ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಸವ ತತ್ವ ಎಂದೆಂದಿಗೂ ಸಾರ್ವಕಾಲಿಕ

Srinivasa Murthy VN
Updated On : 17 May 2013, 12:44 pm

ಕ.ಪ್ರ.ವಾರ್ತೆ ಮಧುಗಿರಿ ಮೇ 16
ಬಸವ ತತ್ವ ಎಂದೆಂದಿಗೂ  ಸಾರ್ವಕಾಲಿಕ ಎಂದು ಗ್ರೇಡ್ 2 ತಹಸೀಲ್ದಾರ್ ಐ.ಎನ್. ಚಂದ್ರಯ್ಯ ಅಭಿಪ್ರಾಯಪಟ್ಟರು.
ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವಮಾನವ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಸಾಮಾಜಿಕ ಸಮಾನತೆ ತತ್ವ ಆರೋಗ್ಯಕರವಾಗಿದ್ದು ಉತ್ಕೃಷ್ಟ ಸಮಾಜ ನಿರ್ಮಾಣಕ್ಕೆ ತಳಹದಿ ಒದಗಿಸಿದೆ. ತನ್ನ ಬದುಕು ಹಸನಾದರೆ ಸಾಲದು ಸಮಾಜದ ಇತರರು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು ಎಂಬ ಅಭಿಲಾಶೆ ಅವರದ್ದಾಗಿತು.್ತ ಸ್ತ್ರೀಸಮಾನತೆ, ದನಿ ಇಲ್ಲದವರಿಗೆ ದನಿ ಮತ್ತು ಪರಿಶುದ್ಧ ಜೀವನ ನಡೆಸಲು ಅಗತ್ಯವಾದ ಕಳಬ್ಯಾಡ ಕೊಲಬ್ಯಾಡ ಎಂಬ ತತ್ವ ಎಲ್ಲರಿಗೂ ಅಗತ್ಯವಾದುದು. ಅವರು ಆತ್ಮ ಶೋಧನೆಯ ಮೂಲಕ ಸಾಮಾಜಿಕ ಶೋಧನೆ  ನಡೆಸಿ ಎಲ್ಲರ ಮನ, ಮನೆ  ಮುಟ್ಟಿದರು. ಮನುಷ್ಯರ ನಡುವಿನ ಸಾಮಾಜಿಕ ಅಸಮಾನತೆ ತೊಡೆದು ಹಾಕಲು ಶ್ರಮಿಸಿದ ಮಹಾಪುರುಷ ಬಸವಣ್ಣ ಎಂದು ಬಣ್ಣಿಸಿದರು.  
ಶಿರಸ್ತೆದಾರ ವರದರಾಜು, ಕಂದಾಯ ತನಿಖಾಧಿಕಾರಿ ಜಯರಾಮಯ್ಯ, ವೀರಶೈವ ಸಮಾಜದ ಅಧ್ಯಕ್ಷ ಬಸವಾರಾಧ್ಯ, ಮುಖಂಡರಾದ ಫರ್ನಿಚರ್ ಮಂಜುನಾಥ್, ಶಿಕ್ಷಕ ರಂಗರಾಜು, ರಂಜನ್, ಜಯರಾಮಯ್ಯ,ನಾಗೇಶಬಾಬು ಇನ್ನು ಅನೇಕರು ಉಪಸ್ಥಿತರಿದ್ದರು.

19 ರಂದು ದರ್ಪಣ ಸುಂದರಿ ಬಿಡುಗಡೆ
ಕ.ಪ್ರ.ವಾರ್ತೆ ತುಮಕೂರು ಮೇ 16
ತುಮಕೂರಿನ ಹವ್ಯಾಸಿ ಪ್ರಕಾಶನದ ವತಿಯಿಂದ ಮೇ 19 ರಂದು ಬೆಳಗ್ಗೆ 10-30 ಕ್ಕೆ ಯುವ ಕವಿ ಮನೋಜ್ ಅವರ ದರ್ಪಣ ಸುಂದರಿ ಕವನ ಸಂಕಲನ ಬಿಡುಗಡೆ ಸಮಾರಂಭ ಏರ್ಪಾಟಾಗಿದೆ. ಕವನ ಸಂಕಲನವನ್ನು ಪತ್ರಿಕೋದ್ಯಮಿ ಎಸ್. ನಾಗಣ್ಣ ಬಿಡುಗಡೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಭೂಮಿ ಬಳಗದ ಜಿ.ಎಸ್. ಸೋಮಣ್ಣ ವಹಿಸಲಿದ್ದಾರೆ. ವಿಮರ್ಶಕ ಕೆ.ಪಿ. ನಟರಾಜ್, ಕವಯತ್ರಿಯರಾದ ಬಿ.ಸಿ. ಶೈಲಾ ನಾಗರಾಜ್, ಸುಶೀಲಾ ಸದಾಶಿವಯ್ಯ ಮಾತನಾಡಲಿದ್ದಾರೆ. ನಂತರ ಕವಿಗೋಷ್ಠಿ ಏರ್ಪಾಟಾಗಿದೆ. ಅಧ್ಯಕ್ಷತೆಯನ್ನು ಕವಿ ಹಾಗೂ ಪ್ರಿನ್ಸಿಪಾಲ್ ಎನ್.ನಾಗಪ್ಪ ವಹಿಸಲಿದ್ದಾರೆ. ಕವಿಗಳಾದ ಜಿ.ಕೆ. ಕುಲಕರ್ಣಿ, ಗುಬ್ಬಚ್ಚಿ ಸತೀಶ್, ಬಾಪುಜ, ಪಾವಗಡ ಸಣ್ಣರಂಗಮ್ಮ, ಕೆ.ಜಿ. ರಂಗಯ್ಯ, ಹರಳೂರು ಶಿವಕುಮಾರ್, ಡಾಣಾಪುರ ಕೃಷ್ಣಮೂರ್ತಿ, ಮುದ್ದೇನಹಳ್ಳಿ ನಂಜಯ್ಯ, ಮಲ್ಲಿಕಾ ಬಸವರಾಜು, ದೊಂಬರಹಳ್ಳಿ ನಾಗರಾಜ್, ವಿದ್ಯಾ ಅರಮನೆ, ನಿತ್ಯಾತೀತ, ತುಮಕೂರು ಭಾರ್ಗವಿ, ರಂಗಮ್ಮ ಹೊದೇಕಲ್, ಅಬ್ಲಿನಹೊಳೆ ಸುರೇಶ್, ಪಾಂಡುರಂಗಯ್ಯ ಹೊಸಹಳ್ಳಿ, ಶೆನಂಸಿ, ತುರಾಸು, ಶಶಿಕಾಲಾ ಕೃಷ್ಣಮೂರ್ತಿ, ರವೀಂದ್ರನಾಥ ಠಾಗೂರ್, ಹ. ಶಿವಣ್ಣ, ಸುಮ ಶ್ರೀಹರ್ಷ, ಈಚನೂರು ಇಸ್ಮಾಯಿಲ್, ರಮೇಶ್ ರಾಥೋಡ್, ಪಿ.ಪಿ. ಕೃಷ್ಣಮೂರ್ತಿ, ಸ್ವಾಮಿ ನ. ಕೋಡಿಹಳ್ಳಿ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

ಕುಣಿಗಲ್‌ನಲ್ಲಿ ಎಂಟಿಸಿಎಫ್‌ನಿಂದ ವಿಶ್ರಾಂತಿಧಾಮ: ಸಜ್ಜನ್ ಕೆ.ಜಾರ್ಜ್
ಕ.ಪ್ರ.ವಾರ್ತೆ ಬೆಂಗಳೂರು ಮೇ 16
ಹೆಣ್ಣು ಮಕ್ಕಳ ಸಾವು ತಡೆಯುವ ಹಾಗೂ ಅವರ ಅಭಿವೃದ್ಧಿಗಾಗಿ ಮದರ್ ತೆರೆಸಾ ಮಕ್ಕಳ ನಿಧಿ (ಎಂಟಿಸಿಎಫ್) ಸಂಸ್ಥೆ ರಾಜ್ಯದಲ್ಲಿ ಹೊಸ ಯೋಜನೆಗಳನ್ನು ಆರಂಭಿಸಲಿವೆ.
ಯೋಜನೆಯ ಪ್ರಥಮ ಹಂತವಾಗಿ ಕುಣಿಗಲ್‌ನಲ್ಲಿನ ದಯಾಭವನದಲ್ಲಿ 35 ಹಾಸಿಗೆಯುಳ್ಳ ಆಶೀ ಎಲಿಜ ಸಂಜನ್ ಹೆಸರಿನ ವಿಶ್ರಾಂತಿಧಾಮ ನಿರ್ಮಿಸಲು ಮುಂದಾಗಿದೆ. ಅಮ್ಮಂದಿರ ದಿನಾಚರಣೆ ಅಂಗವಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ದೇಶಿಸಿ ಮಾತನಾಡಿದ ಎಂಟಿಸಿಎಫ್ ಅಧ್ಯಕ್ಷ ಡಾ.ಸಜ್ಜನ್ ಕೆ.ಜಾರ್ಜ್ ಈ ವಿಷಯ ತಿಳಿಸಿದರು.  ತಾವು ಈ  ಹಿಂದೆ ಕುಣಿಗಲ್‌ನ ದಯಾಭವನಕ್ಕೆ ಭೇಟಿ ನೀಡಿದಾಗ ಅಲ್ಲಿ ರೋಗಿಗಳಿಗೆ ಹಾಸಿಗೆಗಳ ಕೊರತೆ ಇರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು. ಇದರೊಂದಿಗೆ, ರಕ್ತದಾನ ಶಿಬಿರಗಳನ್ನು ಕೂಡ ನಡೆಸುವ ಯೋಜನೆಯಿದೆ ಎಂದರು.  ದೇಶದಲ್ಲಿ ಹೆಚ್ಚುತ್ತಿರುವ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಸಾವುಗಳನ್ನು ತಡೆಯುವ ಸಲುವಾಗಿ ದೇಶಾದ್ಯಂತ ವಿಶೇಷ ಅಭಿಯಾನ ಆರಂಭಿಸಲಾಗುವುದು. ಇದಕ್ಕಾಗಿ ನಮ್ಮ ಸಂಸ್ಥೆಯೊಂದಿಗೆ ಕಾಶ್ಮೀರ, ಒಡಿಶಾ ಸೇರಿದಂತೆ ಇತರ ರಾಜ್ಯಗಳ ಪ್ರತಿನಿಧಿಗಳು ಕೈಜೋಡಿಸಲಿದ್ದಾರೆ. ನಗರದ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಕೂಡ ನಮ್ಮೊಂದಿಗೆ ಭಾಗಿಯಾಗಲಿದ್ದಾರೆ ಎಂದರು. ಇತ್ತೀಚಿನ ಸಮೀಕ್ಷೆಯ ಪ್ರಕಾರ, ಒಂದು ವಾರದ ಅವಧಿಯಲ್ಲಿ ಮಧ್ಯಪ್ರದೇಶದ 32, ಒರಿಸ್ಸಾದಲ್ಲಿ 30 ಮಕ್ಕಳು ಮರಣ ಹೊಂದಿವೆ. ಇದು ಆತಂಕಕಾರಿ ಘಟನೆ. ಇದನ್ನು ತಡೆಯುವ ಸಲುವಾಗಿ ಒಡಿಶಾದ ಕಲಹಂಡಿ ಎಂಬಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳನ್ನು ಪೋಷಿಸಿ ಪರಾಂಬರಿಸುವ ಯೋಜನೆ ' ದಿ ಸೇಫ್ ಸರಂಡರ್ ಲೊಕೇಷನ್‌' ಜಾರಿಗೆ ತರಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement