ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸೋಲಿನ ಭೀತಿಯಿಂದ ಹತಾಶ ಹೇಳಿಕೆ

Srinivasa Murthy VN
Updated On : 25 Mar 2013, 12:12 pm

ಚಿಕ್ಕನಾಯಕನಹಳ್ಳಿ: ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್ ಅವರು ಗುಬ್ಬಿ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆಂಬ  ಅಪಪ್ರಚಾರ ಸೋಲಿನ ಭೀತಿಯಲ್ಲಿರುವವರ ಹತಾಶ ಹೇಳಿಕೆ ಎಂದು ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್ ಟೀಕಿಸಿದರು.
ಮಾ.24ರಂದು ಪಟ್ಟಣದ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಇತ್ತೀಚೆಗೆ ಸೋಲಿನ ಹತಾಶೆಯಲ್ಲಿರುವವರ ಬೆಂಬಲಿಗರಿಂದ ಅಪಪ್ರಚಾರ ಮತ್ತು ಕಾರ್ಯಕರ್ತರಲ್ಲಿ ಗೊಂದಲವನ್ನುಂಟುಮಾಡುವ ಹೇಳಿಕೆಗಳು ಕೇಳಿಬರುತ್ತಿವೆ. ಕಳೆದ ಚುನಾವಣೆಯಲ್ಲಿ ಜನರಿಂದ ತಿರಸ್ಕರಿಸಲ್ಪಟ್ಟು ಮೂರನೇ ಸ್ಥಾನಕ್ಕಿಳಿದಿದ್ದ ವ್ಯಕ್ತಿಯ ಕಡೆಯವರು ಇಂತಹ ಕೀಳು ಪ್ರಚಾರವನ್ನು ಕೈಗೊಂಡಿದ್ದು, ಕಾರ್ಯಕರ್ತರು ಗೊಂದಲಕ್ಕೊಳಗಾಗಬಾರದು ಎಂದರು.
ವಿಶ್ವಾಸ ಗಳಿಸಿದ್ದೇನೆ: ಈಗಾಗಲೇ ಪಕ್ಷದ ಉನ್ನತಮಟ್ಟದಲ್ಲಿ ಚಿ.ನಾ.ಹಳ್ಳಿ ಕ್ಷೇತ್ರಕ್ಕೆ ನೀವೇ ಬಿಜೆಪಿ ಅಭ್ಯರ್ಥಿ, ಪಕ್ಷದ ಸಂಘಟನೆ ಮಾಡಿ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ನಾನು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನರ ವಿಶ್ವಾಸಗಳಿಸಿದ್ದೇನೆ. ಹಿರಿಯ ಮುತ್ಸದ್ದಿ ರಾಜಕಾರಿಣಿಯೊಬ್ಬರು ಯಾವುದೇ ಕಾರಣಕ್ಕೂ ತಾಲೂಕಿಗೆ ನೀರು ಬರುವುದಿಲ್ಲ, ಒಂದು ವೇಳೆ ಯಾರಾದರು ತಂದರೆ ನಾನು ಅವರ ಹಿಂದೆ ಹೋಗುತ್ತೇನೆ ಎಂದು ಹೀಗಳೆದಿದ್ದರು. 102 ಕೋಟಿ ರು.ಗಳ ಯೋಜನೆಯನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ಆದರೆ ಇಂದು ಅವರೆ ನಮ್ಮ ಬಗ್ಗೆ ಸಲ್ಲದ ಪ್ರಚಾರ ಮಾಡುತ್ತಿದ್ದಾರೆ. ಇದಲ್ಲದೆ ನಮ್ಮ ಸರ್ಕಾರ ಕ್ಷೇತ್ರಕ್ಕೆ ಪುರಸಭೆಯ ಮೂಲಕ  ಪಟ್ಟಣದ ಅಭಿವೃದ್ಧಿಗೆ 5 ಕೋಟಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 5 ಕೋಟಿ ಯೋಜನೆಗಳನ್ನು ಜಾರಿಮಾಡಿದರೂ ಶಾಸಕರ ನಿರ್ಲಕ್ಷದಿಂದ ನಿರೀಕ್ಷಿತ ಗುಣಮಟ್ಟ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಇದರಿಂದ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಆದ್ದರಿಂದ ಜನರ ಪ್ರೀತಿ ವಿಶ್ವಾಸ ನಮ್ಮ ಮೇಲೆ ಮತ್ತು ಪಕ್ಷದ ಮೇಲಿರುವುದರಿಂದ ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಜಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ನಾವು ಯಾವುದೇ ಕಾರಣಕ್ಕೂ ಕ್ಷೇತ್ರದಿಂದ ಪಲಾಯಮಾಡುವ ಪ್ರಮೇಯವಿಲ್ಲ. ಇಂತಹ ಕೀಳು ಪ್ರಚಾರಕ್ಕೆ ಕಿವಿಗೊಡಬೇಡಿ ಎಂದರು.
ಪ್ರಚಾರಕ್ಕೆ ಚಾಲನೆ: ಆದರೂಸಹ ಜನಗೊಂದಲಕ್ಕೊಳಗಾಗಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಇಂದು  ಹುಳಿಯಾರು ಹೋಬಳಿ ಮರೆನಡು ಗ್ರಾಮದ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ಕಾರ್ಯಕರ್ತರು ಹೆಚ್ಚಿನ ಉತ್ಸಾಹದಿಂದ ಪ್ರಚಾರ ಕಾರ್ಯಕೈಗೊಂಡು ಪಕ್ಷವನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಕಾರಕರ್ತರಾಗಬೇಕೆಂದು ಅವರು ನುಡಿದರು.
 ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಮಿಲಿಟರಿ ಶಿವಣ್ಣ, ಜಿಪಂ ಸದಸ್ಯ ಎಚ್.ಬಿ. ಪಂಚಾಕ್ಷರಿ,ತಾಪಂ ಅಧ್ಯಕ್ಷ ಎಂ.ಎಂ. ಜಗದೀಶ್, ತಾಪಂ ಸದಸ್ಯರಾದ ಕೆಂಕೆರೆ ನವೀನ್, ವಸಂತಕುಮಾರ್, ಎ.ಬಿ. ರಮೇಶ್‌ಕುಮಾರ್, ಗ್ರಾಮಪಂಚಾಯ್ತಿ ಸದಸ್ಯ ಅಗಸರಹಳ್ಳಿ ಶಶಿಧರ, ಮಾಜಿ ಅಧ್ಯಕ್ಷ ಸಿ.ಎಸ್.ರಾಜಣ್ಣ,ಶ್ರೀನಿವಾಸಮೂರ್ತಿ ಮುಂತಾದವರಿದ್ದರು

ದೇಶ ಸೇವೆ ರಾಷ್ಟ್ರದ ಅಭ್ಯುದಯಕ್ಕೆ ದಾರಿದೀಪ: ಪ್ರೊ.ಮ.ಲ.ನ.ಮೂರ್ತಿ ಅಭಿಮತ
ಕ.ಪ್ರ. ವಾರ್ತೆ  ಮಧುಗಿರಿ  ಮಾ.24
ಶಿಕ್ಷಣದ ಜೊತೆಗೆ ಪಠ್ಯೇತರ ವಿಷಯಗಳು ಅತಿ ಮುಖ್ಯವಾಗಿದ್ದು, ವಿದ್ಯಾರ್ಥಿಗಳ  ದೇಶ ಸೇವೆ ರಾಷ್ಟ್ರದ ಅಭ್ಯುದಯಕ್ಕೆ ದಾರಿದೀಪ ಎಂದು ಪ್ರೊ.ಮ.ಲ.ನ.ಮೂರ್ತಿ ಅಭಿಪ್ರಾಯಪಟ್ಟರು.
ಮಧುಗಿರಿಯ ಟಿ.ವಿ.ವಿ.ಪ್ರಥಮ ದರ್ಜೆ ಕಾಲೇಜು ಎನ್‌ಎಸ್‌ಎಸ್ ಘಟಕ ಬಿಜವರ ಗ್ರಾಮ ಪಂಚಾಯಿತಿ ಸೋಗೇನಹಳ್ಳಿಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿ, ನಮ್ಮನ್ನು ನಾವು ಪ್ರಶ್ನಿಸಿಕೊಳ್ಳದೇ ದೇಶ ನಮಗೇನೂ ಕೊಟ್ಟಿದೆ ಎಂದು ಕೇಳುವ ಬದಲು ದೇಶಕ್ಕೆ ನಾವೇನು ಕೊಟ್ಟಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು.
ದೇಶದ ಬೇರು ಹಳ್ಳಿಗಳಲ್ಲಿ ಅಡಗಿದ್ದು, ಆ ಬೇರಿಗೆ ನೀರು ಹಾಕದೇ ಕಾಂಡಕ್ಕೆ ಬಣ್ಣ ಬಳಿದರೆ ಮರ ಬೆಳೆಯದು, ಹಾಗೆಯೇ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯಲ್ಲಿಯೇ ದೇಶದ ಪ್ರಗತಿಯೂ ಅಡಗಿದ್ದು ವಿದ್ಯಾರ್ಥಿಗಳು ನಿಸ್ವಾರ್ಥ ಸೇವೆ ಮಾಡುವ ನಿಟ್ಟಿನಲ್ಲಿ ಮಾನವೀಯತೆ ಮೆರೆದಾಗ ದೇಶ ತಂತಾನೇ ಅಭಿವೃದ್ಧಿ ಸಾಧಿಸಲಿದೆ  ಎಂದರು. ಸಾಲು ಮರದ ತಿಮ್ಮಕ್ಕ, ಮದರ್ ತೆರೆಸಾ ನಿಸ್ವಾರ್ಥ ಸೇವೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
 ಡಾ. ಮಣಿಗಯ್ಯ ಮಾತನಾಡಿ, ದೇಶದಲ್ಲಿ ಮಿತಿ ಮೀರಿ ಬೆಳೆಯುತ್ತಿರುವ ಜನಸಂಖ್ಯೆ ಹೆಚ್ಚಳವೇ ಸಮಸ್ಯೆಗಳಿಗೆ ಮೂಲ ಕಾರಣ. ಹಾಗಾಗಿ ಶಿಕ್ಷಣ ದೇಶದ ಅಮೂಲ್ಯ ಸಂಪತ್ತು. ಅದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿ ಕೊಂಡು ಗುಣ ಮಟ್ಟದ ಶಿಕ್ಷಣ ಕಲಿತು ಮುಂದೆ ಬರಬೇಕು ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಬಿ.ಎಂ. ಪ್ರೇಮನಾಥ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಪಿ.ಹನುಮಂತರಾಯ ಧ್ವಜಾರೋಹಣ ನೆರವೇರಿಸಿದರು. ಗೌರಿಶಂಕರ್, ನಾಗರಾಜು, ರಾಜೀವ್, ರಂಗನಾಥ್, ಶಿಬಿರಾಧಿಕಾರಿ ಪ್ರೊ.ಸಿ.ಕೃಷ್ಣಪ್ಪ, ಎಂ. ಮುದ್ದಯ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement