ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಂಗಭೂಮಿಗೆ ಆಶ್ರಯತಾಣ ಕನ್ನಡನಾಡು: ಉಗಮ

Srinivasa Murthy VN
Updated On : 1 Jul 2013, 12:20 pm

ಚಿಕ್ಕನಾಯಕನಹಳ್ಳಿ: ಲೇಖಕ ಬೆಳೆಯ ಬೇಕಾದರೆ ಆತನಿಗೆ ಓದುಗರು ಕಡಿಮೆಯಾಗಬೇಕು, ಒಬ್ಬ ನಟ-ನಿರ್ದೇಸಕ ಬೆಳೆಯಬೇಕಾದರೆ ಆತನ ನಟನೆಯ ಪ್ರಯೋಗಗಳಿಗೆ ಪ್ರೇಕ್ಷಕರ ಕೊರತೆಯಾಗ ಬೇಕು. ಆಗ ತನ್ನನ್ನು ತಾನು ತಿದ್ದಿಕೊಳ್ಳಲು ಪ್ರಯತ್ನಿಸುತ್ತಾನೆ ಎಂದು  ಪತ್ರಕರ್ತ, ಸಾಹಿತಿ ಉಗಮ ಶ್ರೀನಿವಾಸ್ ನುಡಿದರು.
ಭಾನುವಾರ ಅವರು ಚಿ.ನಾ.ಹಳ್ಳಿಯಲ್ಲಿ ನಡೆದ 9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ರಂಗಭೂಮಿಯಲ್ಲಿ ಸಾಂಪ್ರದಾಯಿಕ ಹಾಗು ಹವ್ಯಾಸಿ ಪ್ರಯೋಗ ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತಿದ್ದರು.
ರಂಗಭೂಮಿಯಿರಲಿ, ಅಥವಾ ಚಿತ್ರರಂಗವಿರಲಿ,ಇಲ್ಲಿ ನಟ ಮತ್ತು ನಿರ್ದೇಶಕನಿಗಿಂತ ಪ್ರೇಕ್ಷಕನೇ ದೊಡ್ಡವನಾಗುತ್ತಾನೆ. ಏಕೆಂದರೆ ಆತ ನಾವು ನೀಡಿದ ವಸ್ತು ಮತ್ತು ವಿಷಯದ ನಿಜವಾದ ಮೌಲ್ಯಮಾಪಕನಾಗಿರುತ್ತಾನೆ.ನಮ್ಮ ರಾಜ್ಯದಲ್ಲಿ ರಂಗಭೂಮಿಯ ಬೆಳವಣಿಗೆಗೆ ಪ್ರಮುಖವಾದ ವೇದಿಕೆ ಗುಬ್ಬಿ ಕಂಪನಿ. ಇತ್ತೀಚೆಗೆ ರಾಜ್ಯದಲ್ಲಿ ಹೆಚ್ಚು ರೆಪರ್ಟಿರಿಗಳು  ಜನ್ಮತಾಳಿವೆ.
ಅಂತಹವುಗಳಲ್ಲಿ ಸಾಣೇಹಳ್ಳಿಯ ಶಿವಸಂಚಾರ, ನೀನಾಸಂ ಮುಂತಾದ ಕಂಪನಿಗಳು ತಮ್ಮದೇ ಆದ ರೀತಿಯಲ್ಲಿ ರಂಗಕಲೆಯ ಸೇವೆಯಲ್ಲಿ ತೊಡಗಿಕೊಂಡಿವೆ. ಪೌರಾಣಿಕ ರಂಗಭೂಮಿಗೆ ದೇಶದಲ್ಲಿಯೇ ಹೆಚ್ಚು ಪ್ರದರ್ಶನ ಮತ್ತು ಪ್ರಾಶಸ್ತ್ಯ ನೀಡಿರುವುದು ಕಾರ್ನಾಟಕ.
ಅದರಲ್ಲು ತುಮಕೂರಿನಲ್ಲಿ ಹೆಚ್ಚುಹೆಚ್ಚಾಗಿ ಪೌರಾಣಿಕ ನಾಟಕಗಳು ಪ್ರದರ್ಶನವಾಗುತ್ತಿರುವುದು ರಂಗಭೂಮಿಯ ಬೆಳವಣಿಗೆಯಿಂದ ಮುಖ್ಯವಾದುದು. ರಾಮಾಯಣ ಮತ್ತು ಮಹಾಭಾರತ ನಾಟಕಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿವೆ. ರಂಗ ಭೂಮಿಗೆ ಇಂದು ಜನಾಕರ್ಷಣೆ ಕಡಿಮೆಯಾಗಿದೆ ಎಂಬ ಕೂಗು ಕೇಳಿಬರುತ್ತಿದೆ. ಆದರೆ ಪ್ರದರ್ಶನಗಳಸಂಖ್ಯೆ ಕಡಿಮೆಯಾದಾಕ್ಷಣ ರಂಗಭೂಮಿ ಜನಾಕರ್ಷಣೆ ಕಡಿಮೆಯಾದಂತಲ್ಲ. ಯಂಗ್ ಇಂಡಿಯಾ, ಹರಿಜನ ಪತ್ರಿಕೆಗಳ ಸಂಖ್ಯೆ ದೇಶದಲ್ಲಿ ಕೇವಲ ಬೆರಳೆಣಿಕೆಯಷ್ಟಿತ್ತು. ಆದರೆ ಅವುಗಳು ದೇಶದಲ್ಲಿ ಓದುಗರಿಗೆ  ದೊರೆಯುತ್ತಿದ್ದವು. ಇದರಿಂದ  ಪತ್ರಿಕೆಯ ಸಂಖ್ಯೆಯೆ ಕಡಿಮೆಯಿದ್ದರೂ ಹೆಚ್ಚು ಜನರಿಗೆ ವಿಷಯ ಮುಟ್ಟಿಸುವಲ್ಲಿ ಪತ್ರಿಕೆಗಳು ಯಶಸ್ವಿಯಾಗಿದ್ದವು ಎಂದರು.
ಸ್ಪಂದಿಸುತ್ತಿಲ್ಲ: ರಂಗಭೂಮಿಯ  ಬೆಳವಣಿಗೆಗೆ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. 120 ಜನರಿಗೆ 1 ಲಕ್ಷ ರು.ಗಳ ಮೌಲ್ಯದ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡುವ ಸರ್ಕಾರ, ರಂಗಭೂಮಿಗಿಟ್ಟಿರುವ ಕೇವಲ 9 ಪ್ರಶಸ್ತಿಗಳಿಗೆ ಕೇವಲ 5 ಸಾವಿರ ರು.ಗಳ ಮೊತ್ತದ ಬಹುಮಾನವನ್ನು ನೀಡುತ್ತದೆ. ಇದು ಸರ್ಕಾರಗಳಿಗೆ ರಂಗಭೂಮಿಯ ಬಗ್ಗೆ ಇರುವ ಅನಾದರವನ್ನು ತೋರಿಸುತ್ತದೆ ಎಂದರು.
ರಾಜ್ಯದಲ್ಲಿ ಮುಂದೆ ಸ್ಥಾಪಿಸಲಿರುವ ರಂಗಾಯಣ ಪ್ರಾದೇಶಿ ಕಚೇರಿಯನ್ನು ಹನ್ನೊಂದರಲ್ಲಿ ಇನ್ನೊಂದು ಎಂಬಂತೆ, ಬೆಂಗಳೂರಿನಲ್ಲಿ ಸ್ಥಾಪಿಸುವ ಬದಲು ತುಮಕೂರಿನಲ್ಲಿ ಸ್ಥಾಪಿಸಿದರೆ ರಂಗ ಕಲಾವಿದರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement