ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನನ್ನ ವಿರುದ್ಧ ಇಲ್ಲ ಸಲ್ಲದ ಅಪಪ್ರಚಾರ

Srinivasa Murthy VN
Updated On : 17 May 2013, 12:45 pm

ಕ.ಪ್ರ.ವಾರ್ತೆ ಮಧುಗಿರಿ ಮೇ 16
ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ನವರು ಬಿಎಸ್ಪಿ ಅಭ್ಯರ್ಥಿ ಹಣ ತೆಗೆದುಕೊಂಡು ಕ್ಷೇತ್ರ ಬಿಟ್ಟಿದ್ದಾರೆ ಎಂದು  ಸುಮ್ಮನೆ ಅಪಪ್ರಚಾರ  ಮಾಡಿದ್ದು ನನ್ನ ಸೋಲಿಗೆ ಕಾರಣವಾಯಿತು ಎಂದು ಬಿಎಸ್ಪಿ ಅಭ್ಯರ್ಥಿ ಕೋರಮಂಗಲ ಮುನಿಯಪ್ಪ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಈ ವಿಷಯ ತಿಳಿಸಿದ ಅವರು, ಒಂದು ಚಳವಳಿ ಕಟ್ಟುವುದಕ್ಕಾಗಿ ನಮ್ಮನ್ನು ನಾವು ತ್ಯಾಗ ಮಾಡಿ ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧರಾಗಿ ನಡೆದುಕೊಂಡು ಬಂದಿದ್ದೇವೆ. ನಮ್ಮಂಥ ನಿಷ್ಠಾವಂತರ ಮೇಲೆ ಗೂಬೆ ಕೂರಿಸಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುವುದು ಆ ಪಕ್ಷದವರ ಜಯಮಾನ,ಅಧಿಕಾರ ಶಾಶ್ವತವಲ್ಲ. ಅದು ತಾತ್ಕಾಲಿಕ ಎಂದು ವಿರೋಧ ಪಕ್ಷದವರ ವಿರುದ್ಧ  ಕಿಡಿಕಾರಿದ ಮುನಿಯಪ್ಪ ಚುನಾವಣೆ ಮುನ್ನಾ ದಿನ ನಾವು ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿದ್ದೆವು. ಆಗ ಕೆಲ ವಿರೋಧ ಪಕ್ಷದ ಮುಖಂಡರು  ನಮ್ಮ ಕಾರ್ಯಕರ್ತರನ್ನು  ದಿಕ್ಕು ತಪ್ಪಿಸಿ ಅವರ ಪಕ್ಷಕ್ಕೆ ಸೇರಿಸಿಕೊಂಡು ಬಿಎಸ್ಪಿ ಅಭ್ಯರ್ಥಿ ಮುನಿಯಪ್ಪ ಹಣ ತೆಗೆದುಕೊಂಡು ಊರು ಬಿಟ್ಟಿದ್ದಾರೆ ಎಂದು ಸುಳ್ಳು ವರದಿ ಸೃಷ್ಠಿಸಿದ ಪರಿಣಾಮ ನನ್ನ ಸೋಲಿಗೆ ಕಾರಣವಾಯಿತು. ಆದರೆ ಮತದಾರರು  ಬೇರೆಯವರ ಮಾತು ಕೇಳಿ ನಾವು ಮೋಸ ಹೋಗಿದ್ದೇವೆ ಎಂದು ಹೇಳುತ್ತಾರೆ. ಆದ ಕಾರಣ ಅಪಪ್ರಚಾರಕ್ಕೆ ಕಿವಿ ಗೊಡಬೇಡಿ.  ನಾನು ಮಧುಗಿರಿ ಬಿಟ್ಟು ಓಡಿ ಹೋಗಲ.್ಲ ಬಿಎಸ್ಪಿಯನ್ನು ತಳ ಮಟ್ಟದಿಂದ ಇನ್ನು ಗಟ್ಟಿಯಾಗಿ ಕಟ್ಟಿ ಬಲಿಷ್ಠಗೊಳಿಸುತ್ತೇನೆ. ಮತದಾರರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ. ಗೊಡ್ಡು ಬೆದರಿಕೆಗೆ ಅಂಜುವುದಿಲ್ಲ.  ನಾನು ಕ್ಷೇತ್ರ ಬಿಟ್ಟು ಹೋಗಲ್ಲ ಎಂದ ಅವರು, ಈ ಎಲ್ಲದರ ನಡುವೆಯೂ ಮತದಾರರು ನಮ್ಮ ಪಕ್ಷಕ್ಕೆ ಮತ ನೀಡಿದ್ದಾರೆ. ಆದಕಾರಣ ಮಧುಗಿರಿ ಕ್ಷೇತ್ರದ ಜನತೆಗೆ ಬಿಎಸ್ಪಿ ಪರವಾಗಿ  ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಗೋಷ್ಠಿಯಲ್ಲಿ ತಾ.ಅಧ್ಯಕ್ಷ ದೊಡ್ಡೇರಿ ಕಣಿಮಯ್ಯ, ತಾ.ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹಮದ್ ಹಫೀಜುಲ್ಲ, ಮುಖಂಡ ಬೆಲ್ಲದಮಡು ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement