ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹೆಣ್ಣಿಗೆ ಧಾರ್ಮಿಕ ಸಂಸ್ಕಾರ ನೀಡಿದ್ದು ವೀರಶೈವ ಧರ್ಮ

Srinivasa Murthy VN
Updated On : 1 Jul 2013, 12:23 pm

ಕುಣಿಗಲ್: ಜಗತ್ತಿನಲ್ಲಿ ಯಾವುದೇ ಧರ್ಮ ಹೆಣ್ಣಿಗೆ ಧಾರ್ಮಿಕ ಸಂಸ್ಕಾರ ನೀಡದೆ ತಾರತಮ್ಯ ಅನುಸರಿಸುತ್ತಿದ್ದ ಸಂದರ್ಭದಲ್ಲಿ, ವೀರಶೈವ ಧರ್ಮ ಮಾತ್ರ  ಗಂಡಿಗೆ ಸರಿಸಮಾನವಾಗಿ ಹೆಣ್ಣಿಗೆ ಧಾರ್ಮಿಕ ಸಂಸ್ಕಾರ ನೀಡಿದ ಮಹಾನ್ ಧರ್ಮವಾಗಿದೆ ಎಂದು ಚಿಕ್ಕತೊಟ್ಲುಕೆರೆ ಅಟವೀಶ್ವರಸ್ವಾಮಿ ಕ್ಷೇತ್ರದ ಅಟವಿಶಿವಲಿಂಗಸ್ವಾಮಿಗಳು ತಿಳಿಸಿದರು.
  ಭಾನುವಾರ, ಪಟ್ಟಣದ ತುಮಕೂರು ರಸ್ತೆಯಲ್ಲಿನ ಅಟವೀಸ್ವಾಮಿ ದೇವಾಲಯ ಆವರಣದಲ್ಲಿ ಟೌನ್ ವೀರಶೈವ ಸೇವಾ ಸಮಾಜ, ಅಟವೀಶ್ವರ ಸ್ವಾಮಿ ಪೂಜಾ ಕೈಂಕರ್ಯ ಟ್ರಸ್ಟ್ ಇತರೆ ಸಂಘ ಸಂಸ್ಥೆಯಾಶ್ರಯದಲ್ಲಿ ಹಮ್ಮಿಕೊಳ್ಳಲಾದ ಬಸವೇಶ್ವರ ಜಯಂತಿ ಹಾಗೂ ಅಟವೀಸ್ವಾಮಿ ದೇವಾಲಯದ ಮೊದಲನೇ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, ವೀರಶೈವ ಧರ್ಮ ಕೇವಲ ಪುಸ್ತಕದ ಪುಟದಲ್ಲಿ ಅಡಗಿರುವ ಧರ್ಮವಲ್ಲ, ಸಾಮಾನ್ಯಜನತೆಗೂ ಅರ್ಥವಾಗುವ, ಪ್ರಕೃತಿಯಲ್ಲಿ ಎಲ್ಲರಿಗೂ ಸರಿಸಮಾನವಾದ ಧಾರ್ಮಿಕ ಸಮಾನತೆಯನ್ನು ಕಲ್ಪಿಸಿಕೊಟ್ಟ ಮಹಾನ್ ಧರ್ಮವಾಗಿದೆ. ಭಾರತೀಯರಿಗೆ ಶಿಕ್ಷಣ ನೀಡುವ ನೆಪದಲ್ಲಿ ಬ್ರಿಟೀಷರ ವಸಾಹತುಶಾಹಿ ವ್ಯವಸ್ಥೆ ರೂಪಿಸಿದ ಶಿಕ್ಷಣ ಪದ್ಧತಿಯಿಂದ, ಇಂದು ಭಾರತೀಯರ ಸಂಸ್ಕೃತಿ, ಸಂಸ್ಕಾರಗಳಿಗೆ ಧಕ್ಕೆಯುಂಟಾಗಿದ್ದು, ನಮ್ಮ ನಾಡಿನ ಧಾರ್ಮಿಕ ಸಂಸ್ಕೃತಿಯ ಹಿನ್ನೆಲೆಯುಳ್ಳ ಶಿಕ್ಷಣ ಪದ್ಧತಿಗಳನ್ನು ಜಾರಿಗೆ ತರುವ ಮೂಲಕ ನಮ್ಮ ಧಾರ್ಮಿಕ ಸಂಸ್ಕೃತಿಯ ಉಳಿವಿಗೆ ಶ್ರಮಿಸಬೇಕೆಂದರು.
ತಾಯಿ ಪಾತ್ರ ಮಹತ್ವದ್ದು: ಬೆಟ್ಟಹಳ್ಳಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಂಸ್ಕಾರವಂತ, ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ತಾಯಂದಿರ ಪಾತ್ರ ಮಹತ್ವದಾಗಿದೆ. ಯಾವುದೇ ಮಗುವಿಗೆ ತಾಯಿಯೆ ಮೊದಲ ಗುರುವಾಗಿದ್ದು, ತಾಯಂದಿರು ಹಾಕಿಕೊಡುವ ಉತ್ತಮ ಸಂಸ್ಕಾರ, ಧಾರ್ಮಿಕ ಮೌಲ್ಯಗಳ ತಳಹದಿಯ ಮೇಲೆ, ಆ ಮಗುವಿನ ಜೀವನ ನಿರ್ಧರಿತವಾಗುವುದರಿಂದ ತಾಯಂದಿರು ತಮ್ಮ ಮಕ್ಕಳಿಗೆ ಸನ್ಮಾರ್ಗ ತೊರಿಸುವ ದಿಸೆಯಲ್ಲಿ, ಧಾರ್ಮಿಕ ಮೌಲ್ಯಗಳ ಆಧಾರಿತ ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು.
ಶರಣೆ ಡಿವೈಎಸ್‌ಪಿ ಉಮಾರಾಣಿ, ತಾಲೂಕು ಟೌನ್ ವೀರಶೈವ ಸಮಾಜದ ಅಧ್ಯಕ್ಷ ಮಹಾದೇವ, ಗೌರವ ಅಧ್ಯಕ್ಷ ಚಂದ್ರಶೇಖರ್, ಟ್ರಸ್ಟ್‌ನ ಅಧ್ಯಕ್ಷ ವಿಶ್ವನಾಥ, ವೀರಶೈವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗುರುಸಿದ್ದೇಶ್ವರ, ಪ್ರಮುಖರಾದ ಕಿರಣಬಾಬು, ಚಂದ್ರಶೇಖರ, ಪ್ರಕಾಶ್, ಡಾ. ದಿನೇಶ್, ಆರಾಧ್ಯ, ಪ್ರಸಾದ್ ಇತರರು ಉಪಸ್ಥಿತರಿದ್ದು, ವೀರಶೈವ ಸಮಾಜದ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement