ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ

Srinivasa Murthy VN
Updated On : 21 May 2013, 10:33 am

ಕ.ಪ್ರ.ವಾರ್ತೆ ತುಮಕೂರು ಮೇ 21
ನಮ್ಮ ಬೌದ್ಧಿಕ ಸಾಧನೆಗೆ ಕ್ರೀಡೆ ಸಹಾಯಕ. ಅದು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನ್ನು ಬೆಳೆಸುತ್ತದೆ ಎಂದು ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಎಚ್.ವಿ. ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಅವರು ತುಮಕೂರು ವಿಶ್ವವಿದ್ಯಾನಿಲಯವು ಆಯೋಜಿಸಿದ ಅಂತರ ವಿಭಾಗ ಸ್ನಾತಕೋತ್ತರ ಪದವಿ ಕ್ರೀಡಾಕೂಟ 2012 -13 ರ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆಗೋಸ್ಕರ ಕ್ರೀಡೆಯಲ್ಲ.  ಸಮಾಜದ ಒಳಿತಿಗಾಗಿ ಕ್ರೀಡೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಅತ್ಯಗತ್ಯ: ಕ್ರೀಡಾ ಪಟುಗಳ ಬೇಡಿಕೆಗಳನ್ನು ಈಡೇರಿಸಲು ಆರಂಭದಲ್ಲಿ ವಿಶ್ವವಿದ್ಯಾನಿಲಯಕ್ಕೆ ಸಾಧ್ಯವಾಗಿರಲಿಕ್ಕಿಲ್ಲ. ಆದರೆ ಇತ್ತೀಚೆಗೆ ವಿಶ್ವವಿದ್ಯಾನಿಲಯವು ಕ್ರೀಡಾ ಚಟುವಟಿಕೆಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದೆ. ಕ್ರೀಡೆ ಕೇವಲ ಪಠ್ಯೇತರ ಚಟುವಟಿಕೆಯಲ್ಲ,  ಕ್ರೀಡೆಯಿಂದ ಪಠ್ಯಚಟುವಟಿಕೆಗಳಿಗೂ ಲಾಭವಾಗುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪತ್ರಕರ್ತ ಚಿ.ನಿ ಪುರುಷೋತ್ತಮ್ ಅವರು ನಾನು ಕ್ರೀಡಾಪಟುವಲ್ಲ.  ಕ್ರೀಡಾಭಿಮಾನಿ. ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆ ಅತ್ಯಗತ್ಯವಾಗಿದೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳ ಸವಾಂರ್ಗೀಣ ಬೆಳವಣಿಗೆಗೆ ಕ್ರೀಡೆ ಅವಶ್ಯಕ ಎಂದು ಹೇಳಿದರು. ಇವತ್ತು ಯುವ ಜನಾಂಗ ಜಾಗೃತವಾಗಬೇಕಿದೆ, ಸಮಾಜದಲ್ಲಿ ಮಾನವೀಯ ಮೌಲ್ಯಗಳು ಬೆಳೆಯಬೇಕು. ವಿದ್ಯಾರ್ಥಿ ಓದಿ ಡಾಕ್ಟರ್, ಎಂಜಿನಿಯರ್ ಏನಾದರಾಗಲಿ ಮೊದಲು ಆತ ಮನುಷ್ಯನಾಗಬೇಕು. ವೃದ್ಧ ತಂದೆ ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳದ ಯುವ ಜನಾಂಗವನ್ನು ನಾವೀಗ ಕಾಣುತ್ತಿದ್ದೇವೆ. ಆದರೆ ದೈವ ಸಮಾನರಾದ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಮಾನವೀಯ ಮೌಲ್ಯಗಳನ್ನು ಯುವ ಜನಾಂಗ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಬಹುಮಾನ ವಿತರಣೆ: ಅಂತರ ವಿಭಾಗ ಕ್ರೀಡಾಕೂಟದ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಬಹುಮಾನ ವಿತರಿಸಲಾಯಿತು. ಪುರುಷ ವಿಭಾಗದ ಅಥ್ಲೇಟಿಕ್ ಚಾಂಪಿಯನ್‌ಶಿಪ್ ಅನ್ನು ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಶ್ರೀನಿವಾಸ ಮೂರ್ತಿ ಪಡೆದರೆ, ಮಹಿಳಾ ವಿಭಾಗದ ಅಥ್ಲೇಟಿಕ್ ಚಾಂಪಿಯನ್‌ಶಿಪ್ ಅನ್ನು ಸ್ನಾತಕೋತ್ತರ ವಾಣಿಜ್ಯ ವಿಭಾಗದ ಯಶೋಧರಾ ಎಸ್.ಜೆ. ಪಡೆದರು. ವಿಶ್ವವಿದ್ಯಾನಿಲಯ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಪಡೆಯಿತು. ವಿಶ್ವವಿದ್ಯಾನಿಲಯ ಕ್ರೀಡಾ ಕಾರ್ಯದರ್ಶಿ ಡಾ.ಎ.ಎಂ.ಮಂಜುನಾಥ,  ಸ್ನಾತಕೋತ್ತರ ವಿಭಾಗಗಳ ನಿರ್ದೇಶಕ ಡಾ. ಎಂ.ಜಯರಾಮು, ಡೀನ್ ಡಾ.ಪಿ.ಪರಮಶಿವಯ್ಯ , ಹಣಕಾಸು ಅಧಿಕಾರಿ ಸುರೇಶ ಬಿ.ಕೆ ಮತ್ತಿತರರು ಭಾಗವಹಿಸಿದ್ದರು. ಕಿರಣ.ಎಸ್.ಎನ್ ನಿರೂಪಿಸಿದರು. ಪ್ರಾಸ್ತವಿಕ ಹಾಗೂ ಸ್ವಾಗತ ಭಾಷಣವನ್ನು ಡಾ.ಎ.ಎಂ.ಮಂಜುನಾಥ ಮಾಡಿದರೆ, ಯಶೋಧರಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement