ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹಿಂದೂಗಳ ಸಂಖ್ಯೆ ವಿರಳವಾದರೆ ಆಶ್ಚರ್ಯವಿಲ್ಲ: ಸೂರ್ಯನಾರಾಯಣ್

Srinivasa Murthy VN
Updated On : 1 Jul 2013, 12:21 pm

ತುರುವೇಕೆರೆ: ಮುಂದಿನ ಎರಡು ಪೀಳಿಗೆಯ ವೇಳೆಗೆ ಹಿಂದೂಗಳ ಸಂಖ್ಯೆ  ವಿರಳವಾದರೆ ಆಶ್ಚರ್ಯವಿಲ್ಲ. ಇತರೆ ಧರ್ಮೀಯರ ಓಲೈಕೆಯಲ್ಲೇ ತೊಡಗುವ ರಾಜಕಾರಣಿಗಳ ಕಪಿಮುಷ್ಟಿಯಿಂದ ಹಿಂದೂಗಳು ಸ್ವಂತ ಶಕ್ತಿಯಿಂದ ಮೇಲೇರುವುದು ಅಸಾಧ್ಯದ ಮಾತಾಗಿದೆ ಎಂದು ಭಜರಂಗದಳದ ರಾಜ್ಯ ಸಂಚಾಲಕ ಸೂರ್ಯನಾರಾಯಣ್ ಕಳವಳ ವ್ಯಕ್ತಪಡಿಸಿದರು.
 ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಸಿದ ಶ್ರೀರಾಮ ಜಪಯಜ್ಞ ಸಮರ್ಪಣೆ ಮತ್ತು ಶ್ರೀರಾಮ ತಾರಕ ಹೋಮ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಭಾರತ ದೇಶವನ್ನು ವೈವಿಧ್ಯತೆಗಳ ತವರೂರು ಎನ್ನುತ್ತಾ ಹಿಂದೂ ಬಾಂಧವರನ್ನು ಸಮಾಧಾನ ಮಾಡುತ್ತಲೇ ಬಂದಿದ್ದಾರೆ. ಆದರೆ ಬೇರೆ ದೇಶಗಳಲ್ಲಿ ತಮ್ಮದೇ ಆದ ಧರ್ಮದ ರಕ್ಷಣೆ ಮಾಡಲು ಸರ್ವರೂ ಸಮಪಾಲು ಆಗುತ್ತಾರೆ. ಮತ ಬ್ಯಾಂಕ್ ಮಾಡಿಕೊಂಡಿರುವ ಕೆಲವು ರಾಜಕೀಯ ಪಕ್ಷಗಳು ಇತರರ ಓಲೈಕೆಗಾಗಿ ವಿವಿಧ ಸವಲತ್ತುಗಳನ್ನು ನೀಡುತ್ತಿವೆ ಎಂದು ಸೂರ್ಯನಾರಾಯಣ್ ಕಿಡಿಕಾರಿದರು.
 ಹಿಂದೂಗಳ ಆರಾಧ್ಯ ದೈವವಾಗಿರುವ ಶ್ರೀ ರಾಮನ ದೇಗುಲವನ್ನು ಅಯೋಧ್ಯೆಯಲ್ಲಿ ಕಟ್ಟಲು ಇನ್ನೂ ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.
ಸ್ವಾಭಿಮಾನಿಗಳಾಗಲಿ: ಹಿಂದೂಗಳು ಸ್ವಾಭಿಮಾನಿಗಳಾಗಬೇಕು. ದೇಶಾಭಿಮಾನಿಗಳಾಗಬೇಕು ಎಂದು ತಮ್ಮಡಿಹಳ್ಳಿಯ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಮಹಾಸ್ವಾಮಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement