕು ಎಂಬ ಧೋರಣೆಯಲ್ಲಿಯೇ ಸಮಾಜವನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ.
ಇವರು ತಾವೇ ಬುದ್ಧಿವಂತರು ಎಂಬ ದುರಹಂಕಾರದಿಂದ  ಮೆರೆಯುತ್ತಾರೆ. ಇಂತಹ  ಸ್ವಘೋಷಿತ ಪ್ರಗತಿಪರರ ಬಗ್ಗೆ ನಾನು ಅಂಜಲಾರೆ ಮತ್ತು ಅಳುಕಲಾರೆ  ಎಂದು ಅವರು ತಮ್ಮ ವಿರೋಧಿಗಳಿಗೆ ಸವಾಲು ಹಾಕಿದರು.
ನಿಮ್ಮ ವಿದ್ಯಾರ್ಥಿ ದೆಸೆಯ ಜೀವನದ ಮರೆಯಲಾರದ ಅನುಭವ ಯಾವುದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ  ಅವರು ತಾವು ವಾಸಿಸುತ್ತಿದ್ದ ಕೊಠಡಿಯಲ್ಲಿದ್ದ ತಿಗಣೆಯ ಮೇಲೆ ಬರೆದ ಕವನ ತಮ್ಮ ಸಾಹಿತ್ಯ ಕೃಷಿಗೆ ಸ್ಫೂರ್ತಿಯಾಯಿತು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement