ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಅಪಪ್ರಚಾರ ಬೇರು ಸಹಿತ ಕಿತ್ತೊಗೆಯಿರಿ

Srinivasa Murthy VN
Updated On : 1 Apr 2013, 12:05 pm

ಕ.ಪ್ರ.ವಾರ್ತೆ ತಿಪಟೂರು ಮಾ 31
ಕೆಜೆಪಿ ಅಭ್ಯರ್ಥಿ ಲೋಕೇಶ್ವರ ವಿಧಾನಸಭಾ ಚುನಾವಣಾ ನಂತರ ಬೆಂಗಳೂರಿಗೆ ಹಿಂತಿರುಗುತ್ತಾರೆ ಎಂದು ವಿರೋದ ಪಕ್ಷದವರು ಮಾಡುತ್ತಿರುವ ಅಪಪ್ರಚಾರವನ್ನು ದಯವಿಟ್ಟು ನಮ್ಮ ಪಕ್ಷದ ಯಾವ ಕಾರ್ಯಕರ್ತರೂ ನಂಬಬಾರದು ಎಂದು ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಲೋಕೇಶ್ವರ್ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದಲ್ಲಿ ನಡೆದ ನಗರ ಘಟಕದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ಉದ್ಯೋಗದ ನಿಮಿತ್ತ ಮಾತ್ರ ಕೆಲ ವರ್ಷಗಳ ಕಾಲ ಹೊರಗಿದ್ದರೂ ಹುಟ್ಟೂರಿನ ಸೇವೆಯನ್ನು ಬದುಕಿನುದ್ದಕ್ಕೂ ಮಾಡಿಕೊಂಡು ಬಂದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಅಲ್ವಾವಧಿಯಲ್ಲಿಯೇ ಕೆಜೆಪಿ ತಾಲೂಕಿನ ಮತದಾರರ ಮನದಲ್ಲಿ ಭದ್ರವಾಗಿ ಬೇರೂರಿರುವುದನ್ನು ಸಹಿಸದ ರಾಜಕೀಯ ವಿರೋಧಿಗಳು ನಾನಾ ರೀತಿಯ ಜಾತಿ, ಉಪಜಾತಿ ಸೇರಿದಂತೆ ಗೊಂದಲದ ಮಾತುಗಳನ್ನು ತೇಲಿ ಬಿಡುತ್ತಿರುವುದಕ್ಕೆ ಕಾರ್ಯಕರ್ತರೇ ತಕ್ಕ ಪಾಠ ಹೇಳುವ ಮೂಲಕ ಅಪಪ್ರಚಾರಕ್ಕೆ ಇತಿಶ್ರೀ ಹಾಡಬೇಕು. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ರಕ್ಷಣೆ ನೀಡುವಂತಹ ಉನ್ನತ ಸರ್ಕಾರಿ ಪೊಲೀಸ್ ಸೇವೆಗೆ ನಿವೃತ್ತಿ ಹೇಳಿ ಜನಸೇವೆ ಮಾಡಲೆಂದೇ ಹುಟ್ಟೂರಿಗೆ ಹಿಂತಿರುಗಿದ್ದೇನೆ. ಸಮಾಜ ಸೇವೆ ಮಾಡಬೇಕೆಂಬ ತುಡಿತ ನನ್ನಲ್ಲಿರುವುದರಿಂದ ಶಾಶ್ವತವಾಗಿ ಕಲ್ಪತರು ನಾಡಿನಲ್ಲೇ ಇದ್ದು ಜನತೆಯ ಇಚ್ಛೆಯಂತೆ ಜನಾರ್ದನನ ಸೇವೆಯನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡುತ್ತೇನೆ ಎಂದು  ಲೋಕೇಶ್ವರ ಕಾರ್ಯಕರ್ತರಿಗೆ ವಚನ ನೀಡಿದರು.
ತೀರ್ಪಿಗೆ ವಿರುದ್ಧವಾಗಿ ನಡೆದ ಶಾಸಕ: ಯಡಿಯೂರಪ್ಪನವರ ನಾಯಕತ್ವ ಬೆಂಬಲಿಸಿ ನಾಗೇಶ್‌ರನ್ನು ಶಾಸಕನನ್ನಾಗಿ ಆಯ್ಕೆ ಮಾಡಿ ಗೆಲ್ಲಿಸಿದ್ದಕ್ಕೆ ಅವರು ಗೆದ್ದ ನಂತರ ಅನಂತಕುಮಾರ್‌ಗೆ ಬೆಂಬಲವಾಗಿ ನಿಂತು ಕ್ಷೇತ್ರದ ಜನತೆ ನೀಡಿದ ತೀರ್ಪಿಗೆ ವಿರುದ್ಧವಾಗಿ ನಡೆದುಕೊಂಡು ಮತದಾರರಿಗೆ ದ್ರೋಹ ಬಗೆದಿದ್ದಾರೆ. ಕ್ಷೇತ್ರದಲ್ಲಿ ಕೆಜೆಪಿ ಹುಟ್ಟುವುದಕ್ಕೆ ಮುಂಚೆ ಪ್ರತಿಪಕ್ಷವೇ ಇಲ್ಲದಂತಾಗಿದ್ದು, ಹಾಲಿ-ಮಾಜಿ ಶಾಸಕರುಗಳು ಏನೋ ಒಪ್ಪಂದ ಮಾಡಿಕೊಂಡಂತೆ ಜನರ ಕಣ್ಣಿಗೆ ಮಣ್ಣೆರೆಚಿದ್ದಾರೆ. ಕೇವಲ ಮೂರು ತಿಂಗಳ ಹಿಂದೆಯಷ್ಟೇ ಉದಯವಾದ ಕೆಜೆಪಿ ಪಕ್ಷವು ಕ್ಷೇತ್ರದಲ್ಲಿ ಪ್ರಬಲ ವಿರೋಧ ಪಕ್ಷವಾಗಿ ಜನತೆಯ ಸಮಸ್ಯೆಯ ಬಗ್ಗೆ ಸಾರ್ವಜನಿಕವಾಗಿ ಹೋರಾಟ ಮಾಡುತ್ತಿರುವುದನ್ನೂ ಸಹಿಸದ ಕೆಲವರು, ನನ್ನ ಬಗ್ಗೆ ಅಪಪ್ರಚಾರ ಮಾಡಲು  ಇಂತಹ ಹೀನ ಕೃತ್ಯಗಳಿಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಮಹತ್ವದ ಕೆಲಸ: ಅಧ್ಯಕ್ಷತೆ ವಹಿಸಿದ್ದ ತಾ.ಅಧ್ಯಕ್ಷ ರಘುಪತಿ ಮಾತನಾಡಿ ಕಾರ್ಯಕರ್ತರು ಪಕ್ಷದ ತೆಂಗಿನಕಾಯಿಯ ಚಿಹ್ನೆಯನ್ನು ಸ್ಪಷ್ಟವಾಗಿ ಮತದಾರರಿಗೆ ಮನವರಿಕೆ ಮಾಡುವುದು ಮಹತ್ವದ ಕೆಲಸವಾಗಿದೆ ಎಂದರು.
ಮಾಜಿ ನಗರಸಭಾ ಸದಸ್ಯ ಹಾಗೂ ಜೆಡಿಎಸ್ ತಾಲೂಕು ಮುಖಂಡ ಜಿ.ಕೆ.ನಟರಾಜ್ ಸೇರಿದಂತೆ ಮಹಾಲಿಂಗಪ್ಪ, ಶಂಕರಮೂರ್ತಿ, ಬಸವರಾಜು, ಚಂದ್ರಶೇಖರಯ್ಯ, ಕಾಂಗ್ರೆಸ್‌ನಿಂದ ಮಡೆನೂರು ರಂಗಸ್ವಾಮಿ, ಸತೀಶ್, ಶಶಿಧರ್, ಚಂದ್ರಶೇಖರಯ್ಯ, ಶ್ರೀಧರ್, ಸುಂದರಮೂರ್ತಿ, ಬಿಜೆಪಿಯಿಂದ ಪ್ರಭುಸ್ವಾಮಿ ಮತ್ತಿತರ ಪಕ್ಷಗಳ ನೂರಾರು ಮುಖಂಡರು, ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾದರು. ಸಮಾವೇಶದಲ್ಲಿ ಮಾಜಿ ಶಾಸಕ ಬಿ.ನಂಜಾಮರಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಮಿತ್ರ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಮಹಮದ್ ಅನ್ಸರ್, ಮುಖಂಡರಾದ ನಾಸೀರ್ ಖಾನ್ ಹಾಗೂ ಕೆಜೆಪಿ ನಗರಸಭಾ ಸದಸ್ಯರುಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement