ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ಶ್ರಮ ಸಂಸ್ಕೃತಿ ಉಳಿಸಲು ಸರ್ಕಾರ ಮುಂದಾಗಲಿ'

Srinivasa Murthy VN
Updated On : 21 May 2013, 10:33 am

ಕ.ಪ್ರ.ವಾರ್ತೆ ತುಮಕೂರು ಮೇ 21
ಶ್ರಮ ಸಂಸ್ಕೃತಿ ಉಳಿಸಲು ಸರ್ಕಾರಗಳು ಮುಂದಾಗಬೇಕಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಅವರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ವತಿಯಿಂದ ಶಿರಾದ ಡಾ. ಅಂಬೇಡ್ಕರ್ ಭವನದಲ್ಲಿ ಮೇ ದಿನಾಚರಣೆ ಕಾರ್ಯಕ್ರಮ ಮತ್ತು ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ದುಡಿಯುವ ಜನ ಬೆಲೆ ಏರಿಕೆ, ಬರಗಾಲ, ನಿರುದ್ಯೋಗ, ಬಡತನದಿಂದ ತತ್ತರಿಸಿದ್ದು ತೀವ್ರ
ಯಾತನಾಮಯ ಜೀವನಕ್ಕೆ ತುತ್ತಾಗಿದ್ದಾರೆ. ಕೇವಲ ಭರವಸೆಗಳಿಂದ ಮಾತ್ರ ಜನರ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಅವರನ್ನು ಸರ್ಕಾರಗಳು ದುಡಿಮೆಗಚ್ಚಿಸಿ ಯೋಗ್ಯ ಕೂಲಿ ಸಿಗುವಂತೆ ಮಾಡಿ ಶ್ರಮ ಸಂಸ್ಕೃತಿ ಉಳಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಕಟ್ಟಡ ಕಾರ್ಮಿಕ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಉಮೇಶ್ ಮಾತನಾಡಿ ಮೇ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗದೆ ಎಲ್ಲಾ ಜನರ ಐಕ್ಯತೆ ಮತ್ತು ಸೌಹಾರ್ದತೆ ಬೆಸೆಯುವಂತಾಗಬೇಕು. ಈ ಮೂಲಕ ಜನರು ಸಂಘಟನೆಗೊಂಡು ತಿಳುವಳಿಕೆ ಬೆಳೆಸಿಕೊಳ್ಳಬೇಕು ಮತ್ತು ಅಧಿಕಾರ ನಡೆಸುತ್ತಿರುವ ಸರ್ಕಾರಗಳ ಆಡಳಿತ ಜನಪರವಾಗುವಂತೆ ಮಾಡಲು ಇದು ಅತ್ಯಂತ ಮಹತ್ವದಾಗಿದ್ದೆ. ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರು ದೇಶಾದ್ಯಂತ ವಿಸ್ತಾರಗೊಂಡಿರುವ ಸಿಐಟಿಯು ಸಂಘಟನೆ ಜೊತೆ ಸಮ್ಮಿಲನಗೊಂಡರೆ ಇದು ಸಾಧ್ಯವಾಗುತ್ತದೆ ಎಂದು ಕರೆ ನೀಡಿದರು. ಶಿರಾ ತಾಲೂಕು ಅಂಗನವಾಡಿ ಮುಖಂಡರಾದ ನಾಗರತ್ನ, ಶಿರಾ ತಾಲೂಕು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಐಟಿಯುನ ಮುಖಂಡರಾದ ರಂಗನಾಥಪ್ಪ, ತಿಪ್ಪೇಸ್ವಾಮಿ, ವೀರಭದ್ರಸ್ವಾಮಿ, ರಾಮಚಂದ್ರಪ್ಪ, ಈ.ಉಮೇಶ್ ಮುಂತಾದವರು ವೇದಿಕೆಯಲ್ಲಿದ್ದರು. ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತು. ಹಾಗೂ ಹೆಚ್ಚಳವಾದ ಸೌಲಭ್ಯಗಳ ಬಗ್ಗೆ ವಿವರಿಸಿ ಶಿರಾ ತಾಲೂಕು ಸಂಘಟನಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ತಿಪ್ಪೇಸ್ವಾಮಿಯವರು ಸ್ವಾಗತಿಸಿ ಹನುಮಂತರಾಯಪ್ಪನವರು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement