ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

108 ವಾಹನದ ಸಿಬ್ಬಂದಿಗೆ ಪ್ರಾಣ ಬೆದರಿಕೆ: ಪ್ರತಿಭಟನೆ

Srinivasa Murthy VN
Updated On : 1 Apr 2013, 12:05 pm

ಕ.ಪ್ರ.ವಾರ್ತೆ ಕುಣಿಗಲ್ ಮಾ 31
108 ಆರೋಗ್ಯರಕ್ಷಾ ಕವಚ ವಾಹನದಲ್ಲಿ ಶವ ಹಾಕಲು ನಿರಾಕರಿಸಿದ್ದಕ್ಕೆ, 108 ವಾಹನದ ಸಿಬ್ಬಂದಿ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಶಕಿಯ ಪತಿರಾಯ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದನ್ನು ಖಂಡಿಸಿದ ವಾಹನದ ಸಿಬ್ಬಂದಿ, ಸೂಕ್ತ ರಕ್ಷಣೆಗೆ ಅಗ್ರಹಿಸಿ ಭಾನುವಾರ ಕೆಲಸ ನಿರ್ವಹಿಸದೆ ಪ್ರತಿಭಟನೆ ನಡೆಸಿದರು.
ಕಳೆದ ಶನಿವಾರ ರಾತ್ರಿ 11ಗಂಟೆ ಸಮಯದಲ್ಲಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 108 ವಾಹನದ ಸಿಬ್ಬಂದಿ ಕರ್ತವ್ಯನಿರತರಾಗಿದ್ದ ವೇಳೆಯಲ್ಲಿ, ಆಸ್ಪತ್ರೆಯ ಶುಶ್ರೂಶಕಿ ದಾಕ್ಷಾಯಿಣಿ ಎಂಬುವವರ ಪತಿ ಕೃಷ್ಣಮೂರ್ತಿ ಎಂಬಾತ, ಏಕಾಏಕಿ ಸಿಬ್ಬಂದಿಮೇಲೆ ಮುಗಿಬಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ, ತಾನು ಹೇಳಿದರೂ ಕಳೆದ 24ನೇ ರಂದು ಯಡೆಯೂರು ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವ ತಾರದೆ, ಮನಬಂದಂತೆ ವರ್ತಿಸಿದರು. ಹೀಗೆಯೆ ಕಳೆದ ನಾಲ್ಕಾರು ಬಾರಿ ಮಾಡಿರುವ 108 ಸಿಬ್ಬಂದಿಗಳಿಗೆ ತಕ್ಕಶಾಸ್ತಿ ಮಾಡುವುದಾಗಿ ಹೇಳಿ, ಪ್ರಾಣ ಬೆದರಿಕೆ ಹಾಕಿದರೆನ್ನಲಾಗಿದೆ. ಆಸ್ಪತ್ರೆಯ ಸ್ವಚ್ಛತಾ ಮೇಲ್ವಿಚಾರಕ ಶಿವರಾಮ್ ಮಧ್ಯಪ್ರವೇಶಿಸಿ ಸಮಾಧಾನಗೊಳಿಸಲೆತ್ನಿಸಿದರೂ, ಸುಮ್ಮನಾಗದೆ ರಾತ್ರಿ 12ಗಂಟೆವರೆಗೂ ತಮ್ಮ ಪ್ರಲಾಪ ಮುಂದುವೆರೆಸಿದರು. 108 ವಾಹನದ ಸಿಬ್ಬಂದಿ, ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ ಮೇರೆಗೆ ನಡುರಾತ್ರಿಯಲ್ಲಿ ಪೊಲೀಸರು ಆಗಮಿಸಿ, ಪರಿಸ್ಥಿತಿ ತಿಳಿಗೊಳಿಸಿ ತೆರಳಿದರು.
ಧರಣಿ:  ಭಾನುವಾರ ಬೆಳಗ್ಗೆ ಸಾರ್ವಜನಿಕ ಆಸ್ಪತ್ರೆ ಅವರಣದಲ್ಲಿ ಸಂಘಟಿತರಾದ ಯಡೆಯೂರು, ಹುಲಿಯೂರುದುರ್ಗ, ಇತರೆಡೆಯ ತಾಲೂಕಿನ 108 ವಾಹನದ ಸಿಬ್ಬಂದಿ,  ಆರೋಗ್ಯರಕ್ಷಾ ಕವಚ ವಾಹನ ಸಿಬ್ಬಂದಿ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಮಹೇಶ್ವರ್ ನೇತೃತ್ವದಲ್ಲಿ, ಶುಶ್ರೂಶಕಿಯ ಪತಿರಾಯರ ಧೋರಣೆ ಖಂಡಿಸಿ, ತಮಗೆ ಸೂಕ್ತ ರಕ್ಷಣೆ ಕಲ್ಪಿಸುವವರೆಗೂ, ಕರ್ತವ್ಯದಿಂದ ಹೊರಗುಳಿದು ಧರಣಿ ಪ್ರಾರಂಭಿಸಿದರು.

ತೆಂಗಿನ ಕಾಯಿ ಕೀಳಲು ಮರ ಹತ್ತಿದ್ದ ವ್ಯಕ್ತಿ ಸಾವು
ತಿಪಟೂರು: ತಾಲೂಕಿನ ಕೊಬ್ಬರಿದೊಡ್ಡಯ್ಯನಪಾಳ್ಯದ ಬಸವರಾಜು ಎಂಬುವವರ ತೆಂಗಿನ ತೋಟದಲ್ಲಿ ಕಾಯಿ ಕೀಳಲು ಮರ ಹತ್ತಿದ್ದ ಕಾರ್ಮಿಕರೊಬ್ಬರು ಮರದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಪರಮೇಶ್ ಎಂಬುವವರು ತೋಟದಲ್ಲಿ ಕಾಯಿ ಕೀಳುವಾಗ, ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು  ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement