ರಂಗಭೂಮಿ ಪ್ರತಿಕ್ಷಣ ಪ್ರವಹಿಸುವ ಸಶಕ್ತ ಸಮೂಹ ಕಲೆ: ಶಂಕರ ಶೆಟ್ರು
ಕ.ಪ್ರ. ವಾರ್ತೆ ತುಮಕೂರು ಮಾ.20
ಆಧುನಿಕ ಮಾಧ್ಯಮಗಳಿಂದ ರಂಗಭೂಮಿಗೆ ಪೆಟ್ಟು ಎಂದು ಹೇಳುವುದು ಬಾಲಿಶ. ಆದರೆ ರಂಗಭೂಮಿ ಜೀವಂತ ಮತ್ತು ಪ್ರತಿಕ್ಷಣವು ಬದಲಾವಣೆಯನ್ನ ಮೇಳೈಸಿಕೊಂಡು ಪ್ರವಹಿಸುವ ಸಶಕ್ತ ಸಮೂಹ ಕಲೆ ಎಂದು ಬುದ್ಧ ಪ್ರಶಸ್ತಿ ವಿಜೇತ ಶಂಕರ ಶೆಟ್ರು ಅಭಿಪ್ರಾಯಪಟ್ಟರು.
ಅವರು ಕುಸುಮ ಕಲಾಸಂಘ ಮೆಳೇಕಲ್ಲಹಳ್ಳಿ ಹಾಗು ದೇವಾಂಗ ಸಂಘ ಕಲ್ಲೂರು, ಸಹಯೋಗದಲ್ಲಿ ಆಯೋಜಿಸಿದ್ದ ಸುಗ್ಗಿ ರಂಗ ಸಂಭ್ರಮ-2013 ರ ಮೂರನೇ ಕಾರ್ಯಕ್ರಮವನ್ನು ಕಲ್ಲೂರಿನ ಶ್ರೀ ರುದ್ರಮುನಿ ಸ್ವಾಮಿ ದೇವಾಲಯದ ಆವರಣದಲ್ಲಿ ಮಾತನಾಡಿದರು.ನಾಡು ನುಡಿ, ಬದುಕನ್ನ ಹಸನು ಮಾಡುವಲ್ಲಿ ನಾಟಕ ಕಲೆ ಪವಿತ್ರವಾದದು.್ದ ಅದನ್ನ ನಾವೆಲ್ಲರೂ ಗೌರವಿಸುವುದರ ಮೂಲಕ ಕಲಾವಿದನಿಗೆ ಪ್ರೋತ್ಸಾಹ ಅತ್ಯಗತ್ಯ ಎಂದರು. ಅತಿಥಿಗಳಾಗಿದ್ದ ದೇವಾಂಗ ಸಂಘದ ಕಾರ್ಯದರ್ಶಿ ಧನ್ಯಕುಮಾರ್ ಮಾತನಾಡಿ ರಂಗ ಕಲೆಯ ಬಗ್ಗೆ ನಿರ್ಲಕ್ಷ್ಯ ಭಾವ ಸರಿಯಲ್ಲ. ಅದಕ್ಕೆ ಹೆಚ್ಚಿನ ಸಹಕಾರ ನೀಡಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವೆಂದರು. ಸಾನಿಧ್ಯ ವಹಿಸಿದ್ದ ಗೌರಿಶಂಕರ ಸ್ವಾಮಿಗಳು ಮಾತನಾಡಿ ರಂಗ ಕಲೆ ನಾಗರಿಕ ಸಮಾಜದ ಕೈಗನ್ನಡಿ ಎಲ್ಲರನ್ನು ಹಾಸ್ಯದ ಹೊನಲಿನಲ್ಲಿ ತೇಲಿಸುತ್ತಲ್ಲೆ ಸಮಾಜದಲ್ಲಿನ ಅಂಕುಡೊಂಕುಗಳನ್ನ ದೊಡ್ಡವರ ಡೋಂಗಿತನದ ವಿರೂಪ ಮುಖಗಳನ್ನ ಜನಸಾಮಾನ್ಯರೆದರು ಎಳೆಎಳೆಯಾಗಿ ಬಿಚ್ಚಿಟ್ಟರು.
ಅಧ್ಯಕ್ಷತೆ ವಹಿಸಿದ್ದ ಕಲ್ಲೂರು ಗ್ರಾ.ಪಂ. ಅಧ್ಯಕ್ಷ ಶಿವಪ್ರಸನ್ನ ಮಾತನಾಡಿ ನೈಜತೆಯ ಜೊತೆ ಕ್ರಿಯಾಶೀಲತೆಯನ್ನ ರಂಗ ಭೂಮಿಯಲ್ಲಿ ಮಾತ್ರ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರಯತ್ನ ಶೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಕುಸುಮ ಕಲಾಸಂಘದ ಸಾಧನೆ ಮೆಚ್ಚುವಂತದ್ದು ಎಂದರು.
ಗೋರಾಘಟ್ಟದ ನಿಂಗಣ್ಣ ಭಾಗವಹಿಸಿದ್ದರು. ರಂಗ ಕಲಾವಿದರಾದ ಗಾಡಿ ಕೃಷ್ಣಮೂರ್ತಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು, ತೀರ್ಥಪ್ರಸಾದ್ ನಿರೂಪಿಸಿ ದರ್ಶನ್ ವಂದಿಸಿದರು.
ರಮೇಶ್ ಮೆಳೇಕಲ್ಲಹಳ್ಳಿ ಸ್ವಾಗತಿಸಿದರು. ಅಮರೇಶ್ವರ ನಾಟಕ ಮಂಡಳಿ ತುಮಕೂರು ಇವರಿಂದ ವಿಷ ಜ್ವಾಲೆ ನಾಟಕಗಳು ನೆರೆದಿದ್ದ ಪ್ರೇಕ್ಷಕ ಸಮೂಹದಲ್ಲಿ ಹೊಸ ಸಂಚಲವನ್ನು ಉಂಟು ಮಾಡುವಲ್ಲಿ ಯಶಸ್ವಿಯಾದವು.